SearchBrowseAboutContactDonate
Page Preview
Page 309
Loading...
Download File
Download File
Page Text
________________ ೩೦೪) ಪಂಪಭಾರತಂ * ವll ಎಂಬುದುಮಾ ಮುನೀಂದ್ರನಿಂದ್ರಲೋಕದಿಂ ಬಂದವೆಂದೊಡಲ್ಲಿಯ ಪಡೆಮಾತಾವುದುಮll ದಿವಿಜೇಂದ್ರಂ ಸುಖಮಿರ್ದನೇ ದಿತಿಸುತಾಬಾಧಗಳ ದೇವರ್ಗಿ ಲವಲಾ ಷೋಡಶರಾಜರಿರ್ಪ ತಜನೇನಮ್ಮನ್ನಯಕ್ಕಾಪರಾ || ವ ವಿಳಾಸಂಗಳೊಳಿರ್ಪರೇ ದೂರೆತು ತಾನಮ್ಮಯ್ಯನಶ್ವರ್ಯಮಿಂ ತಿವನೆಲ್ಲಂ ತಿಳಿವಂತುವಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ || ೧೫ ವ|| ಎಂಬುದುಮಾ ಮುನೀಶ್ವರನಿಳಾಧರೇಶ್ವರಂ ಬೆಸಗೊಂಡಂದದೊಳೆ ದೇವಲೋಕದ ಪಡೆಮಾತೆಲ್ಲಮಂ ಪೇಟ್ಟು ಪಾಂಡುರಾಜನ ಮಾತನಿಂತೆಂದಂಉlು ನೀಡಿರದಿಂದ್ರನೂಲಗಳ ಪೋಪುದುಮಾಗಳುಮಂತ ಪೋಗಿಯುಂ ಷೋಡಶ ರಾಜರಿಂ ಕಡಯೋಳಿರ್ಪುದು ಜೀಯ ಪಸಾದಮಂಬುದುಂ | ನೋಡಿದ ದೃಷ್ಟಿಗಳಿ ಸುಗಿದಿರ್ಪುದುಮಾದಮ ಮಾನಭಂಗಮಂ ಮಾಡೆ ಮನಃಕ್ಷತಕ್ಕಳವಿಗಾಣವು ನೋಡಿರೆ ಬಾಂಡುರಾಜನಾ ೧೬ ಮ || ಪರ ಚಕ್ರಂಗಳನೊತ್ತಿಕೊಂಡದಟರಂ ಕೊಂದಿಕ್ಕಿ ದಾಯಾದರೆ ಇರುಮಳ್ಳುತ್ತಿರೆ ಸಂದ ಸಾಹಸದ ನಿಮಿಾಯಯ್ಯರುಂ ಮಕ್ಕಳಾ | ಗಿರೆಯುಂ ನಿಚ್ಚಲುಮಿಂದ್ರನೋಲಗದೊಳಂತಾ ಪಾಂಡುರಾಜಂಗ ನಿ ರ್ನರಮವೊಂದಪಮಾನದಿಂದಮಿನಿಂದೂನತಮಪಂತುಟೇll ಅಪೂರ್ವವಾಗಿ ಬಂದಿದ್ದೀರಿ; ಈಗ ಎಲ್ಲಿಂದ ಬಂದಿರಿ? ಎಂದು ಕೇಳಿದನು. ವll ಅದಕ್ಕೆ ಆ ಮುನೀಂದ್ರನು 'ನಾವು ಇಂದ್ರಲೋಕದಿಂದ ಬಂದೆವು' ಎನ್ನಲು ಅಲ್ಲಿಯ ಸಮಾಚಾರವೇನು, ೧೫. ದೇವೇಂದ್ರನು ಸುಖವಾಗಿದ್ದಾನೆಯೇ ? ದೇವತೆಗಳಿಗೆ ರಾಕ್ಷಸರ ಬಾಧೆಯಿಲ್ಲ ತಾನೇ? ಷೋಡಶರಾಜರಿರುವ ರೀತಿ ಯಾವುದು? ನಮ್ಮ ವಂಶದ ದೊರೆಗಳು ಯಾವ ವೈಭವದಿಂದಿದ್ದಾರೆ? ನಮ್ಮ ತಂದೆಯ ಸಂಪತ್ತು ಎಂತಹುದು? ಇವನ್ನು ತಿಳಿಯುವ ಹಾಗೆ ಬ್ರಹ್ಮಪುತ್ರರಾದ ನಾರದರೇ ಹೇಳಿರಿ. ವ|| ಎನ್ನಲು ಆ ಮುನೀಶ್ವರನು ಚಕ್ರವರ್ತಿಯಾದ ಧರ್ಮರಾಜನು ಪ್ರಶ್ನೆಮಾಡಿದ ರೀತಿಯಲ್ಲಿಯೇ ದೇವಲೋಕದ ಸಮಾಚಾರವನ್ನೆಲ್ಲ ಹೇಳಿ ಪಾಂಡುರಾಜನ ವಿಷಯಕವಾದ ಮಾತನ್ನು ಹೀಗೆಂದನು-೧೬. ಪಾಂಡುವು ಎಲ್ಲರಿಗಿಂತ ಮುಂಚೆ ಇಂದ್ರನ ಸಭೆಗೆ ಹೋಗಿದ್ದರೂ ಅಲ್ಲಿಯೂ ಅವರ ಹಾಗೆಯೇ ಹೋಗಿದ್ದರೂ ಆ ಷೋಡಶರಾಜರಿಗಿಂತ ಕೊನೆಯಲ್ಲಿರುವುದೂ ಸ್ವಾಮಿ ಪ್ರಸಾದ ಎನ್ನುವುದೂ ಅವರು ದೃಷ್ಟಿಸಿ ನೋಡಿದ ನೋಟಕ್ಕೆ ಹೆದರಿ ಮುದುರಿಕೊಂಡಿರುವುದೂ ಅವನಿಗೆ ವಿಶೇಷವಾದ ಅವಮಾನವನ್ನುಂಟುಮಾಡಲು ೧೭. ಶತ್ರುಮಂಡಲಗಳನ್ನೆಲ್ಲ ಆಕ್ರಮಿಸಿ ಶೂರರಾದವರನ್ನೆಲ್ಲ ಸಂಹಾರಮಾಡಿ ದಾಯಾದಿಗಳೆಲ್ಲರೂ ಹೆದರುವಂತಹ ಪ್ರಸಿದ್ದ ಪರಾಕ್ರಮವನ್ನುಳ್ಳ ನೀವೈದುಮಂದಿಯೂ ಮಕ್ಕಳಾಗಿದ್ದರೂ ಪ್ರತಿನಿತ್ಯವೂ ಇಂದ್ರನ ಸಭೆಯಲ್ಲಿ ಆ ಪಾಂಡುರಾಜನಿಗೆ ನಿಷ್ಕಾರಣವಾದ ಒಂದು ಅಪಮಾನದಿಂದ ಇಷ್ಟು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy