SearchBrowseAboutContactDonate
Page Preview
Page 286
Loading...
Download File
Download File
Page Text
________________ ಪಂಚಮಾಶ್ವಾಸಂ | ೨೮೧ ಕಂಒತ್ತಿದ ತಳ್ಳಿತ್ತಿದ ತಟ್ಟಿ ಮುತ್ತಿನ ಪೊಸದುಡಿಗೆ ತಳಿರ ಸೋರ್ಮುಡಿ ಮನಮಃ | ಪತ್ತಿಸಿ ಜೊಸ ಮದನೋ ನಲ್ಲೆಯರವಯವದೆ ಬಂದರರಸಿಯರರೆಬರ್ || ಇದು ಮೃದು ಕಳಹಂಸದ ರವ ಮಿದು ನೂಪುರ ನಿನದಮಿದು ರಥಾಂಗಯುಗಂ ಮ || ಅದು ಕುಚಯುಗವಿದು ಸರಸಿಜ ಮಿದು ಮೊಗಮನಿಸಿದುದು ನೆರೆದ ಪೆಂಡಿರ ತಂಡಂ || ೬೦ ವ|| ಅಂತು ಮದನನ ಮನೋರಾಜ್ಯಮ ಬರ್ಪಂತೆ ಬಂದು ತಂಡತಂಡದ ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಂ ಕದಳಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ, ಕಂ || ನೀಲದ ಬೆಳ್ಳಿಯ ಗಾಡಿಯು ಮೀ ಲಲಿತಾಂಗಿಯರ ಕಣ್ಣ ಪೋಲುಂ ನಾಂ ಕ || ಹೇಳಿದಮಾಗಿರವಂದಳ ವಾಳಗಳೊಡಿದುವು ಬಾಲೆಯರ್ ಪುಗುವಾಗಳ್ || ೬೧ ವ|| ಅಂತು ಪೊಕ್ಕಾಗಲ್ ಯಮುನಾನದಿಯನ್ನು ಮೆಚ್ಚಿ ಹೊಗಳಿ ತಾನೂ ಕೃಷ್ಣನೂ ಅಂತಃಪುರಪರಿವಾರದೊಡನೆ ಕೂಡಿ ನೀರಾಟವಾಡಲು ಬಯಸಿದರು. ೫೯. ಲೇಪನಮಾಡಿಕೊಂಡಿರುವ ಶ್ರೀಗಂಧಾದಿಲೇಪನವೂ ಎತ್ತಿ ಹಿಡಿದಿರುವ ಛತ್ರಿಗಳೂ ಮುತ್ತಿನ ಹೊಸಒಡವೆಗಳೂ ಚಿಗುರಿನಿಂದ ಅಲಂಕರಿಸಿದ ಜಾರುಗಂಟೂ ಮನಸ್ಸನ್ನು ಪ್ರವೇಶಿಸಿ ಆಕರ್ಷಿಸುತ್ತಿರಲು ಕಾಮದಿಂದ ಹುಚ್ಚೆದ್ದ ಕೆಲವರು ರಾಣಿಯರು ಲೀಲೆಯಿಂದ ಅಲ್ಲಿಗೆ ಬಂದರು. ೬೦. ಅಲ್ಲಿ ನೆರೆದ ಹೆಂಗಸರ ಸಮೂಹವು ಇದು ಮೃದುವಾದ ಕಳಹಂಸಧ್ವನಿ; ಇದು ಕಾಲ್ಕಡಗದ ಶಬ್ದ; ಇದು ಚಕ್ರವಾಕಪಕ್ಷಿಗಳ ಜೋಡಿ, ಇದು ಮೊಲೆಗಳ ಜೋಡಿ, ಇದು ಕಮಲ, ಇದು ಮುಖ ಎನ್ನಿಸಿತು. ವll ಹಾಗೆ ಮನ್ಮಥನ ಮನೋರಾಜ್ಯವೇ ಬರುವಂತೆ ಬಂದು ಗುಂಪು ಗುಂಪಾದ ರಮಣೀಯರಾದ ಆ ಸೀಜನರೊಡನೆ ಕೂಡಿ ನೀರಿಗೆ ಪಂತರತ್ನಗಳನ್ನು ಹರಡಿಸಿ ಶ್ರೀಗಂಧದ ವಾಸನೆಯನ್ನು ಕುಂಕುಮಕೇಸರಿ ಮತ್ತು ಕಸ್ತೂರಿಯ ಬಗ್ಗಡಗಳನ್ನು ಕದಡಿ ನದಿಯನ್ನು ಪ್ರವೇಶಿಸಿದರು. ೬೧. ನೀಲರತ್ನದ, ಬೆಳ್ಳಿಯ, ಸೌಂದರ್ಯವನ್ನು ಹೋಲುವ ಕಣ್ಣುಗಳನ್ನುಳ್ಳ ಈ ಕೋಮಲೆಯರ ಮುಂದೆ ನಾವು ಹೀನವಾಗಿ ಕಾಣಿಸಿಕೊಳ್ಳಲಾರೆವು ಎಂದು ಅಲ್ಲಿದ್ದ ಎಳೆಯ ಮೀನುಗಳು ಆ ಬಾಲೆಯರು ಕೊಳವನ್ನು ಪ್ರವೇಶಿಸಿದಾಗ ಓಡಿಹೋದುವು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy