SearchBrowseAboutContactDonate
Page Preview
Page 352
Loading...
Download File
Download File
Page Text
________________ ಸಪ್ತಮಾಶ್ವಾಸಂ / ೩೪೭ ವ|| ಎಂದು ಸಾಯ ಸರಸಂ ನುಡಿದು ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳದು ಭಾನುಮತಿಗೆ ನಿನ್ನಾಣನುಮಂ ನಿನ್ನ ಮಯ್ತುನನುಮಂ ನೀನೂಪುಗೊಳ್ಳೆಂಬುದುಂ ದುರ್ಯೋಧನ ದಾಡೆಗಳೆದ ಕುಳಿಕನಂತೆಯುಂ ಕೊಡುಡಿದ ಮದಹಸಿಯಂತೆಯುಂ ನಖಮುಡಿದ ಸಿಂಹದಂತೆಯುಂ ಗಳಿತಗರ್ವನಾಗಿ ಪಾಂಡವರ ಮೊಗಮಂ ನೋಡಲ್ ನಾಣ್ಯ ಮದಗಜಪುರಕ್ಕೆ ಪೋಗಿ ಜೂದಿನೊಳ್ ಗೆಲ್ಲ ನೆಲನಂ ನಯಜ್ಞನಾಗಿ ತನ್ನೊಳ್ ಪಿಸಿ ದುಶ್ಯಾಸನನಂ ಯುವರಾಜನಂ ಮಾಡಿ ನಿರ್ವ್ಯಾಜಮರಸುಗೆಯುತ್ತುಮಿರ್ದನಿತ್ತ ಯುಧಿಷ್ಠಿರನಟ್ಟಿದ ಕಿರಾತತಂ ತಾಪಸ ವ್ಯಾಜನಾಗಿ ಪೋಗಿ ಸುಯೋಧನನ ವಾರ್ತೆಯೆಲ್ಲಮುಮನಳಿದು ಬಂದಜಾತಶತ್ರುಗಿಂತೆಂದು ಬಿನ್ನಪಂಗೆಯ್ದಂಚoll ಕಿವಿಗಿನಿದುಂ ನೃಪಂಗೆ ಹಿತಮಂ ನುಡಿಯಲ್ಲಿಯುಮಿಲ್ಲ ಕೇಳ ಬಿ ನೃವಿಸುವನೆನ್ನ ಕಂಡುದನೆ ಜೂದಿಯೊಳುವದಿಂದ ಗೆಲ್ಲ ನಿ | (ವನಿತಳಂ ಕರಾತಳದವೋಲ್ ತನಗಂ ಬೆಸಕೆಯ್ಕೆ ಕೆಯ್ಕೆ ಮಾ ಡುವ ನಯಮಾ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ ll೪೦ ಮ|| ಮೊದಲೊಳ್ ತಿಮದೊಪ್ಪಿ ತಪ್ಪಿದುದನೀಯೆಂದಟ್ಟಿದಂ ದಂಡನ ಟ್ಟದೆ ಸಾಮರ್ಥ್ಯದಿನಟ್ಟದೋಲೆಗೆ ಮಹಾಪ್ರತ್ಯಂತ ಭೂಪಾಳರ | ಟ್ಟಿದ ಕಾಳಿಂಗ ಗಜೇಂದ್ರ ದಾನಜಲಧಾರಾಸಾರದಿಂ ನೋಡ ಕುಂ ದಿದುದಿಲ್ಲೋಳೆಸಜಾ ಸುಯೋಧನ ನೃಷದ್ವಾರೋಪಕಂಠಗಳೊಳ್ || ೪೧ ಆ ದಿನದ ನಿಮ್ಮ ಪರಾಕ್ರಮಗಳು ಈಗ ಎಲ್ಲಿಗೆ ಹೋದವು; ಅಪ್ಪ ಬಳಲಿದಿರಲ್ಲಾ ನಿಮ್ಮ ಪರಾಕ್ರಮದ ಪ್ರಮಾಣವನ್ನು ತಿಳಿದುಕೊಂಡಿರಾ; ಛೇ, ನಿಮಗೂ ಈಗ ಈ ಪರಾಭವವುಂಟಾಯಿತೇ? ವ|| ಎಂದು ಸಾಯುವ ಹಾಗೆ ಹಾಸ್ಯಮಾಡಿ ಕಟ್ಟಿದ ಕಟ್ಟುಗಳನ್ನು ತಾನೇ ಬಿಚ್ಚಿ ಭಾನುಮತಿಗೆ ನಿನ್ನ ಗಂಡನನ್ನೂ ಮೈದುನನನ್ನೂ ಒಪ್ಪಿಸಿಕೊ ಎಂದಳು. ದುರ್ಯೋಧನನು ಹಲ್ಲುಕಿತ್ತ ಕ್ರೂರಸರ್ಪದಂತೆಯೂ ಕೊಂಬುಮುರಿದ ಮದ್ದಾನೆಯಂತೆಯೂ ಉಗುರು ಕತ್ತರಿಸಿದ ಸಿಂಹದಂತೆಯೂ ಗರ್ವಹೀನನಾಗಿ ಪಾಂಡವರ ಮುಖವನ್ನು ನೋಡಲು ನಾಚಿ ಹಸ್ತಿನಾಪುರಕ್ಕೆ ಹೋಗಿ ಜೂಜಿನಲ್ಲಿ ಗೆದ್ದ ರಾಜ್ಯವನ್ನು ನೀತಿಯುಕ್ತವಾಗಿ ಆಳುತ್ತಾ ದುಶ್ಯಾಸನನನ್ನೂ ಯುವರಾಜನನ್ನಾಗಿ ಮಾಡಿ ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಯುಧಿಷ್ಠಿರನು ಕಳುಹಿಸಿದ ಕಿರಾತದೂತನು ತಪಸ್ವಿ ವೇಷದಿಂದ ಹೋಗಿ ದುರ್ಯೊಧನನ ಸಮಾಚಾರವನ್ನೆಲ್ಲ ತಿಳಿದು ಬಂದು ಧರ್ಮರಾಯನಿಗೆ ವಿಜ್ಞಾಪಿಸಿದನು-೪೦. ಒಂದೇ ಮಾತು ಕಿವಿಗಿಂಪಾಗಿಯೂ ಶ್ರೇಯಸ್ಕರವಾಗಿಯೂ ಇರಲು ಸಾಧ್ಯವಿಲ್ಲ. ನಾನು ಕಂಡುದನ್ನು ವಿಜ್ಞಾಪಿಸುತ್ತೇನೆ. ಜೂಜಿನಲ್ಲಿ ಮೋಸದಿಂದ ಗೆದ್ದ ನಿನ್ನ ರಾಜ್ಯವು ಅಂಗಯ್ಯಲ್ಲಿರುವ ಹಾಗೆ ತನಗೆ ಆಜ್ಞಾಧಾರಕವಾಗಿರುವ ಹಾಗೆ ಮಾಡಿಕೊಳ್ಳುವ ದುರ್ಯೊಧನನ ಆ ಹೊಸರಾಜನೀತಿ ಬೃಹಸ್ಪತಿಯನ್ನೂ ಮೀರಿಸಿದೆ. ೪೧. ಮೊದಲು ನಿಷ್ಕರ್ಷೆಯಿಂದ ಒಪ್ಪಿದುದನ್ನು ಕೊಡದೆ ತಪ್ಪಿದವರಿಗೆ ಸೈನ್ಯವನ್ನಟ್ಟದೆ ಕೊಡು ಎಂದು ಸಾಮದಿಂದ ಹೇಳಿ ಕಳುಹಿಸುವನು. ರಾಜ್ಯಾಧಿಕಾರದಿಂದ ಕಳುಹಿಸಿದ ಇವನ ಆಜ್ಞಾಪತ್ರಕ್ಕೆ ರಾಜ್ಯದ ಎಲ್ಲೆಡೆಗಳಲ್ಲಿದ್ದ ಸಾಮಂತರಾಜರು ಕಳುಹಿಸಿದ ಕಳಿಂಗ ದೇಶದ ಉತ್ತಮವಾದ 23
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy