SearchBrowseAboutContactDonate
Page Preview
Page 317
Loading...
Download File
Download File
Page Text
________________ ೩೧೨) ಪಂಪಭಾರತಂ | ಕಾಶ್ಮೀರ ಹಿಮವಂತ ಹೇಮಕೂಟ ಕೈಲಾಸ ಪಾರಿಯಾತ್ರಶ್ವೇತಶೃಂಗ ಗಂಧಮಾದನಗಿರಿ ನಿಕಟವರ್ತಿಗಳಪ್ಪ ಪರ್ವತರಾಜರನಪಗತತೇಜರ್ಮಾಡಿ ಕಸವರಮಂ ಕೆಯ್ಕೆಮಾಡಿ ಮೇರುಪರ್ವತದ ತೆಂಕಣ ತಟ್ಟಲೊಳ್ ದ್ವಾದಶಯೋಜನ ಪ್ರಮಾಣಮಪ್ಪ ಜಂಬೂವೃಕ್ಷದ ಕೆಲದೊಳಡಸಿ ರಸದ ತೋಜಿತ ಪರಿವಂತೆ ಕನಕಗಿರಿಯನಲೆದು ಪರಿವ ಜಂಬೂನದಮಂಬ ತೋಜನೆಯೊಳ್ ಪುಟ್ಟಿದ ಜಾಂಬೂನದವೆಂಬ ಪೊನ್ನ ಪಾಸತಿಗಳಂ ಕಂಡುಕ೦ll ಗಾಂಡೀವದ ಕೊಪುಗಳೊಳ್ ಖಂಡಿಸಿ ತಟದ ಕನಕ ರೇಣುವನವನಾ | ಖಂಡಲ ತನಯನಸುಂಗೊಳೆ ಖಂಡಿಸಿದಂ ನಿಶಿತ ಪರಶು ಶರಸಮಿತಿಗಳಿ೦ 10. ವ|| ಅಂತು ಕನಕರೇಣುಗಳ ಪುಟ್ಟದ ಪಾಸಣೆಗಳುಮಂ ಕನಕದ ಪಿರಿಯ ಸೆಲೆಗಳುಮ ನೊಟ್ಟಿ ಬೆಟ್ಟಾಗಿ ಪುಂಜಿಸಿಚಂ|| ಬರಿಸಿ ಘಟೋತ್ಕಚಂಬೆರಸು ದಾನವಸೇನೆಯನೀಗಳೀ ಬಲಂ ಬೆರಸಿವನಿಂತು ಪೊತ್ತು ನಡೆ ನಮ್ಮ ಪುರಕ್ಕೆನೆ ತದ್ದಿರೀಂದ್ರ ಕಂ | ದರ ಕನಕಾಚಳಂಗಳೆನತುಂಟನಿತಂ ತವ ಹೇಮ ರೇಣುಗ. ಟ್ವೆರಸು ಕಡಂಗಿ ಪೊತ್ತು ನಡೆದತ್ತು ಘಟೋತ್ಕಚರೌದ್ರಸಾಧನಂ || ೩೨ ವ|| ಆಗಳ್ ಪರಾಕ್ರಮಧವಳಂ ತನ್ನ ಪರಾಕ್ರಮಮಂ ಮಜಯಲೆಂದು ಕಳಾಸದ ಮೇಗಕ್ಕೆ ಎಂದು ಕುಬೇರನಿಂ ಕಪ್ಪಂಗೊಂಡು ಪೊನ್ನಂ ಜಕ್ಕರೆಯಿಂ ಪೊತ್ತು ಬರೆ ತಡೆಯದಿಂದ ಪ್ರಸ್ಥಕ್ಕೆ ಬಂದನಿತ್ತ ಭೀಮನುಂ ಮೂಡಣ ದಿಶಾಭಾಗಮಂ ಬಾಯ್ಕಳಿಸಿ ದೇವೇಂದ್ರನ ಕಳುಹಿಸಿದನು. ಕಾಶ್ಮೀರ, ಹಿಮವಂತ, ಹೇಮಕೂಟ ಕೈಲಾಸ ಪಾರಿಯಾತ್ರ ಶ್ವೇತಶೃಂಗ ಗಂಧಮಾದನವೇ ಮೊದಲಾದ ಪರ್ವತಗಳ ತಪ್ಪಲಿನಲ್ಲಿದ್ದ ಪರ್ವತರಾಜರುಗಳನ್ನು ತೇಜೋಹೀನರನ್ನಾಗಿ ಮಾಡಿ ಅವರ ಐಶ್ವರ್ಯವನ್ನು ಸ್ವಾಧೀನಪಡಿಸಿಕೊಂಡನು. ಮೇರುಪರ್ವತದ ದಕ್ಷಿಣ ತಪ್ಪಲಿನಲ್ಲಿ ಹನ್ನೆರಡು ಯೋಜನದ ಅಳತೆಯನ್ನುಳ್ಳ ನೇರಳೆಯ ಮರದ ಕೆಳಗೆ ಅಗೆದು ಕೊರೆದು ಪಾದರಸದ ನದಿಯು ಹರಿಯುವಂತೆ ಮೇರುಪರ್ವತವನ್ನು ತೋಡಿ ಹರಿಯುವ ಜಂಬೂನದವೆಂಬ ನದಿಯಲ್ಲಿ ಹುಟ್ಟಿದ ಜಾಂಬೂನದವೆಂಬ ಚಿನ್ನದ ಹಾಸುಬಂಡೆಯನ್ನು ನೋಡಿದನು. ೩೧. ಗಾಂಡೀವದ ತುದಿಯ ಭಾಗದಿಂದ ಕತ್ತರಿಸಿ ಆ ಜಂಬೂನದಿಯ ತೀರದ ಚಿನ್ನದ ಬಂಡೆಗಳನ್ನು ಪ್ರಾಣಸಹಿತ (ಸಚೇತನವಾಗಿ) ಹರಿತವಾದ ಕೊಡಲಿ ಮತ್ತು ಬಾಣಸಮೂಹದಿಂದ ಕತ್ತರಿಸಿದನು. ವ|| ಚಿನ್ನದ ರೇಣುಗಳಿಂದ ಕೂಡಿದ ಹಾಸುಬಂಡೆಗಳನ್ನೂ ದೊಡ್ಡಶಿಲೆ ಗಳನ್ನೂ ರಾಶಿಯನ್ನಾಗಿ ಮಾಡಿದನು. ೩೨. ಘಟೋತ್ಕಚನನ್ನು ರಾಕ್ಷಸಸೇನೆಯೊಡನೆ ಬರಮಾಡಿ ಈಗಲೇ ಈ ಸೈನ್ಯದೊಡನೆ ಇವುಗಳನ್ನು ಹೀಗೆಯೇ ಹೊತ್ತುಕೊಂಡು ನಮ್ಮಪಟ್ಟಣಕ್ಕೆ ನಡೆ ಎನ್ನಲು ಆ ಬೆಟ್ಟಗಳ ಕಣಿವೆಗಳಲ್ಲಿರುವ ಚಿನ್ನದ ಬೆಟ್ಟಗಳೆಷ್ಟಿತ್ತೋ ಅಷ್ಟನ್ನೂ ಪೂರ್ಣವಾದ ಚಿನ್ನದ ರೇಣುಗಳೊಡನೆ ಉತ್ಸಾಹದಿಂದ ಹೊತ್ತು ಘಟೋತ್ಕಚನ ಆ ಭಯಂಕರವಾದ ಸೈನ್ಯವು ಇಂದ್ರಪ್ರಸ್ಥಕ್ಕೆ ನಡೆಯಿತು. ವ|| ಆಗ ಅರ್ಜುನನು ತನ್ನ ಪೌರುಷವನ್ನು ಪ್ರದರ್ಶನಮಾಡಬೇಕೆಂದು ಕೈಲಾಸಪರ್ವತದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy