SearchBrowseAboutContactDonate
Page Preview
Page 353
Loading...
Download File
Download File
Page Text
________________ ೩೪೮) ಪಂಪಭಾರತಂ ಕoll ಕುಸಿದಂ ರಿಪುವಿಜಯದ ನಿ ದ್ರಿಸಿದಂ ಕಂಡಂದಿನಂದಮಂ ತಪ್ಪಿದನಾ | ಲೈಸಕಗಿಯ ನುಡಿದನೆಂಬೀ ಪಿಸುಣನಣಂ ಕೇಳೆನಿಲ್ಲ ಬೀಡಿನೊಳವನಾ, ನೆಗರಿಗನ ಸಾಹಸವೂ ಗೊರೆ ಕೆಲದವರ ಮಾತಿನೊಳ್ ತನ್ನ ಮನಂ | ಬುಗೆ ಮಂತ್ರಪದಕ್ಕುರಗಂ ಸುಗಿವಂತೆವೊಲಗಿದು ಸುಗಿದು ತಲೆಗರೆದಿರ್ಪಂ || ಅಳೆವಿಂತು ರಾಜಕಾರ್ಯದ ತಜನನಗಳಿವಂತು ಮೊಗ್ಗೆ ದೇವರ ಮುಂದಾ | ನಡೆಯೆಂ ಪಿರಿದುಂ ಗಣಪಲ್ ಮಾಸೊಂದಿದನಲ್ಲನಹಿತನೆಚ್ಚಿತ್ತಿರ್ದ೦ | * ವll ಎಂದು ಬಿನ್ನಪಂಗೆಯ್ದು ಕಿರಾತದೂತಂ ಪೋಪುದುಮಾ ಮಾತೆಲ್ಲಮಂ ಕೇಳು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳಚಂn ನುಡಿವೊಡೆ ರಾಜಕಾರ್ಯ ನಯಮತ್ತಬಲಾಜನದೊಂದು ಬುದ್ಧಿಯ ತುಡುಪತಿವಂಶ ನೋಡುವೋಡಿದೊಂದಘಟಂ ಬಗವಾಗಳೆಂತು ಕೇಳ್| ನುಡಿಯದೆ ಕೆಮ್ಮಗಿರ್ದೋಡಮಿರಣಮಾಯದ ನಿಮೊಳೆನ್ನುಮಂ ನುಡಿಯಿಸಿದುವಾ ಕುರುಕುಳರ್ಕಳ ಗಯ್ಯಪರಾಧಕೂಟಗಳ್ ೧ ೪೫ ಆನೆಗಳ ಮದೋದಕದ ಧಾರಾಪ್ರವಾಹದಿಂದ ಉಂಟಾದ ಕೆಸರು ಆ ದುರ್ಯೊಧನ ರಾಜನ ಅರಮನೆಯ ಬಾಗಿಲುಗಳ ಸಮೀಪಪ್ರದೇಶದಲ್ಲಿ ಕಡಿಮೆಯೇ ಆಗಿಲ್ಲ. ೪೨. ಶತ್ರುವು ಆಡಿದ ಮಾತಿಗೆ ತಪ್ಪಿದ, ಗೆಲುವಿನಿಂದ ನಿದ್ರಿಸಿದುದನ್ನು ಕಂಡ, ಹಿಂದಿನಿಂದ ಇದ್ದ ರೀತಿಯನ್ನು ತಪ್ಪಿದ, ಸೇವೆಮಾಡುವ ವಿಷಯದಲ್ಲಿ ಕೆಟ್ಟಮಾತನಾಡಿದ ಎಂಬ ಈ ಚಾಡಿಮಾತುಗಳನ್ನೂ ಅವನ ಬೀಡಿನಲ್ಲಿ ಸ್ವಲ್ಪವೂ ಕೇಳಿಲ್ಲ. ೪೩. ಆದರೆ ಪ್ರಸಿದ್ಧನಾದ ಅರಿಕೇಸರಿಯ ಸಾಹಸವು ಒಂದೊಂದು ಸಲ ಪಕ್ಕದವರ ಮಾತಿನ ಮೂಲಕ ತನ್ನ ಮನಸ್ಸನ್ನು ಪ್ರವೇಶಿಸಲು ಮಂತ್ರಮುಗ್ಧವಾದ ಹಾವು ಹೆದರುವ ಹಾಗೆ ಹೆದರಿ ತಲೆಯನ್ನು ಬಗ್ಗಿಸಿಕೊಂಡಿರುತ್ತಾನೆ. ೪೪. ನನಗೆ ತಿಳಿದ ಸಮಾಚಾರವಿಷ್ಟು, ರಾಜಕಾರ್ಯದ ರೀತಿಯನ್ನು ತಿಳಿಯುವುದು ನನಗೆ ಸಾಧ್ಯವೇ? ಪ್ರಭುವಿನ ಮುಂದೆ ಹೆಚ್ಚಾಗಿ ಹರಟುವುದು ನನಗೆ ತಿಳಿಯದು; ಶತ್ರುವಾದ ದುರ್ಯೋಧನನು ಮೈಮರೆತಿಲ್ಲ: ಎಚ್ಚರದಿಂದಿದ್ದಾನೆ. ವ|| ಎಂದು ಬಿನ್ನವಿಸಿ ಕಿರಾತದೂತನು ಹೋಗಲು ಆ ಮಾತೆಲ್ಲವನ್ನೂ ಕೇಳಿ ಬ್ರೌಪದಿಯು ಧರ್ಮರಾಜನಿಗೆ ಹೀಗೆಂದಳು-೪೫. ಹೇಳುವುದಾದರೆ ರಾಜಕಾರ್ಯದ ರೀತಿಯಲ್ಲಿ ಸೀಜನರ ಬುದ್ದಿಯೆಲ್ಲಿ? ಎಲೈ ಚಂದ್ರವಂಶನಾದ ಧರ್ಮರಾಜನೇ ವಿಚಾರಮಾಡುವುದಾದರೆ ಈಗ ನಡೆದಿರುವ ಇದು (ಈ ಕೌರವರ ದುಶ್ಲೇಷೆ) ವಂಶಕ್ಕೆ ಹೊಂದಿಕೊಳ್ಳದಿರುವ ವಿಷಯ (ಅಸಂಗತವಾದುದು) ಕೇಳು ಯೋಚನೆಮಾಡಿ ಹೀಗೂ ಮಾತನಾಡದೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy