SearchBrowseAboutContactDonate
Page Preview
Page 376
Loading...
Download File
Download File
Page Text
________________ ಚಂ|| ಅಷ್ಟಮಾಶ್ವಾಸಂ | ೩೭೧ ವನಚರನಾಗಿ ಶಂಭು ಗಿರಿಜಾತೆಯನೋತು ಪುಳಿಂದಿ ಮಾಡಿ ನ ಚಿನ ಗುಹನ ಕಿರಾತಬಲ ನಾಯಕನಾಗಿರೆ ಮಾಡಿ ಭೂತಮು | ಇನಿತುಮನಯ ಬೇಡವಡ ಮಾಡಿ ಯುಗಾಂತ ಪಯೋಧರಾ ಭೂಂ ಕನೆ ಕವಿವಂದದಿಂ ಕವಿದನಾ ಬನಮಂ ಮೃಗಯಾನಿಧಾನಮಂ ೧೪ ವl ಅಂತು ಕವಿದೊಡಾ ಕಳಕಳವಯಿಸಿ ವರಾಹರೂಪದ ಮೂಕದಾನವ ತರಳ ಪೊರಳೆ ವಾರಿಧಿಗಳ ಕಲಂಕಿದುವುರ್ದ ಮಯ್ಯನುದಗ್ರಮಂ ದರಮದಂದಲುಗಿತ್ತು ಬಾಯ್ದೆಯ ದಿಗ್ಗಜಂ ಪಳಗಿಟ್ಟುವಾಂ | ತರದೆ ತೊಟ್ಟನೆ ದಾಡೆಗುಡ್ಡೆ ಕಲ್ಲು ತಾರಗೆಗಳ ನಭಂ ಬೆರಸು ಬಿಚ್ಚುವು ಪೆಂಪಿದೇಂ ಪಿರಿದಾಯ್ಯೋ ದೈತ್ಯವರಾಹನಾ ಗ ೧೫ . ವlು ಅಂತಾ ವರಾಹನಾದಿವರಾಹನಾದ ಮುರಾಂತಕನುಮನಿಸಿ ನೆಲಂ ಕಪ್ಪಂಗವಿಯು ಮಾಗೆ ಬರೆ ಪಗೆ ಕೃತಕ ಕಿರಾತನಟ್ಟುತ್ತುಂ ಬರೆ ತನ್ನತ್ತ ಮೊಗದೆ ಬರ್ಪುದಂ ಕಂಡಮೋಘಾಸ್ತ್ರ ಧನಂಜಯನೊಂದಮೋಘಾಸ್ತಮನಕ್ಕಣಬಾಣಧಿಯಿಂದಮುರ್ಚಿಕೊಂಡು ಗಾಂಡೀವದೊಳ್ ಪೂಡಿ ಕೀಟಲೆ ಮಾಡಿ ಮಾಯಾಯುದ್ದದಲ್ಲಿ ಆತನ ಸಾಹಸದ ಚಲದ ಬಲದ ಬಿಲ್ಲಾಳನದ ಶಕ್ತಿಯನ್ನೂ ಪರೀಕ್ಷಿಸುತ್ತೇನೆ; ಅನಂತರ ಅವನಿಗೆ ವರದ (ವರವನ್ನು ಕೊಡುವವ) ನಾಗುತ್ತೇನೆ ಎಂದು ನಿಶ್ಚಯಿಸಿದನು. ೧೪. ಈಶ್ವರನು ತಾನು ಬೇಡರವನಾಗಿಯೂ ಪಾರ್ವತಿಯನ್ನು ಪ್ರೀತಿಯಿಂದ ಬೇಡಿತಿಯನ್ನಾಗಿಯೂ ತನ್ನ ನಂಬಿಕೆಗೆ ಪಾತ್ರನಾದ ಷಣ್ಮುಖನನ್ನು ಬೇಡರ ಸೈನ್ಯಕ್ಕೆ ನಾಯಕನನ್ನಾಗಿಯೂ ಮಾಡಿ ತನ್ನಲ್ಲಿರುವಷ್ಟು ಭೂತಗಣವನ್ನು ಬೇಡರ ಪಡೆಯನ್ನಾಗಿಸಿದನು. ಪ್ರಳಯಕಾಲದ ಮೇಘಸಮೂಹವು ಇದ್ದಕ್ಕಿದ್ದಂತೆ ಕವಿಯುವ ಹಾಗೆ ಬೇಟೆಗೆ ಆಧಾರವಾದ ಆ ಕಾಡನ್ನು ಮುತ್ತಿದನು. ವ|| ಆ ಕೋಲಾಹಲಶಬ್ದಕ್ಕೆ ಅಸಮಾಧಾನಪಟ್ಟು ಹಂದಿಯ ರೂಪದಲ್ಲಿದ್ದ ಆ ಮೂಕದಾನವನು ೧೫. ಹೊರಳಲು ಸಮುದ್ರಗಳು ಕಲಕಿಹೋದವು, ಮೆಯ್ಯನ್ನು ಉಜ್ಜಲು ಎತ್ತರವಾದ ಮಂದರಪರ್ವತವೂ ಅಲುಗಾಡಿತು. ಶಬ್ದಮಾಡಲು ದಿಗ್ಗಜಗಳೂ ಹಿಮ್ಮೆಟ್ಟಿದುವು. ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಕೋರೆಹಲ್ಲುಗಳನ್ನು ಕಡಿಯಲು ನಕ್ಷತ್ರಗಳು ಆಕಾಶಸಹಿತ ಕಳಚಿಬಿದ್ದವು. ಹಂದಿಯ ರೂಪದಲ್ಲಿದ್ದ ಆ ರಾಕ್ಷಸನ ಹಿರಿಮೆಯೂ ಅದ್ಭುತವಾಯಿತು. ವ|| ಆ ಹಂದಿಯು ಆದಿವರಾಹಾವತಾರ ಮಾಡಿದ ಕೃಷ್ಣನನ್ನು ಹೀಯಾಳಿಸಿ (ತಿರಸ್ಕರಿಸಿ) ನೆಲವು ಮುಚ್ಚುವ ಮುಚ್ಚಳವಾಗುವ ಹಾಗೆ (ನೆಲವನ್ನಲ್ಲಾಡಿಸುತ್ತ ಬರುತ್ತಿರಲು ಹಿಂಭಾಗದಿಂದ ಕೃತಕ ಕಿರಾತನಾದ ಶಿವನು ಅದನ್ನಟ್ಟಿಕೊಂಡು ಬಂದನು. ತನ್ನ ಕಡೆಗೆ ಬರುತ್ತಿರುವುದನ್ನು ಧನಂಜಯನು ಕಂಡು ಒಂದು ಅಮೋಘವಾದ ಬಾಣವನ್ನು ತನ್ನ ಅಕ್ಷಯವಾದ ಬತ್ತಳಿಕೆಯಿಂದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy