SearchBrowseAboutContactDonate
Page Preview
Page 375
Loading...
Download File
Download File
Page Text
________________ ೩೭೦ | ಪಂಪಭಾರತಂ ಕ೦ll ಆರೋಪಿತಚಾಪಂ ಸಂ ಧಾರಿತಕವಚಂ ಧೃತೂಗ್ರಶರಧಿಯುಗಂ ತಾ | ನಾರಂದಮಲ್ಲವಂ ತ್ರಿಪು ರಾರೀ ಕೇಳ್ ತ್ರಿಪುರಮಿಸುವ ನಿನ್ನನೆ ಪೋಲ್ವಂ || ವ|| ಎಂಬುದುಮದಲ್ಲಮಂ ಕೇಳ್ತಾತನವನೆಂಬುದನಟಿಯಲೆಂದುಕಂ|| ಧ್ಯಾನದೊಳಭವಂ ನೆಅದಿನಿ ಸಾನುಮನರೆ ಮುಚ್ಚಿ ಕಣ್ಣಳಂ ನಿಶ್ಚಳಿತಂ | ತಾನಿರ್ದು ಮಣಿದು ಕೆಂದಿದ ಮಾನಂ ತಳ್ಳಾಡದಿರ್ದ ಮಡುವ ಪೋಲ್ಕಂ || ೧೩ - ವ|| ಅಂತು ಫೋಲ್ಕು ದಿವ್ಯಜ್ಞಾನದೊಳ್ ಮಹೇಶ್ವರನುದಾರಮಹೇಶ್ವರನಪ್ಪುದನಳಿದು ಬೆರಲಂ ಮಿಡಿದು ಮುಗುಳ್ಳಗೆ ನಕ್ಕು ನೆನೆದಾತಂಗೆ ತಕ್ಕುದನಾನೆ ಬಲ್ಲೆನೆಂದು ಮುನೀಂದ್ರ ವೃಂದಮಂ ಪೋಗಲ್ವೆಟ್ಟು ಮುನ್ನ ದೇವೇಂದ್ರಂ ತನಗೆ ಮೂಕದಾನವನ ಪುಯ್ಯಲಂ ಬಿನ್ನಪಂಗೆ ಯುದನವಧಾರಿಸಿ ಮೂಕದಾನವನಾದಿವರಾಹರೂಪದೊಳಿರ್ದುದುಮನಳಿದು ಮನುಜ ಮಾಂಧಾತನಿಂದಮಾ ದೈತ್ಯನಂ ಕೊಲಿಸಲುಂ ಸಾಹಸಾಭರಣನೊಳೇನಾನುಮೊಡಂಬಡಂ ಮಾಡಿ ಮಾಯಾಯುದ್ಧದೊಳಾತನ ಸಾಹಸದ ಬಲದ ಬಿಲ್ಲಾಳನದಳವಿಗಳನಳೆದು ನೋಡಿ ವರದನಪ್ಪನೆಂಬುದುಮಂ ಬಗೆದು ಕಾಣದಿರುವ ಶತ್ರುಸಂಹಾರಕನಾದ ಅವನು ತಪಸ್ಸಿಗೆಂದು ನಿಲ್ಲಲು ಅವನ ತಪಸ್ಸಿನಿಂದುಂಟಾದ ಬೆಂಕಿಯಿಂದ ಬೆಂಕಿಯು ಕಾಡಕಿಚ್ಚನ್ನು ಸುಡುವ ಹಾಗೆ ನಮ್ಮ ತಪಸ್ಸುಗಳೆಲ್ಲ ಬೆಂದು ಹೋದುವು. ಬೇರೆ ಯಾವ ಪರ್ವತದಲ್ಲಿರೋಣ, ನಾವು ಇರಬೇಕಾದ ಸ್ಥಳವನ್ನು ಶಿವನೇ ನೀನು ಹೇಳು. ೧೨. ಹೆದೆಯೇರಿಸಿದ ಬಿಲ್ಲು, ತೊಟ್ಟ ಕವಚ, ಬೆನ್ನಲ್ಲಿ ಧರಿಸಿರುವ ಭಯಂಕರವಾದ ಎರಡು ಬತ್ತಳಿಕೆಗಳು. ಇವನ್ನುಳ್ಳ ಅವನು ಬೇರೆಯಾದ ರೀತಿಯವನೂ ಅಲ್ಲ. ಪರಶಿವನೇ, ತ್ರಿಪುರಾಸುರಸಂಹಾರಕ್ಕೆ ಬಾಣಸಂಧಾನ ಮಾಡಿದ ನಿನ್ನನ್ನೇ ಹೋಲುತ್ತಾನೆ ಎಂದರು. ವ|| ಅದೆಲ್ಲವನ್ನೂ ಕೇಳಿ ಅವನು ಯಾರೆಂಬುದನ್ನು ತಿಳಿಯಬೇಕೆಂದು ೧೩. ಶಿವನು ಧ್ಯಾನಮಗ್ನನಾಗಿ ಕಣ್ಣುಗಳನ್ನು ಅರ್ಧಮುಚ್ಚಿ ನಿಶ್ಚಲಚಿತ್ತನಾಗಿದ್ದು ಮೈಮರೆತು ಮಲಗಿರುವ ಮೀನು ಗಳಿಂದ ಕೂಡಿದ ನಿಶ್ಚಲವಾಗಿರುವ ಮಡುವಿಗೆ ಸಮಾನನಾದನು. ವ|| ಹಾಗೆ ಹೋಲಿ ತನ್ನ ದಿವ್ಯಜ್ಞಾನದಿಂದ ಶಿವನು,ತಪಸ್ಸು ಮಾಡುತ್ತಿದ್ದವನು ಉದಾರಮಹೇಶ್ವರನಾದ ಅರ್ಜುನನಾಗಿರುವುದನ್ನು ತಿಳಿದನು. (ಸಂತೋಷದಿಂದ) ಬೆರಳನ್ನು ಚಿಟಿಕಿಸಿ ಹುಸಿನಗೆ ನಕ್ಕು ಜ್ಞಾಪಿಸಿಕೊಂಡು ಆತನಿಗೆ ಯೋಗ್ಯವಾದುದನ್ನು ಮಾಡುವುದಕ್ಕೆ ನಾನು ಬಲ್ಲೆ, ನೀವು ಹೊರಡಿ ಎಂದು ಋಷಿಶ್ರೇಷ್ಠರ ಸಮೂಹವನ್ನು ಕಳುಹಿಸಿಕೊಟ್ಟನು. ಹಿಂದೆ ದೇವೇಂದ್ರನು ತನಗೆ ಮೂಕದಾನವನಿಂದಾದ ಕೇಡನ್ನು ತನ್ನೊಡನೆ ವಿಜ್ಞಾಪಿಸಿಕೊಂಡು ದನ್ನು ಜ್ಞಾಪಿಸಿಕೊಂಡನು. ಆ ಮೂಕದಾನವನು ಆದಿವರಾಹರೂಪದಲ್ಲಿರುವುದನ್ನು ತಿಳಿದು ಅರ್ಜುನನಿಂದ ಆ ದೈತ್ಯನನ್ನು ಕೊಲ್ಲಿಸುತ್ತೇನೆ. ಅರ್ಜುನನೊಡನೆ ಏನಾದರೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy