SearchBrowseAboutContactDonate
Page Preview
Page 303
Loading...
Download File
Download File
Page Text
________________ ೨೯೮ / ಪಂಪಭಾರತ * ವ|| ಆಗಳ್ ಸ್ವಾಹಾಂಗನಾನಾಥಂ ಸಂಪೂರ್ಣ ಮನೋರಥನಾಗಿ ಖಟ್ವಾಂಗನೆಂಬರಸನ ಯಜ್ಞದೊಳಾತನ ತಂದ ನೃತಸಮುದ್ರಮಂ ಕುಡಿದೊಡಾದ ರೋಗಮಿಂದು ಪೋದುದೆಂದು ನೀರೋಗನಾಗಿ ಮಹಾನುರಾಗಂಬೆರಸು ಪರಸಿ ಪೋದನಾಗಳಿರ್ವರುಮಿಂದ್ರಪ್ರಸ್ಥಕ್ಕೆಯ್ದವಂದು ಚಂll ಇದಿರ್ವರ ಧರ್ಮಜಂ ಬೆರಸು ತನ್ನೊಡವುಟ್ಟಿದರೆಯ್ದೆ ತಳು ಕ ಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ | ಸುದತಿಯರಿಕ್ಕೆ ಚಾಮರಮನಂಗನೆಯರ್ ನಿಜಕೀರ್ತಿ ಲೋಕಮಂ ಪುದಿದಿರೆ ಪೊಕ್ಕನಂದು ನಿಜಮಂದಿರಮಂ ಪರಸೈನ್ಯಬೈರವಂ | ೧೦೫ ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪಂಚಮಾಶ್ವಾಸಂ ನಾಶವಾಗಿ ತಗ್ಗಿದರೂ ತಾನಾಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅಗ್ನಿದೇವನಿಗೆ ಇಂದ್ರನ ಉದ್ಯಾನವಾದ ಖಾಂಡವವನವನ್ನು ಅರ್ಜುನನು ಉಣಿಸಿದನು. ವ|| ಆಗ ಸ್ವಾಹಾದೇವಿಯ ಪತಿಯಾದ ಅಗ್ನಿಯು ಇಷ್ಟಾರ್ಥವನ್ನು ಪೂರ್ಣವಾಗಿ ಪಡೆದವನಾಗಿ ಖಟ್ವಾಂಗನೆಂಬ ರಾಜನ ಯಜ್ಞದಲ್ಲಿ ಅವನು ತಂದಿದ್ದ ತುಪ್ಪದ ಸಮುದ್ರವನ್ನು ಕುಡಿದುದರಿಂದ ಉಂಟಾದ ರೋಗವು ಇಂದು ಪರಿಹಾರವಾಯಿತು ಎಂದು ರೋಗರಹಿತನಾಗಿ ವಿಶೇಷ ಸಂತೋಷದಿಂದ ಕೂಡಿ ಆಶೀರ್ವದಿಸಿ ಹೋದನು. ಆಗ ಕೃಷ್ಣಾರ್ಜುನರಿಬ್ಬರೂ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಸೇರಿದರು. ೧೦೫. ಆಗ ತನ್ನ ಒಡಹುಟ್ಟಿದವರು ಧರ್ಮರಾಯನೊಡಗೂಡಿ ಇದಿರಾಗಿ ಬರಲು ಕಟ್ಟಿದ ತೋರಣವೂ ಇಟ್ಟ ರಂಗವಲ್ಲಿಯೂ ತನ್ನ ಕೀರ್ತಿಯ ದಾಂಗುಡಿಗಳಂತಿರಲು ಸ್ತ್ರೀಯರು ಅಕ್ಷತೆಗಳನ್ನು ಚೆಲ್ಲುತ್ತಿರಲು ಅಂಗನೆಯರು ಚಾಮರವನ್ನು ಬೀಸುತ್ತಿರಲು ತನ್ನ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸುತ್ತಿರಲು ಅಂದು ಪರಸೈನ್ಯಭೈರವನಾದ ಅರ್ಜುನನು ತನ್ನ ಅರಮನೆಯನ್ನು ಪ್ರವೇಶಿಸಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದ ದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಅಯ್ದನೆಯ ಆಶ್ವಾಸ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy