SearchBrowseAboutContactDonate
Page Preview
Page 386
Loading...
Download File
Download File
Page Text
________________ ಅಷಮಾಶ್ವಾಸಂ / ೩೮೧ ಕಳಪೆ ನಾಕಲೋಕದ್ವಾರಮಾಗಿರ್ದ ಗಂಧಮಾದನಗಿರಿಗೆವಂದು ಕಾರ್ಗಾಲದ ಬರವಂ ಚಾದಗೆ ಪಾರ್ವಂತೆ ತನ್ನ ಬರವನೆ ಮಾರುತ್ತಿರ್ದ ಧರ್ಮಪುತ್ರನ ಮರುತ್ತುತನ ಪಾದಕಮಲಂಗಳಂ ನಿಜಮಕುಟಮರೀಚಿಗಳಿಂದಮರ್ಚಿಸಿ ತದೀಯಾಶೀರ್ವಚನಮನಾಂತು ತನಗ ಪೆಡವಟ, ನಕುಳ ಸಹದೇವರಿರ್ಬರುಮನಂ ಪರಸಿ ಬಟಿಯಮಿಂದ್ರಕೀಲನಗೇಂದ್ರದೊಳೀಶ್ವರನ ವರ ಪ್ರಸಾದದಿಂ ಪಡೆದ ದಿವ್ಯಾಸ್ತಮಂ ತೋಟಿ ತನ್ನನಿಂದ್ರನೊಡಗೊಂಡು ಪೋದುದುಮನಿಂದ್ರಲೋಕದೊಳಾತನಲ್ಲಿ ಪಡೆದ ಮಹಿಮಯುಮನಳಿಯ ಪೇಟ್ಟು ನಾವಿಲ್ಲಿರಲ್ವೇಡ ದೈತವನದೊಳಿರ್ಪ೦ ಬನ್ನಿಮಂದು ಮಾತಳಿಯಂ ಬೀಳ್ಕೊಟ್ಟು ಕಟಿಪಿ ನಿಜಪರಿಜನಸಹಿತಂ ಬಂದು ಸುಖಮಿರ್ಪನ್ನೆಗಮೊಂದು ದಿವಸವೊಂದು ಮಾಯಾ ಮತ್ತಹಸ್ತಿಮ|| ಮಸಕಂ ಕಾಯ್ದು ಜವಂ ಜವಂಗಮಿರಿರೊಳ್ ನೋಡಲಗುರ್ವಾಗೆ ಮಾಂ ದಿಸಿಮಾ ವಂದುದು ಕೊಂದುದೆಂದು ಭಯದಿಂ ವಿಪ್ರರ್ ತೆರಳೊಡೆ ತಾ | ಪಸರಂ ಬೆರ್ಚಿಸಿ ತಳಿ ಬೇಳೂರಣಿಯಂ ಕೊಂಡಾಶ್ರಮಕ್ಕಿಂತು ಬೇ ವಸಮಂ ಮಾಡುವುದಾಯದೊಂದು ವಿಭವಂ ಮತ್ತೇಭವಿಕ್ರೀಡಿತಂ | ೩೭ ವ|| ಆಗಳಾ ಮದಾಂಧಗಂಧಸಿಂಧುರದ ಕೋಳಾಹಳಮಂ ತಾಪಸರ್‌ ಬಂದು ಯುಧಿಷ್ಠಿರಂಗಪಿ ನೀಮಮಗದಲ್ಲಿ ಕೈಗೆ ಪೋದರಣಿಯಂ ತಂದೀಯದಾಗಳಿಷ್ಟಿ ವಿಘ್ನಂಗಳಂ ಮಾಡಿದಿರೆಂದೊಡಚ್ಚರುಂ ಪ್ರಚಂಡಕೋದಂಡಹಸ್ತರ್ ಕಾಳಕಾಳಸ್ವರೂಪಮಂ ಕೆಲ್ಗೊಂಡು ಸ್ವರ್ಗಲೋಕದ ಬಾಗಿಲಾಗಿದ್ದ ಗಂಧಮಾದನಪರ್ವತಕ್ಕೆ ಬಂದನು. ವರ್ಷಾಕಾಲದ ಆಗಮನವನ್ನು ಚಾತಕಪಕ್ಷಿಯು ನಿರೀಕ್ಷಿಸುವಂತೆ ತನ್ನ ಬರವನ್ನೇ ಎದುರು ನೋಡುತ್ತಿದ್ದ ಧರ್ಮರಾಜ ಮತ್ತು ಭೀಮರ ಪಾದಕಮಲಗಳನ್ನು ತನ್ನ ಕಿರೀಟದ ಕಿರಣಗಳಿಂದ ಪೂಜಿಸಿ ಅವರ ಆಶೀರ್ವಾದವನ್ನು ಧರಿಸಿದನು. ತನಗೆ ನಮಸ್ಕಾರಮಾಡಿದ ನಕುಲಸಹದೇವರಿಬ್ಬರನ್ನೂ ಪ್ರೀತಿಯಿಂದ ಆಶೀರ್ವಾದಮಾಡಿದನು. ಆನಂತರ ಇಂದ್ರಕೀಲಪರ್ವತದಲ್ಲಿ ಈಶ್ವರನ ವರಪ್ರಸಾದದಿಂದ ಪಡೆದ ದಿವ್ಯಾಸ್ತ್ರ (ಪಾಶುಪತಾಸ್ತುವನ್ನು ತೋರಿ ತನ್ನನ್ನು ಇಂದ್ರನು ಜೊತೆಯಲ್ಲಿ ಕರೆದುಕೊಂಡು ಹೋದುದನ್ನೂ ಇಂದ್ರಲೋಕದಲ್ಲಿ ಇಂದ್ರನಿಂದ ಪಡೆದ ಮಹಿಮೆ (ಗೌರವ) ತಿಳಿಯುವ ಹಾಗೆ ವಿಸ್ತಾರವಾಗಿ ಹೇಳಿದನು. ನಾವಿಲ್ಲಿರುವುದು ಬೇಡ ದೈತವನದಲ್ಲಿರೋಣ ಬನ್ನಿ ಎಂದು ಹೇಳಿ, ಮಾತಲಿಯನ್ನು ಕಳುಹಿಸಿಕೊಟ್ಟು ತನ್ನ ಬಂಧುಗಳ ಸಮೇತ ದೈತವನಕ್ಕೆ ಬಂದು ಸುಖವಾಗಿದ್ದನು. ೩೭. ಹಾಗಿರುವಾಗ ರಭಸ ಕೋಪ ಮತ್ತು ವೇಗದಲ್ಲಿ ಯಮನಿಗೂ ಅದರ ಎದುರಿನಲ್ಲಿ ನಿಂತು ನೋಡುವುದಕ್ಕೆ ಭಯಂಕರವಾಗುವ ಹಾಗೆ ಇರುವ ಮಾಯಾಗಜವು ಬಂದಿತು! ತಡೆಯಿರಿ; ಕೊಂದುಹಾಕುತ್ತಿದೆ' ಎಂದು ಬ್ರಾಹ್ಮಣರು ಭಯದಿಂದ ಗುಂಪಾಗಿ ಓಡಿದರು. ತಪಸ್ವಿಗಳನ್ನು ಹೆದರಿಸಿ ನೂಕಿ ಅವರು ಹೋಮಮಾಡುವುದಕ್ಕೆ ಸಹಾಯಕವಾದ ಅರಣಿಯನ್ನು (ಅಗ್ನಿಯನ್ನುಂಟುಮಾಡಲು ಉಪಯೋಗಿಸುವ ಕಡೆಗೋಲು) ಕೊಂಡು ಓಡಿತು. ವ|| ಆಗ ಆ ಮದ್ದಾನೆಯ ಕೋಲಾಹಲವನ್ನು ತಪಸ್ವಿಗಳು ಬಂದು ಧರ್ಮರಾಜನಿಗೆ ತಿಳಿಸಿ ಅದು ಕೊಂಡು ಹೋಗಿರುವ ಅರಣಿಯನ್ನು ನೀವು ನಮಗೆ ತಂದುಕೊಡದಿದ್ದರೆ ಯಜ್ಞವಿಘ್ನಮಾಡಿದವರಾಗುತ್ತೀರಿ ಎಂದರು. ಅಯ್ದು ಜನವೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy