SearchBrowseAboutContactDonate
Page Preview
Page 332
Loading...
Download File
Download File
Page Text
________________ ಷಷ್ಠಾಶ್ಚಾಸಂ | ೩೨೭ ವ|| ಅಂತು ಕಾಳಿಂಗಾಂಗ ವನಸಂಭವಂಗಳಪ್ಪ ಮದಾಂಧಗಂಧಸಿಂಧುರಂಗಳುಮನಾ ಜಾನೇಯ ಕಾಂಭೋಜ ಭೂಮಿಜಂಗಳಪ್ಪ ಜಾತ್ಯಶ್ವಂಗಳುಮನೊಡ್ಡಿದಾಗಳ್ ದುರ್ಯೋಧನಂ ಬಂದಿಕಾಳನಂತ ಹೆಗೆಯುಂ ಪ್ರಣವೈದ್ಯನಂತೆ ಕೊಡಸಾರಿಯಂ ಪಿಡಿದುಂ ಸೂಳೆಯಂತೆ ಕಚಿವುಟಿವನದುಂ ರಸವಾದಿಯಂತೆ..... ಕಟ್ಟಿಯುಂ ಪೆರ್ಜೊಡೆಯಂತೆ ನುಣ್ಣಿತಂ ವೇಟ್ಟುವಣು ಗಾಳಂತೆ ದಾಯಂಬಡೆದುಂ ಮೇಳದಂಕದಂತೆ ಸುತೆಯಳೆದುಂ ಡೊಂಬರ ಕೋಡಗದಂತಾಡಿ ಗೆಲ್ದಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂಕoll ಭಯಮಯದ ಕಲಿಯುಂ ಚಾ ಗಿಯುಮೆನಿಸದೆ ನಾಡ ಲೋಭಿಯುಂ ಪಂದೆಯುಮಾ | . ಗಿಯ ಬಾಲ್ವಿಂಗಲ್ಲದೆ ಸೂ ಳೆಯ ಕಣ್ ಪಾಸಗೆಯ ಕಣ್ಣುಮನುಜುಗುರುಮೇ || ೭೩ ವ|| ಎಂದು ಕಯ್ಕೆಸರಂಬೆರಸು ನುಡಿದ ಭೀಮಸೇನನ ನುಡಿಗಳ ಕಿಡಿಗಳಂತೆ ತನ್ನ ಮನಮನೋನಲಿಸಯುಮರ್ದಯಂ ಕನಲಿಸೆಯುವೇನುಮೆನ್ಯದ ಮುಂತಣ ಕಜಮನೆ ಬಗೆದುಸಿರದಿರ್ದ ದುರ್ಯೋಧನನಗೆ ಗಾಂಗೇಯನುಂ ವಿದುರನುಂ ಬಂದುಉll ಸಾಲದೆ ಜೂದು ನಿಮ್ಮೊಳಗಿದೇಂ ಗಳ ಮಾಣಿಸಿಮೆಂದೊಡvಭೂ ಪಾಲಕಿರೀಟತಾಟಿತಪದಂ ಯಮನಂದನನ ನಾಡೆಯುಂ | ಸೋಲದೊಳಾದಮೇವಯಿಸಿದೆಂ ನುಡಿಗಿನ್ನೆಡೆಯಿಲ್ಲ ಪೋಗಿಮಾ ತ್ಯಾಲಯಕೆಂದೊಡೇನುಮೇನಲಣದ ಬಾರಿಸಲಣದಿರ್ವರುಂ || ೭೪ ಒತ್ತೆಯನ್ನಾಗಿಟ್ಟು ಆಡಿ ಸೋತನು. ವll ಹಾಗೆ ಕಳಿಂಗ ಮತ್ತು ಅಂಗದೇಶದ ಕಾಡುಗಳಲ್ಲಿ ಹುಟ್ಟಿದ ಮದ್ದಾನೆಗಳನ್ನೂ ಉತ್ತಮ ಜಾತಿಯವುಗಳಾದ ಕಾಂಭೋಜದೇಶದಲ್ಲಿ ಹುಟ್ಟಿದ ಕುದುರೆಗಳನ್ನೂ ಒಡ್ಡಿದಾಗ ಸೆರೆಹಿಡಿಯುವಂತೆ ಬಂಧಿಸಿಯೂ ಹುಣ್ಣುಗಳನ್ನೂ ಚಿಕಿತ್ಸೆಮಾಡುವ ವೈದ್ಯನಂತೆ ಕೊಡಸಾರಿ (ಹಾಳ-ಒಂದು ಮೂಲಿಕೆಗಳನ್ನೂ ಹಿಡಿದೂ ಸೂಳೆಯರ ಹಾಗೆ ಕಳಿದು ಉಳಿದುದನ್ನೆಲ್ಲಾ ತಿಳಿದೂ ಪಾದರಸದಿಂದ ಚಿನ್ನವನ್ನು ಮಡುವ ರಸವಾದಿಯಂತೆ ಕಾಯಿಗಳನ್ನು ಕುಟ್ಟಿಯೂ ಹಿರಿಯ ಜಾರೆಯರಂತೆ ನಯವಾಗಿ ಮಾತನಾಡಿಯೂ ಪ್ರೀತಿಯ ಮನುಷ್ಯನಂತೆ ಗರಗಳನ್ನು ಹೊಂದಿಯೂ - ದಾಯಭಾಗವನ್ನು ಹೊಂದಿಯೂ ಪ್ರೇಮಕಲಹದಂತೆ ಸುಳಿವನ್ನು ತಿಳಿದುಕೊಂಡ ಡೊಂಬರ ಕೋತಿಯಂತೆ ಆಡಿ ಒತ್ತೆಯನ್ನೆಲ್ಲ ಗೆದ್ದಾಗ ಭೀಮಸೇನನು ತಮ್ಮಣ್ಣನ ಸೋಲನ್ನು ಕಂಡು ಹೀಗೆಂದನು. ೭೩. ಭಯವನ್ನೇ ತಿಳಿಯದ ಶೂರನೂ ತ್ಯಾಗಿಯೂ ಎನಿಸಿಕೊಳ್ಳದೆ ವಿಶೇಷವಾಗಿ ಜಿಪುಣನೂ ಹೇಡಿಯೂ ಆಗಿ ಬಾಳುವವನಿಗಲ್ಲದೆ (ಇತರರಿಗೆ) ಸೂಳೆಯ ಕಣ್ಣೂ ದಾಳಗಳ ಕಣ್ಮ ಬಗ್ಗೆ ಅಧೀನವಾಗುತ್ತವೆಯೇ? ವ|| ಎಂದು ಕಹಿಯಾದ (ಹಿತವಲ್ಲದ) ಧ್ವನಿಯೊಡನೆ ಕೂಡಿ ನುಡಿದ ಭೀಮಸೇನನ ಮಾತುಗಳು ಬೆಂಕಿಯ ಕಿಡಿಗಳಂತೆ ತನ್ನ ಮನಸ್ಸನ್ನು ಮೂದಲಿಸಿದರೂ ಕೆರಳಿಸಿದರೂ ಏನನ್ನೂ ಹೇಳದೆ ಮುಂದಿನ ಕಾರ್ಯವನ್ನೇ ಯೋಚಿಸಿ ಮಾತನಾಡದಿದ್ದ ದುರ್ಯೊಧನನ ಹತ್ತಿರಕ್ಕೆ ಭೀಷ್ಮವಿದುರರು ಬಂದು ೭೪. ನಿಮ್ಮಲ್ಲಿ ಇನ್ನೂ ಜೂಜು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy