SearchBrowseAboutContactDonate
Page Preview
Page 290
Loading...
Download File
Download File
Page Text
________________ ಪಂಚಮಾಶ್ವಾಸಂ | ೨೮೫ ಕಂ ತಪ ನಿಯಮ ನಿಯತನೀ ಬ ರ್ಪ ಪಾರ್ವನೇನಟ್ಟಿ ತನಗದು ಬೇಡಿದೊಡಿ | ನೃಪಗತದುರಿತರ್ ಸಂಪೂ ರ್ಣಪುಣ್ಯರಾನಲ್ಲದಿಲ್ಲ ಹೇಯ್ ಪುರೊಳರೇ || ೭೦ ವಗ ಎಂಬನೆಗಂ ಸಾಮಂತ ಚೂಡಾಮಣಿಯನೆಯ್ದವಂದು ನಾಲ್ಕು ವೇದಂಗಳೊಳ್ ನಾಲ್ಕುಂ ಋಚೆಂಗಳಂ ಪೇಟ್ಟು ಸಿತ ದೂರ್ವಾಂಕುರ ವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾಲಿಯಪ್ಪುದಂ ಬೇಡಿಕೊಳ್ಳಿಮನೆಚಂ|| ಮಣಿ ಕನಕಾದಿ ವಸ್ತುಗಳನೊಂದುಮನೊಲ್ಲೆನವ್ವುವಾದವಿ ನುಣಿಸೆನಗ ಮೆಯ್ ಪಸಿದು ಜೊಮ್ಮನೆ ಪೋದಪುದೆನ್ನ ವೇಟ್ಟುದಂ | ತಣಿಯುಣಲೀವೊಡೀವುದೆನೆ ಪಾರ್ಥನದೇವಿರಿದಿತ್ತೆನಾವುದು ಣ್ಮುಣಿಸೆನೆ ಪೇಳ್ವೆನೆಂಬ ಪದದೊಳ್ ನರಕಾಂತಕನನ್ನಿದೇವನಂ || ೭೧ ವ|| ಕಾಣಲೊಡಮಣಿದು ಶರಣಾಗತಜಳನಿಧಿಯನೆಮ್ಮೆ ವಂದನೀ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನನಿತ್ತೆಯನಚಂ ಪಸಿದುಣವೇಡಿದಂ ಬಡವನಾನುಣಲಿತ್ತೆನದಲ್ಲದಿಲ್ಲಿ ದಲ್ ಕುಸುರಿಯ ಮಾತುಗಾಸನೆನೆ ಕೇಳು ಮುರಾಂತಕನೇಂ ತಗುಳೆ ಯಿ | ನುಸಿರದಿರೀವ ಮಾತನಿವನುಣ್ಣುದು ಖಾಂಡವಮಿಾತನ ಮುಂ ಪುಸಿದಿವಂತ ಪಾಯಿಸಿದನಿಂದ್ರನೊಳಾದಿ ನರೇಂದ್ರರೆಲ್ಲರಂ || ಯೋಚಿಸಿದನು. ೭೦. ತಪಸ್ಸಿನ ನಿಯಮದಲ್ಲಿ ಆಸಕ್ತನಾದ, ಎದುರಿಗೆ ಬರುತ್ತಿರುವ ಈ ಬ್ರಾಹ್ಮಣನು ತನ್ನ ಇಷ್ಟಾರ್ಥವೇನೆಂಬುದನ್ನು ನನ್ನಲ್ಲಿ ತಿಳಿಸುವುದಾದರೆ ನನಗಿಂತ ಪುಣ್ಯಶಾಲಿಗಳು ಮತ್ತಾರೂ ಇಲ್ಲ. ವ|| ಎನ್ನುವಷ್ಟರಲ್ಲಿ ಅವನು ಸಾಮಂತ ಚೂಡಾಮಣಿಯಾದ ಅರ್ಜುನನ ಸಮೀಪಕ್ಕೆ ಬಂದು ನಾಲ್ಕು ವೇದಗಳಿಂದಲೂ ನಾಲ್ಕು ಋಕ್ಕುಗಳನ್ನು ಹೇಳಿ ಬಿಳಿಯ ಗರಿಕೆಯ ಮೊಳಕೆಯಿಂದ ಕೂಡಿದ ಆಶೀರ್ವಾದರೂಪವಾದ ಶೇಷಾಕ್ಷತೆಯನ್ನು ಕೊಟ್ಟು ಮುಂದೆ ನಿಂತನು. ಅರ್ಜುನನು ನಿಮ್ಮಿಷ್ಟಾರ್ಥವೇನು ಕೇಳಿಕೊಳ್ಳಿ ಎಂದನು. ೭೧. ಮಣಿಕನಕಾದಿ ವಸ್ತುಗಳಾವುದನ್ನೂ ಅಪೇಕ್ಷಿಸುವುದಿಲ್ಲ; ಅವು ಏನು ಮಹಾದೊಡ್ಡವು; ಸಂಪೂರ್ಣವಾದ ರುಚಿಕರವಾದ “ಊಟ ನನಗೆ ಈಗ ಬೇಕು, ಶರೀರವು ಹಸಿವಿನಿಂದ ಜೋಮುಹಿಡಿದು ಹೋಗಿದೆ; ನನಗೆ ಬೇಕಾದ ತೃಪ್ತಿಕರವಾದ ಊಟವನ್ನು ಕೊಡುವುದಾದರೆ ಕೊಡಿ ಎನ್ನಲು ಪಾರ್ಥನು ಇದೇನು ದೊಡ್ಡದು, ಕೊಟ್ಟಿದ್ದೇನೆ. ಯಾವುದು ನೀವು ಊಟಮಾಡುವ ಆಹಾರ ಎಂದು ಕೇಳಿದನು. 'ಹೇಳುತ್ತೇನೆ' ಎನ್ನುವಷ್ಟರಲ್ಲಿ ನರಕಾಂತಕನಾದ ಶ್ರೀಕೃಷ್ಣನು ಅಗ್ನಿದೇವನನ್ನು ವ|ಕಂಡು, ತಕ್ಷಣವೇ ಗುರುತಿಸಿ ಶರಣಾಗತ ಸಮುದ್ರನಾದ ಅರ್ಜುನನ ಸಮೀಪಕ್ಕೆ ಬಂದು 'ಈ ಬಕವೇಷಿಯು ನಿನ್ನನ್ನು ಏನು ಬೇಡಿದನು, ನೀನು ಇವನಿಗೆ ಏನನ್ನು ಕೊಡುತ್ತೇನೆಂದೆ' ಎಂದು ಕೇಳಿದನು. ೭೨. 'ಬಡವನು ಹಸಿದು ಊಟವನ್ನು ಬೇಡಿದನು; ನಾನು ಕೊಡುತ್ತೇನೆಂದೆ, ಅದಲ್ಲದೆ ಇನ್ನು ಮತ್ತಾವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy