SearchBrowseAboutContactDonate
Page Preview
Page 308
Loading...
Download File
Download File
Page Text
________________ ಷಷ್ಠಾಶ್ವಾಸಂ | ೩೦೩ ವ|| ಅಂತು ಧರ್ಮಪುತ್ರನಜಪುತ್ರನಂ ಮುಂದಿನ್ನೊಡಗೊಂಡು ಬಂದು ಮಣಿ ಕನಕರಚನವಿಚಿತ್ರವೇತ್ರಾಸನದೊಳಿರಿಸಿ ಮಹಾರ್ಥ್ಯಗುಣಮಣಿವಿಭೂಷಣಂಗ ಕನಕ ಪಾತ್ರದೊಳರ್ಥ್ಯಮೆತ್ತಿ ಕನಕ ಕಳಶ ಸಂಸ್ಕೃಶ ಶುಚಿಜಲಂಗಳಿಂದಮಾ ಮುನೀಶ್ವರನ ಪಾದಪದ್ಮಮಂ ಕರ್ಚಿ ತತ್ಪಾದಪವಿತ್ರೋದಕಂಗಳಿಂ ಮಹಾಋಷಿಯ ತಳಿದ ಕನಕಕಮಂಡಲುವಿನ ತೀರ್ಥೋದಕಂಗಳಿಂದಯ್ಯರುಂ ಪವಿತ್ರೀಕೃತಮಸ್ತಕರಾಗಿರ್ದು ಯುಧಿಷ್ಠಿರು ನಾರದಮಹಾಮುನಿಯ ಮೊಗಮಂ ನೋಡಿ ಕಂ।। ಪಡೆದಂ ಬ್ರಹ್ಮ ಜಗಮಂ ಪಡೆಯಲ್ ತಾನಾರ್ತನಿಲ್ಲ ಪಂಪಂ ನಿಮ್ಮಂ 1 ಪಡೆದ ಪಡೆದನೆನಿಸಿದ ಕಡು ಪೆಂಪಿನ ಪೊಗೆ ನೀವು ಮೊದಲಿಗರಾದಿರ್ ಬಾದೇನಾ ಮದೀಯ ಕರ್ಮ ಫ ಊದಿತ ಸಂತಾಪರೂಪ ಪಾಪಕಳಾಪ | ಚ್ಛೇದನಕರಮಾಯ್ತು ಭವ ತಾದ ಪ್ರಕ್ಷಾಳನೋದಕಂ ಮುನಿನಾಥಾ || ಬೆಸನನಗಾವುದೋ ಬೆಸಸಿಂ ಬೆಸನಂ ಪಿರಿದಕ್ಕೆ ಗಯ್ಯ ಸಾರ್ದಿದ್ರನದಂ | ಬೆಸಸಿಂ ನಿಮ್ಮಯ ಬರವಂ ಪೊಸತಾಗಿರೆ ಬಂದಿರಿಗಳಲ್ಲಿಂ ಬಂದಿರ್ || ܟܘ ೧೩ ೧೪ ನಾರದನು ಅವನ ಕಯ್ಯನ್ನು ಹಿಡಿದೆತ್ತಿ ಅನೇಕಸಲ ಹರಕೆಗಳಿಂದ ಆಶೀರ್ವದಿಸಿದನು. ವ|| ಹಾಗೆ ಧರ್ಮಪುತ್ರನು ಬ್ರಹ್ಮಪುತ್ರನಾದ ನಾರದನನ್ನು ಮುಂದು ಮಾಡಿಕೊಂಡು ಜೊತೆಯಲ್ಲಿ ಬಂದು ರತ್ನಚಿನ್ನ ಮೊದಲಾದವುಗಳ ರಚನೆಗಳಿಂದ ವಿಚಿತ್ರವಾದ ಬೆತ್ತದ ಪೀಠದಲ್ಲಿ ಕುಳ್ಳಿರಿಸಿ ಬಹು ಅನರ್ಥ್ಯಗುಣಗಳಿಂದ ಅಲಂಕೃತನಾದ ಅವನಿಗೆ ಚಿನ್ನದ ಪಾತ್ರೆಯಲ್ಲಿ ಅರ್ಥ್ಯವನ್ನೆತ್ತಿ ಚಿನ್ನದ ಕಲಶಗಳಲ್ಲಿ ತುಂಬಿದ ನಿರ್ಮಲವಾದ ನೀರಿನಿಂದ ಆ ಋಷಿಶ್ರೇಷ್ಠನ ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕದಿಂದಲೂ ಆ ಋಷಿವರ್ಯನು ಪ್ರೋಕ್ಷಿಸಿದ ಚಿನ್ನದ ಕಮಂಡಲದ ಪವಿತ್ರವಾದ ನೀರಿನಿಂದಲೂ ಅಯ್ಯರೂ ಶುಚಿರ್ಭೂತವಾದ ಶರೀರವುಳ್ಳವರಾಗಿದ್ದು ಧರ್ಮರಾಯನು ನಾರದಋಷಿಯ ಮುಖವನ್ನು ನೋಡಿ - ೧೨. ಬ್ರಹ್ಮನು ಜಗತ್ತನ್ನು ಸೃಷ್ಟಿಸಿದರೂ ಹಿರಿಮೆಯನ್ನು ಮಾತ್ರ ಪಡೆಯಲು ಶಕ್ತನಾಗಲಿಲ್ಲ. ನಿಮ್ಮನ್ನು ಪಡೆದ ಮೇಲಲ್ಲವೇ ಈ ಹಿರಿಮೆಯನ್ನು ಅವನು ಪಡೆದುದು ಎಂಬ ಹಿರಿಮೆಯ ಗೌರವಕ್ಕೆ ನೀವೇ ಮೊದಲಿಗರಾದಿರಲ್ಲವೇ ? ೧೩, ಹೆಚ್ಚು ಮಾತನಾಡಿ ಫಲವೇನು? ಋಷಿವರ್ಯರೇ ನಿಮ್ಮ ಪಾದೋದಕವು ನನ್ನ ಕರ್ಮದ ಫಲವಾಗಿ ಬಂದ ದುಃಖರೂಪವಾದ ಪಾಪಸಮೂಹವನ್ನು ಪರಿಹಾರ ಮಾಡಿತು. ೧೪. ಈಗ ನಾನು ಮಾಡಬೇಕಾದ ಕಾರ್ಯವೇನು ಆಜ್ಞಾಪಿಸಿ; ಅದು ಎಷ್ಟೇ ಹಿರಿದಾಗಿದ್ದರೂ ಮಾಡಲು ಸಿದ್ಧನಾಗಿದ್ದೇನೆ. ಅದನ್ನು ಅಪ್ಪಣೆಕೊಡಿ, ನೀವು ಬಂದ ಕಾರಣವನ್ನು ತಿಳಿಸಿ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy