SearchBrowseAboutContactDonate
Page Preview
Page 316
Loading...
Download File
Download File
Page Text
________________ ಷಷ್ಠಾಶ್ವಾಸಂ | ೩೧೧ ವll ಅಂತು ವಿಜಯಂ ತನ್ನ ದಿಗ್ವಿಜಯದೊಳಾದ ವಿಜಯಚಿಹ್ನಂಗಳ್ ಮುನ್ನವೆ ನಗಳ ವಿಜಯದ ಗುಡಿವಿಡಿಸಿ ಅರಿ ನೃಪರಂ ಛೇದಿಸಿ ಪಾಂಚಾಳರಂ ಚಾಳಿಸಿ ಗಾಂಧರ್ವರಂ ಎರಥರ್ಮಾಡಿ ಕೌಳಾಧೀಶರು ಸಾಧಿಸಿ ಕಿಂಪುರುಷರಂ ಕಾಪುರುಷರ್ಮಾಡಿ ಬಾಕರನನನೀಕರೆನಿಸಿ ಮಾಳವಿಗರಂ ಕೆಳಗಿವಿಗೆಯ್ಯಲೀಯದಾಟಂದು ನಿಜ ನಾಮಾಂಕಿತ ಸಾಯಕಂಗಳಿಂದಚ್ಚು ನಚ್ಚರಿ ಕಿಡಿಸಿಮll ಉಳಿದಿರ್ಪಂತಮಗಾವ ಗರ್ವಮಿಯಲ್ವೇಡೆಮ್ಮನೆಮುಳ್ಳುದಂ ನೆಕೊಂಡೆಮ್ಮಯ ಬಾಚ್ಚಿಯೊಳ್ ನಿಜಸುವಂ ನೀನೆಂದು ತಂದಿತ್ತು ಕೆ || ಹೈಜತೆಯಂ ಕೊಟ್ಟಳವಟ್ಟ ಸಾರ ಧನಮಂ ಮೂವಿಟ್ಟಿಗಂ ಪೂಣ್ಣು ಕಾ ಲೈಂಗಿತ್ತಂತರಿಗಂಗೆ ಬೆರ್ಚಿ ಭಯದಿಂ ಗ್ರಾಮಂ ಕುಳಂ ರಾಜಕಂ || - ೩೦ ವ|| ಮತ್ತದಲ್ಲಿ ಕೆಲರಂ ಮೈತ್ರಾಸನ ವೃತ್ತಿಯೊಳ್ ನಿಟಿಸಿ ಕೆಲರನುದ್ಯತಾ ಪ್ರತಿಮಹಿತರ್ಮಾಡಿ ಕೆಲರನುಚ್ಚಾಟಿಸಿ ಸರ್ವಹರಣಂಗೆಯ್ದು ಕಸವರಮೆಲ್ಲಮನಿಂದ್ರಪ್ರಸ್ಥಕ್ಕೆ ಕಟಿಪಿ ನೋಡುತ್ತಿರುವ ಹಾಗೆಯೇ ನಿಂತು ಉರಿದುವು. ಶತ್ರುರಾಜರ ಅರಮನೆಗಳಲ್ಲಿದ್ದ ಸಾಲುಬೊಂಬೆಗಳು ಅತ್ತವು. ವll ಹಾಗೆ ಅರ್ಜುನನು ತನ್ನ ದಿಗ್ವಿಜಯದಲ್ಲುಂಟಾದ ವಿಜಯಚಿಹ್ನೆಗಳನ್ನು ಮೊದಲೇ ಪ್ರದರ್ಶಿಸಿದನು. ಜಯಧ್ವಜವನ್ನೇರಿಸಿ ಶತ್ರುರಾಜರನ್ನು ಕತ್ತರಿಸಿ ಪಾಂಚಾಲರಾಜರನ್ನು ಚಲಿಸುವಂತೆ ಮಾಡಿ ಗಂಧರ್ವರಾಜರನ್ನು ರಥವಿಲ್ಲದವರನ್ನಾಗಿ ಮಾಡಿ ಕಾಳಾಧೀಶ್ವರನನ್ನು ಗೆದ್ದು ಕಿಂಪುರುಷರನ್ನು ಅಲ್ಪರನ್ನಾಗಿಸಿ ಬಾತ್ತೀಕರನ್ನು ಸೈನ್ಯವಿಲ್ಲದವರನ್ನಾಗಿ ಮಾಡಿ ಮಾಳವಿಕರನ್ನು ಉದಾಸೀನರಾಗಿರಲು ಬಿಡದೆ ಮೇಲೆಬಿದ್ದು ತನ್ನ ಹೆಸರಿನ ಗುರುತುಗಳಿಂದ ಕೂಡಿದ ಬಾಣಗಳಿಂದ ಹೊಡೆದು ಅವರ ನಂಬಿಕೆಯನ್ನು ಕೆಡಿಸಿದನು. ೩೦. ಗ್ರಾಮದವರೂ ಕುಲದವರೂ ರಾಜರೂ ಹೆದರಿ ನಾವು ನಿನ್ನ ವಿಷಯದಲ್ಲಿ ಅಲಕ್ಷ್ಯದಿಂದಿರುವಂತೆ ನಮಗೇನಹಂಕಾರವಿದೆ. ನಮ್ಮೊಡನೆ ಯುದ್ಧಮಾಡಬೇಡ; ನಮ್ಮಲ್ಲಿರುವದನ್ನು ಪೂರ್ಣವಾಗಿ ತೆಗೆದುಕೊಂಡು ನಮ್ಮನಮ್ಮ ಬದುಕುಗಳಲ್ಲಿ ಸಿಧಿಪಡಿಸು (ನಿಯಮಿಸು) ನೀನು, ಎಂದು ನಿಷ್ಕೃಷ್ಟವೂ ಸಾರಭೂತವೂ ಆದ ಧನವನ್ನು ತಮ್ಮ ಬೊಗಸೆಯಲ್ಲಿ ಕೊಟ್ಟು ಕೈಸೆರೆಯಲ್ಲಿದ್ದವರೆನ್ನೆಲ್ಲಾ ಬಿಟ್ಟು ಕೊಟ್ಟು ಮೂರು ವಿಧವಾದ ಬಿಟ್ಟಿಯ ಕೆಲಸವನ್ನೂ ಮಾಡುತ್ತೇವೆ ಎಂದು ಒಪ್ಪಿ ಪ್ರತಿಜ್ಞೆಮಾಡಿ ಅರ್ಜುನನ ಕಾಲಿಗೆ ನಮಸ್ಕರಿಸಿದರು. ವl ಅಲ್ಲದೆ ಅಲ್ಲಿ ಕೆಲವರನ್ನು ಸ್ನೇಹಿತರನ್ನಾಗಿ ಭಾವಿಸಿದನು, ಉದಾಸೀನರಾಗಿರುವ ಹಾಗೆ ಇದ್ದು ಮಲೆತಿದ್ದ ಮತ್ತೆ ಕೆಲವರನ್ನು ಬೇರೆ ರಾಜ್ಯಕ್ಕೆ ಓಡಿಸಿದನು. ಕೆಲವರನ್ನು ಎಬ್ಬಿಸಿ ಓಡಿಸಿ ಎಲ್ಲವನ್ನೂ ಕಸಿದುಕೊಂಡು, ಚಿನ್ನವನ್ನೆಲ್ಲ (ದ್ರವ್ಯವನ್ನೆಲ್ಲ ಇಂದ್ರಪ್ರಸ್ಥಕ್ಕೆ - * ವ್ಯಕ್ತ ವಿಶೇಷ -ಸೋತ ರಾಜನು ಗೆದ್ದವನಿಗೆ ಮಾಡಬೇಕಾದ ಮೂರು ಬಗೆಯ ವಿಷ್ಟಿಕರ್ಮಗಳು - ಶೋಧನಕರ್ಮ, ವಹನಕರ್ಮ ಮತ್ತು ಅಪನಯನಕರ್ಮ. ಅಂದರೆ ಶಿಬಿರ, ಮಾರ್ಗ, ಸೇತು, ಬಾವಿ ಮೊದಲಾದವುಗಳನ್ನು ಶೋಧನಮಾಡಿ ಸರಿಯಾಗಿಡುವುದು ಶೋಧನಕರ್ಮ; ಯಂತ್ರ, ಆಯುಧ, ಆವರಣ, ಉಪಕರಣಗಳನ್ನು ಸಾಗಿಸಿಕೊಡುವುದು ವಹನ ಕರ್ಮ; ಯುದ್ದದಲ್ಲಿ ಗಾಯಗೊಂಡವರನ್ನೂ ಸತ್ತವರನ್ನೂ ಅವರ ಆಯುಧಕವಚಸಮೇತ ತಂದೊಪ್ಪಿಸುವುದು ಅಪನಯನಕರ್ಮ. (ಅರ್ಥಶಾಸ್ತ್ರ ೧೦-೪)
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy