SearchBrowseAboutContactDonate
Page Preview
Page 287
Loading...
Download File
Download File
Page Text
________________ ೨೮೨) ಪಂಪಭಾರತಂ . .. ಕಂ| ಆದಲೆ ನೀರ್ ಗುಂಡಿತ್ತಂ ದೀದಿಯೊಳೆ ನಿಂದು ಸತಿಗೆ ಹರಿಗಂ ತೋಜು | ತ್ಯಾದರದೆ ಜಾನುದzಮು ರೋದಷ್ಟಂ ಕಂಠದಪ್ಪಮೆಂಬಳವಿಗಳಂ | ವ|| ಅಂತು ಜಗುನೆಯ ಮಡುವಂ ತಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳಮರ, ಬಗಿದೊಗದ ಮೊಲೆಗಳನ್ನೇಳನೆಳಳ್ಳಾಡಿ ತಳ್ಳಂಕಗುಟ್ಟ ನೀರಾಟಮಾಡುವಾಗಳ್ಚಂ|| ಪೊಸತಲರ್ದೊಂದು ತಾವರೆಯಗತ್ತು ಮುಖಾಮನೊಂದು ತುಂಬಿ ಚುಂ ಬಿಸಿ ಸತಿ ಬೆರ್ಚಿ ಬೆಳಳಿಸಿ ನೋಂದುಮಾಕೆಯ ಕಣ್ಣ ಬೆಳ್ಳುಗಳ | ಪಸರಿಸೆ ತುಂಬಿಗಳ ಕುವಲಯಂಗಳರಳುವ ಗತ್ತು ಮತ್ತೆಯುಂ ಮುಸುಳುವುದುಂ ಗುಣಾರ್ಣವನನಾಗಳವಳ್ ಭಯದಿಂದಮಪ್ರಿದಳ 11೬೩ ಅಸಿಯಳವುಂಕಿ ಕೆಂದಳದೊಳೊತ್ತುವ ನೀರ್ ಮೊಗಮಂ ಪಳಂಚಿ ಬಂ ಚಿಸಲಿನಿಸಾನುಮಂ ಮುಲುಗಿದಾಗಡ ಭೋಂಕನೆ ಬಂದು ಬಾಳೆಮಿಾನ್ | ಮುಸು ನಿರಂತರಂ ಕರ್ದುಕೆ ಸತ್ಕವಿಯೋಲ್‌ ಸಮನಾಗಿ ಮಾರ್ಗಮಂ ಪೊಸಯಿಸಿ ದೇಸಿಯಂ ಪೊಸತುಮಾಡಿದಳೊರ್ವಳಪೂರ್ವರೂಪದಿಂ* 11 ೬೪ ವ ಹಾಗೆ ಪ್ರವೇಶಿಸಿದಾಗ -೬೨. ಆ ಕಡೆಯಲ್ಲಿ ನೀರು ಆಳವಾಗಿದೆ ಎಂದು ಅರ್ಜುನನು ಈ ಕಡೆಯಲ್ಲಿಯೇ ನಿಂತು ಸುಭದ್ರೆಗೆ ಮೊಳಕಾಲವರೆಗೆ ಮುಳುಗುವ ಎದೆಯವರೆಗೆ ಮುಳುಗುವ ಕತ್ತಿನವರೆಗೆ ಮುಳುಗುವ ಪ್ರಮಾಣಗಳನ್ನು ಆದರದಿಂದ ತೋರಿಸಿದನು. ವll ಯಮುನಾನದಿಯ ಮಡುವನ್ನು ಆ ರಾಣಿಯರು ತಮ್ಮದಪ್ಪವಾದ ಪಿಗ್ರೆಗಳ ತಾಗುವಿಕೆಯಿಂದ ಭಾಗಮಾಡಿ ಮೊಲೆಗಳ ಘಟ್ಟಣೆಯಿಂದ ತುಳುಕಾಡಿ ಜಲಕ್ರೀಡೆಯಾಡಿದರು. ೬೩. ಮುಖಕಮಲವನ್ನು ಒಂದು ದುಂಬಿಯು ಒಂದು ಹೊಸದಾಗಿ ಅರಳಿದ ಕಮಲವೆಂದೇ ಭ್ರಮಿಸಿ ಮುತ್ತಿಡಲು ಆ ಸತಿಯು ಹೆದರಿ ಭಯದಿಂದ ನೋಡುತ್ತಿರಲು ಅವಳ ಕಣ್ಣಿನ ಬಿಳಿಯ ಬಣ್ಣವು ಪ್ರಸರಿಸಲು ಅದನ್ನು ದುಂಬಿಗಳ ಅರಳಿದ ಕನೈದಿಲೆಗಳೆಂದೇ ಭ್ರಾಂತಿಗೊಂಡು ಪುನಃ ಮುತ್ತಲು ಅವಳು ಭಯದಿಂದ ಗುಣಾರ್ಣವನನ್ನು ಆಲಿಂಗನಮಾಡಿಕೊಂಡಳು. ೬೪. ಕೃಶಾಂಗಿಯಾದ ಒಬ್ಬಳು ಕೆಂಪಾದ ತನ್ನ ಅಂಗೈಯಿಂದ ಅಮುಕಿ ಚೆಲ್ಲಿದ ನೀರು ತನ್ನ ಮುಖವನ್ನು ತಗುಲಲು ಮತ್ತೊಬ್ಬಳು ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗಲೆ ಒಂದು ಬಾಳೆಯ ಮೀನು ಇದ್ದಕ್ಕಿದ್ದ ಹಾಗೆ ಬಂದು ಮುತ್ತಿಕೊಂಡು ಒಂದೇ ಸಮನಾಗಿ ಕಚ್ಚಲು ಅವಳು ಸತ್ಯವಿಗೆ ಸಮನಾಗಿ ಮಾರ್ಗೀಶೈಲಿಯನ್ನು ಹೊಸದಾಗಿಸಿ ದೇಸೀಶೈಲಿಯ ಸೌಂದರ್ಯವನ್ನು ಅಪೂರ್ವರೀತಿಯಿಂದ ಹೊಸತುಮಾಡಿದಳು.* * ಈ ಪದ್ಯದ ಅರ್ಥವು ಸ್ಪಷ್ಟವಾಗಿಲ್ಲ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy