SearchBrowseAboutContactDonate
Page Preview
Page 304
Loading...
Download File
Download File
Page Text
________________ ಷಷ್ಠಾಶ್ವಾಸಂ , ಕಂ ಶ್ರೀಗೆ ಫಳಂ ಚಾಗಂ ವಾಕ್ ಶ್ರೀಗೆ ಫಳಂ ಸರ್ವಶಾಸ್ತ್ರ ಪರಿಣತಿ ವೀರ | ಶ್ರೀಗೆ ಫಳಮಾಯವೆಂದಿಂ ತಾಗಳುಮಟೆದೆಸಗಿದಂ ಪರಾಕ್ರಮದವಳಂ | ವ|| ಅಂತು ಖಾಂಡವವನದಹನಪ್ರಪಂಚದಿಂ ಬಲೆಯಮರಾತಿವನದಹನ ತೀವ್ರ ಪ್ರತಾಪ ಗಹನಕ್ಕೆ ಮುನ್ನವಳ್ಳಿ ಪರಮಂಡಳಿಕರಿತ್ತು ತೆತ್ತುಂ ಬೆಸಕೆಯ್ಕೆ ಕೆಲವು ದಿವಸಮಿರ್ದು ನಾರಾಯಣನಂ ದ್ವಾರಾವತಿಗೆ ಕಳಿಪಿಉll ತುಂಗ ತರಂಗ ಭಂಗುರ ಪಯೋಧಿಪರೀತಮಹಾಮಹೀತಳಾ ಲಿಂಗಿತ ಕೀರ್ತಿ ಕೇಳು ಬಡ ಪಾರ್ವನ ಪುಯಲನೊರ್ಮ ಕೇಳನಾ | ವಂಗಮಗುರ್ವು ಪರ್ವ ಜವನೋಳ್ ಸೆರಗಿಲದ ಪೋಗಿ ತಾಗಿ ತಂ ದಂ ಗಡ ವಿಕ್ರಮಾರ್ಜುನನೆ ಪಾರ್ವರ ಒಳ್ಳೆಯ ಪೋದ ಜೀವಮಂ || ೨ ವ|| ಎಂದು ಲೋಕಮೆಲ್ಲಂ ಪೊಗಳ ವಿದ್ವಿಷ್ಟವಿದ್ರಾವಣನುಂ ಭೀಮ ಯುಧಿಷ್ಠಿರ ನಕುಲ ಸಹದೇವರುಮಯ್ಯರುಂಬೆರಸೊಂದು ದಿವಸಮೋಲಗಂಗೊಟ್ಟರೆ ಧರ್ಮಪುತ್ರನಲ್ಲಿಗೆ ಮಯಂ ಪಂಚರತ್ನ ಹಿರಣ್ಮಯಂ ಚತುರಶ್ರಂ ಮಜುಂ ಯೋಜನದಳವಿಯ - ೧, ಐಶ್ವರ್ಯಕ್ಕೆ ಪ್ರಯೋಜನತ್ಯಾಗ (ದಾನ), ವಾಕ್ಚಾತುರ್ಯಕ್ಕೆ ಫಲ ಸಕಲಶಾಸ್ತ್ರಗಳಲ್ಲಿ ಪಾಂಡಿತ್ಯ, ಪೌರುಷಕ್ಕೆ ಪ್ರಯೋಜನ ಔಚಿತ್ಯ ಎಂಬಿವನ್ನು ಯಾವಾಗಲೂ ತಿಳಿದುಕೊಂಡು ಪರಾಕ್ರಮಧವಳನಾದ ಅರ್ಜುನನು (ನಡೆದು ಕೊಂಡನು). ವ|| ಖಾಂಡವವನವನ್ನು ಸುಟ್ಟನಂತರ ಶತ್ರುಗಳೆಂಬ ಭಯಂಕರವಾದ ಕಾಡನ್ನು ಸುಡುವ ಪೌರುಷಪ್ರದರ್ಶನಕ್ಕೆ ಮೊದಲೇ ಶತ್ರುಗಳಾದ ಮಂಡಲಾಧಿಪರು ಧನಕನಕಗಳನ್ನು ಕೊಟ್ಟು ಕಪ್ಪಕಾಣಿಕೆಗಳನ್ನು ತೆತ್ತು ಆಜ್ಞಾಧಾರಕವಾಗಿರಲು ಕೆಲವು ದಿವಸಗಳ ಮೇಲೆ ನಾರಾಯಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟರು. ೨. ಎತ್ತರವಾದ ಅಲೆಗಳನ್ನುಳ್ಳ ಚಂಚಲವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಅಖಂಡಭೂಮಂಡಲವನ್ನು ಆಕ್ರಮಿಸಿರುವ ಕೀರ್ತಿಯನ್ನು ಅರ್ಜುನನು ಭಯವುಂಟಾಗುವ ಹಾಗೆ ಆಕ್ರಂದನಮಾಡುತ್ತಿದ್ದ ಬಡಬ್ರಾಹ್ಮಣನಗೋಳನ್ನು ಹಠಾತ್ತಾಗಿ ಕೇಳಿ ಸಹಾಯವಿಲ್ಲದೆಯೇ ಹೋಗಿ ಯಮನನ್ನು ಪ್ರತಿಭಟಿಸಿ ಬ್ರಾಹ್ಮಣ ಬಾಲಕನ ಹೋದ ಜೀವವನ್ನು ಪುನಃ ತಂದನು. ವ|| ಅರ್ಜುನನ ಪರಾಕ್ರಮವನ್ನು ಲೋಕವೆಲ್ಲವೂ ಹೊಗಳಿತು. ವಿದ್ವಿಷ್ಟವಿದ್ರಾವಣನಾದ ಅರ್ಜುನನು ಭೀಮ ಯುಧಿಷ್ಠಿರ ನಕುಲ ಸಹದೇವರೊಡಗೂಡಿ ಅಯ್ದು ಜನವೂ ಸಭೆಯನ್ನು ನಡೆಸುತ್ತಿರಲು ಒಂದು ದಿವಸ ಧರ್ಮರಾಜನಲ್ಲಿಗೆ ಮಯನು (ದೇವಶಿಲ್ಪಿ) ಪಂಚರತ್ನಗಳಿಂದಲೂ ಚಿನ್ನದಿಂದಲೂ ರಚಿಸಿದ ಮರುಯೋಜನದಳತೆಯ ಚಚೌಕವಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy