SearchBrowseAboutContactDonate
Page Preview
Page 33
Loading...
Download File
Download File
Page Text
________________ ೨೮ | ಪಂಪಭಾರತಂ ಉದಾತ್ತವಾದ ಪ್ರತಿಭೆಯನ್ನು ತನ್ನ ಕಾವ್ಯದಲ್ಲಿ ಪ್ರತಿಬಿಂಬಿಸಿ ಕನ್ನಡವನ್ನು ಸಂಪದ್ಯುಕ್ತವಾಗಿ ಮಾಡಿದ್ದಾನೆ. ಭಾವವನ್ನು ಇತರರಿಂದ ತೆಗೆದುಕೊಂಡಿದ್ದರೂ ನಿರೂಪಣರೀತಿಯನ್ನು ತನ್ನದನ್ನಾಗಿಯೇ ಮಾಡಿಕೊಂಡಿರುವುದು ಅವನ ವೈಶಿಷ್ಟ. ಪಂಪಭಾರತದ ಕಥಾಸರಣಿ : ಪಂಪನಿಗೆ ಸಮಗ್ರಭಾರತವನ್ನು ಬರೆಯುವ ಭರದಲ್ಲಿ ಹೆಚ್ಚು ವಿವರಗಳನ್ನು ತುಂಬುವುದಕ್ಕೆ ಅವಕಾಶವಿಲ್ಲ, 'ಪೆಲಿವುಮುಪಾಖ್ಯಾನ ಕಥೆಗಳೊಳಮೊಂದಂ ಕುಂದಲೀಯದೆ ಪೇಯ್ಯಂ' ಎಂದು ಹೇಳುವನಾದರೂ ಎಷ್ಟೋ ವಿಷಯಗಳನ್ನು ಬಹುಕೌಶಲದಿಂದ ಕ್ರೋಡೀಕರಿಸಿ ಒಂದೆರಡು ಮಾತುಗಳಲ್ಲಿ ಕಾವ್ಯಕ್ಕೆ ಸರಿಹೋಗುವಂತೆಯೂ ಆಯಾ ಸನ್ನಿವೇಶಗಳ ಮಹತ್ವವೂ ಪಾತ್ರಗಳ ವ್ಯಕ್ತಿತ್ವವೂ ಚೆನ್ನಾಗಿ ಸ್ಪುರಿಸುವಂತೆಯೂ ಮೂಲಗ್ರಂಥದ ಆಶಯ ಕೆಡದಂತೆಯೂ ಮೂಲರೇಖೆಗಳನ್ನು ಮಾತ್ರ ಎಳೆದಿರುವನು. ಮೊದಲು ಪಾಂಡವ ಕೌರವ ಜನನದಿಂದ ಹೊರಟು ಅವರ ಬಾಲಕೇಳಿ, ಭೀಮ ದುರ್ಯೊಧನರ ದ್ವೇಷಕ್ಕೆ ಕಾರಣ, ಲಾಕ್ಷಾಗೃಹದಹನ, ಹಿಡಿಂಬಾಸುರವಧೆ, ಬ್ರೌಪದೀಪರಿಣಯ, ಇಂದ್ರಪ್ರಸ್ಥಗಮನ, ಇವುಗಳವರೆಗೆ ಕಥಾಸರಣಿಯಲ್ಲಿ ಎಲ್ಲಿಯೂ ಎಡರು ಬಾರದಂತೆ ಸರಿಪಡಿಸಿಕೊಂಡು ನಿರೂಪಿಸುತ್ತ ಹೋಗಿರುವನು. ಇಲ್ಲಿಂದ ಮುಂಧೆ. ಮೂಲಭಾರತದ ಪ್ರಕಾರ ನಾರದಾದೇಶದಂತೆ ಅರ್ಜುನನನ್ನು ಭೂಪ್ರದಕ್ಷಿಣೆಗೆ ಕಳುಹಿಸಬೇಕು. ಹಾಗೆ ಇಲ್ಲಿ ಮಾಡಲು ಸಾಧ್ಯವಿಲ್ಲ. ಬ್ರೌಪದಿಯ ಪತಿಯು ಅರ್ಜುನನೊಬ್ಬನೇ ಎಂಬ ವಿಷಯದಲ್ಲಿ ಪಂಪನು ಜಾಗರೂಕನಾಗಿರುವನು. ಅಲ್ಲದೆ “ವರ್ಣಕ ಕತೆಯೊಳೊಡಂಬಡಂ ಪಡೆಯೆ' ಹೇಳಬೇಕು ತಾನೆ? ಆದುದರಿಂದ ಅರ್ಜುನನ ಪ್ರಯಾಣಕ್ಕೆ ಪಂಪನು ಬೇರೆಯ ಕಾರಣವನ್ನು ಕಲ್ಪಿಸಿರುವನು..ಅದು 'ದಿಗಂಗನಾ ಮುಖಾವಲೋಕನಕ್ಕಾಗಿ'. ಅರ್ಜುನನು ದಿಗ್ವಿಜಯಾರ್ಥವಾಗಿ ಹೊರಟು ಸಮಸ್ತ ರಾಷ್ಟ್ರಗಳಲ್ಲಿ 'ಆತ್ಮೀಯ ಶಾಸನಾಯತ್ತಂ' ಮಾಡುತ್ತ ಬರುವನು. ಇಲ್ಲಿ ಪಂಪನಿಗೆ ಅನೇಕ ದೇಶಗಳನ್ನು, ತನ್ನ ವಿಸ್ತಾರವಾದ ಅನುಭವವನ್ನು ವರ್ಣಿಸುವುದಕ್ಕೆ ಅವಕಾಶ ಸಿಕ್ಕುವುದು. ಅರ್ಜುನನು ಮುಂದೆ ಹೊರಟು ಗೋಕರ್ಣ ಬನವಾಸಿಗಳನ್ನು ದಾಟಿ ದ್ವಾರಕಾಪುರವನ್ನು ಸೇರಿ ಅಲ್ಲಿ ತನ್ನ ಹಲವು ಜನ್ಮಗಳ ಕೆಳೆಯ ನಾದ ಕೃಷ್ಣನು ತನ್ನನ್ನು ಇದಿರ್ಗೊಳ್ಳಲು ಪುರಪ್ರವೇಶಮಾಡುವನು. ಪುರಸ್ತ್ರೀಯರು ಫಲ್ಗುಣನ ರೂಪಾತಿಶಯವನ್ನು ನೋಡಿ “ಗುಣಾರ್ಣವನೀತನೇ' ಎಂದು ಬೆರಗುಗೊಂಡು ನೋಡುವರು. ಅಲ್ಲಿಂದ ಮುಂದೆ ಸುಭದ್ರಾರ್ಜುನರ ಅನುರಾಗ, ಸೂರ್ಯಾಸ್ತಮಯ, ರಾತ್ರಿ, ಚಂದ್ರೋದಯ, ಅರ್ಜುನ - ಚಂದ್ರಿಕಾವಿಹಾರ, ವೇಶ್ಯಾವಾಟಿಕೆ , ಪಾನಗೋಷ್ಠಿ, ಸುಭದ್ರೆಯ ವಿರಹ, ಸುಭದ್ರಾಪರಿಣಯ-ಮೊದಲಾದವುಗಳಲ್ಲಿ ವರ್ಣಕಕಾವ್ಯದ ಲಕ್ಷಣಗಳನ್ನು ಪೂರ್ತಿ ಗೊಳಿಸುವುದಕ್ಕೆ ಸಹಾಯಕವಾಗುವುದು. ಇವುಗಳ ವರ್ಣನೆಗಳಿಂದ ಆಶ್ವಾಸಗಳು ತುಂಬಿ ತುಳುಕಾಡುವುವು. ಕಥೆಯ ಬೆಳವಣಿಗೆಗೆ-ಅನುಸ್ಮತವಾದ ಪ್ರವಾಹಕ್ಕೆ- ಇದು ಸ್ವಲ್ಪ ಕುಂದನ್ನು, ಅಡಚಣೆಯನ್ನು ಉಂಟುಮಾಡಿದರೂ ಪಂಪನ ಅಪಾರವಾದ ಅನುಭವದ ಪ್ರದರ್ಶನಕ್ಕೂ ಆಳವಾದ ರಸಿಕತೆಗೂ, ಉತ್ತಮವಾದ ವರ್ಣನಾಕೌಶಲಕ್ಕೂ ಇವು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy