SearchBrowseAboutContactDonate
Page Preview
Page 333
Loading...
Download File
Download File
Page Text
________________ ೩೨೮ / ಪಂಪಭಾರತಂ ವl ಧೃತರಾಷ್ಟ್ರನಲ್ಲಿಗೆ ಪೋಗಿ ಚoll ಕಂ ನಿನಗೆ ಮಗಂ ಪುರಾಕೃತದ ಕರ್ಮಮೆ ಪುಟ್ಟುವವೋಲೆ ಪುಟ್ಟ ನಿ ಮಿನಿಬರುಮಂ ರಸಾತಳದೊಳದಪಂ ಪಗೆ ಪೊಲ್ಲ ಪಾಂಡು ನಂ | ದನರೊಳಹೀಂದ್ರಕೇತನನ ಬೂದಿನ ಗೆಲ್ಲಮದೆಂತುಟೆನ್ನ ನಂ ಜಿನ ಸವಿಯಂತುಟೆಂದೊಡಿನಿಸಂತದೊಳಂತಕನೆಲ್ಲಿಗಟ್ಟುಗುಂ ಪುರುಡಿಸಿಕೊಂಡೀಗಳ ನೀ ನರಸಿನ ಗರ್ವದೊಳೆ ಬೀಗಿ ಬೆಸೆಯದ ಮಗನಂ | ಕರೆದೊಪ್ಪಿಸವೇ ಯುಧಿ ಷ್ಠಿರಂಗೆ ಮುನ್ನ ಗೆಲ್ಲ ವಸ್ತುವಾಹನ ಚಯಮಂ || 2.98 ೭೬ ಮ|| ಸ || ಕದನಪ್ರಾರಂಭಶೌಂಡಂ ರಿಪುನೃಪಬಲದಾವಾನಲಂ ವೈರಿ ಭೂಭ ನದವನಾತಂಗಕುಂಭಸ್ಥಳ ದಳನಖರೋಗ್ರಾಸಿ ಪಂಚಾಸ್ಯ ಧೈರ್ಯಂ | ವಿದಿತ ಪ್ರತ್ಯಕ್ಷನಾಶಾಕರಿ ನಿಕಟತಟಶ್ರಾಂತ ದಾನಂ ಭರಂಗೆ ಯ್ದಿದಿರೊಳ್ ವಿಕ್ರಾಂತತುಂಗಂ ಹರಿಗನಿರೆ ಬಿಗುರ್ತಾಂಪನಂತಾವ ಗಂಡಂ ||೭೭ ಸಾಕಾಗಲಿಲ್ಲವೇ, ನಿಮ್ಮ ನಿಮ್ಮಲ್ಲಿಯೂ ಇದೇನಿದು ? ನಿಲ್ಲಿಸಿ ಎಂದರು. ಶತ್ರು ರಾಜರನ್ನು ಕಾಲ್ಕೆರಗಿಸಿದ ಯಮನಂದನನು ಅವರನ್ನು ಕಂಡು ಅಜ್ಞಾನನಗುಂಟಾದ ಸೋಲಿನಿಂದ ನಾನು ವಿಶೇಷ ನೊಂದಿದ್ದೇನೆ, ಈಗ ಮಾತನಾಡುವುದಕ್ಕೂ ಅವಕಾಶವಿಲ್ಲ ನಿಮ್ಮ ಮನೆಗೆ ದಯಮಾಡಿಸಿ ಎಂದನು. ಏನು ಹೇಳುವುದಕ್ಕೂ ಅಸಮರ್ಥರಾಗಿ ಅವನನ್ನು ತಪ್ಪಿಸುವುದಕ್ಕಾಗದೆ ಇಬ್ಬರೂ ಧೃತರಾಷ್ಟ್ರನಲ್ಲಿಗೆ ಬಂದು ೭೫. “ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮವೇ ಹುಟ್ಟಿದಂತೆ ಹುಟ್ಟಿದ ನಿನ್ನ ಮಗನು ನಿಮ್ಮೆಲ್ಲರನ್ನೂ ಪಾತಾಳದಲ್ಲಿ ಮುಳುಗಿಸುತ್ತಾನೆ. ಪಾಂಡುಪುತ್ರರಲ್ಲಿ ದ್ವೇಷವು ಸಲ್ಲದು (ಯೋಗ್ಯವಲ್ಲ) ದುರ್ಯೋಧನನ ಜೂಜಿನಲ್ಲಿ ಪಡೆದ ಗೆಲವು ಎಂತಹುದು ಎನ್ನುವ ಯಾದರೆ ಅದು ವಿಷದ ರುಚಿಯಂತಹುದು. ಕೊನೆಯಲ್ಲಿ ಯಮನಲ್ಲಿಗೆ ಕಳುಹಿಸಿತ್ತದೆ. ೭೬. ಈಗ ನೀನು ಅಸೂಯೆಯಿಂದಲೂ ರಾಜನೆಂಬ ಗರ್ವದಿಂದಲೂ ಉಬ್ಬಿ ಹೋಗದೆ ಮಗನನ್ನು ಕರೆದು ಮೊದಲು ಗೆದ್ದ ವಸ್ತುವಾಹನಗಳ ಸಮೂಹವನ್ನು ಧರ್ಮರಾಜನಿಗೆ ಒಪ್ಪಿಸುವಂತೆ ಹೇಳು ವ|| ಎಂದು ಮತ್ತೂ ಹೀಗೆಂದರು. ೭೭. ಯುದ್ಧೋದ್ಯೋಗದಲ್ಲಿ ಆಸಕ್ತಿಯುಳ್ಳವನೂ ಶತ್ರುರಾಜರ ಸೈನ್ಯಕ್ಕೆ ಕಾಡುಗಿಚ್ಚಿ ನಂತಿರುವವನೂ ವೈರಿರಾಜರೆಂಬ ಮದ್ದಾನೆಗಳ ಕುಂಭಸ್ಥಳವನ್ನು ಸೀಳುವ ಹರಿತವೂ ಭಂಯಕರವೂ ಆದ ಕತ್ತಿಯನ್ನುಳ್ಳ ಸಿಂಹಧೈರ್ಯವುಳ್ಳವನೂ ಇಂದ್ರಿಯಗಳಿಗೆ ಗೋಚರ ವಾದುದನ್ನೆಲ್ಲ ಚೆನ್ನಾಗಿ ತಿಳಿದಿರುವವನೂ ದಿಗ್ಗಜಗಳವರೆಗೂ ಹರಡಿರುವ ತ್ಯಾಗ ಗುಣವುಳ್ಳವನೂ ಆದ ಉನ್ನತ ಪರಾಕ್ರಮಿಯಾದ ಅರ್ಜುನನು ಆರ್ಭಟಮಾಡಿಕೊಂಡು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy