SearchBrowseAboutContactDonate
Page Preview
Page 289
Loading...
Download File
Download File
Page Text
________________ ೨೮೪ / ಪಂಪಭಾರತಂ ಮನೆನಿತಾನುಂ ತಂದ ಸುಗಂಧದ್ರವ್ಯಂಗಳುಮನರಸಿಯರ್ಗಮರಸುಮಕ್ಕಳುಮಿತ್ತು ತಾಮಿರ್ವರುಂ ಉಟ್ಟು ತೊಟ್ಟು ಪೂಸಿಯುಂ ನೆಲೆಯ ಕೆಯ್ದೆಯು ದಿವ್ಯಾಹಾರಂಗಳನಾರೋಗಿಸಿ ಕೆಯ್ದಟ್ಟಿ ಕೊಂಡು ತಂಬುಲಂಗೊಂಡಿಂ ಬಟೆಯಮಚ್ಯುತಂ ವಿಕ್ರಮಾರ್ಜುನನ ಕೆಯ್ಯಂ ಪಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಂಗಳಂ ತೋಲೆಂದು eroll ಕೊಂದೆನವುಂಕಿ ಸಂದ ಖರಧೇನುಕರಂ ಮುಳಿಸಿಂದಮಿಲ್ಲಿ ಕಾ ಳಿಂದಿಯ ಪಾವನಪ್ಪಳಿಸಿದೆಂ ಪಿಡಿದೀ ಸಿಲೆಯಲ್ಲಿ ಮತ್ತಮಾ | ಟಂದರನುಗ್ರದೈತರನಳುರ್ಕೆಯಿನಿಕ್ಕಿದೆನಿಲ್ಲಿ ಮುನ್ನಮೆಂ ದಂದು ಗುಣಾರ್ಣವಂಗ ಮಧು ಕೈಟಭಹಾರಿ ತೊಲ್ಲು ತೋಟದಂ ||೬೮ ವ! ಅಂತಾ ವನಾಂತರಾಳಮಂ ತೋಡಲು ತೋರುತ್ತಿರ್ಪಗಮನೂನದಾನಿಯ ದಾನದುದ್ದಾನಿಯ ದಾನಮನಾನಲಾನಲ್ಲದೆ ಪೇರ್ ನೆಲೆಯರೆಂಬಂತ ತೊಟ್ಟನೆ ಕಟ್ಟಿದಿರೊಳ್ ಕಂ।। ಉರಿವುರಿಯನೆ ತಲೆನವಿರನು ಕರಿಸಿರೆ ಸಂತಪ್ತ ಕನಕವರ್ಣಮುಮುರಿಯೊಂ | ದುರುಳಿವೊಲಿರೆ ಜಠರಾಗಳ ನುರಿವಿನಮಂತೊರ್ವನುರಿಯ ಬಣ್ಣದ ಪಾರ್ವಂ | ೬೯ ವ|| ಅಂತು ವರ್ಷನಂ ಕಂಡು ಸಾಮಂತಚೂಡಾಮಣಿ ತನ್ನೊಳಿಂತೆಂದು ಬಗೆದಂಸುಗಂಧದ್ರವ್ಯಗಳನ್ನೂ ರಾಣಿಯರಿಗೂ ರಾಜಕುಮಾರರಿಗೂ ಕೊಟ್ಟು ತಾವಿಬ್ಬರೂ ವಸ್ತ್ರಗಳನ್ನು ತೊಟ್ಟು ವಾಸನಾದ್ರವ್ಯವನ್ನು ಲೇಪಿಸಿಕೊಂಡು ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡರು. ಆಹಾರಗಳನ್ನು ಭುಂಜಿಸಿ ಕೈಗಂಧವನ್ನೂ ಲೇಪಿಸಿ ತಾಂಬೂಲ ಸ್ವೀಕರಿಸಿದ ಮೇಲೆ ಕೃಷ್ಣನು ಅರ್ಜುನನ ಕಯ್ಯನ್ನು ಹಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಗಳನ್ನು ತೋರಲೆಂದು ಹೊರಟನು. ೬೮. ಪ್ರಸಿದ್ಧರಾದ ಖರಧೇನು ಕುಂಭರೆಂಬ ರಾಕ್ಷಸರನ್ನು ಇಲ್ಲಿ ಒತ್ತಿ ಕೋಪದಿಂದ ಕೊಂದೆನು. ಯಮುನಾನದಿಯಲ್ಲಿದ್ದ ಕಾಳಿಂಗನೆಂಬ ಹಾವನ್ನು ಹಿಡಿದು ಈ ಕಲ್ಲಿನ ಮೇಲೆ ಅಪ್ಪಳಿಸಿದೆನು. ಮತ್ತು ಹಿಂದಿನ ಕಾಲದಲ್ಲಿ ಮೇಲೆಬಿದ್ದ ಭಯಂಕರರಾದ ರಾಕ್ಷಸರನ್ನು ಪರಾಕ್ರಮದಿಂದ ಇಲ್ಲಿ ಇಕ್ಕಿದೆನು ಎಂದು ಆ ದಿನ ಗುಣಾರ್ಣವನಾದ ಅರ್ಜುನನಿಗೆ, ಮಧುಕೈಟಭರಿಗೆ ಶತ್ರುವಾದ ಕೃಷ್ಣನು ಸುತ್ತಾಡಿ ತೋರಿಸಿದನು. ವ|| ಹಾಗೆ ವನದ ಒಳಭಾಗವನ್ನು ತೊಳಲಿ ತೋರುತ್ತಿರುವಷ್ಟರಲ್ಲಿ ಕುಂದಿಲ್ಲದೆ ದಾನಮಾಡುವವನ ದಾನವನ್ನು ಸ್ವೀಕರಿಸಿದುದಕ್ಕೆ ನಾನಲ್ಲದೆ ಬೇರೆಯವರು ಸಮರ್ಥರಾಗಲಾರರು ಎನ್ನುವ ಹಾಗೆ ಕಟ್ಟಿದಿರಿನಲ್ಲಿ - ೬೯. ಉರಿಯುತ್ತಿರುವ ಜ್ವಾಲೆಯನ್ನೇ ತಲೆಯ ಕೂದಲು ಅನುಕರಿಸುತ್ತಿರಲು ಅವನ ಪುಟವಿಟ್ಟ ಚಿನ್ನದ ಹೊಂಬಣ್ಣವು ಬೆಂಕಿಯ ಒಂದು ಉಂಡೆಯಂತಿರಲು ಜಠರಾಗ್ನಿಯ ಉರಿಯಿಂದ ಕೂಡಿ (ಹಸಿವಿನಿಂದ ಕೂಡಿದ) ಬೆಂಕಿಯ ಬಣ್ಣದ ಬ್ರಾಹ್ಮಣನೊಬ್ಬನು ವು ಬರುತ್ತಿರುವುದನ್ನು ಕಂಡು ಸಾಮಂತಚೂಡಾಮಣಿ ತನ್ನಲ್ಲಿ ಹೀಗೆಂದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy