SearchBrowseAboutContactDonate
Page Preview
Page 269
Loading...
Download File
Download File
Page Text
________________ ೨೬೪ | ಪಂಪಭಾರತಂ ವ|| ಅದನೀಕೆಯುಮೆನಗೆರಡಳಿಯದ ನಲ್ಲ ಮನಂದೋಚುವುದು ಸಲ್ಲೆದೋಚುವುದು ಮಾವುದು ದೋಸವೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಯ ಪೋಗಲೆಂದು ಕನ್ನೆಯಂ ಚೂತಲತಿಕೆಯೆಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತಂದಳಚಂ|| ಮದನನ ಕಾಯ್ದು ಮಾಕ್ಕೆ ಸರಸೀರುಹಜನನ ಮತ್ತು ತೀರ್ಗೆ ಕೂ qುದಿ ಮನದಿಂದಮಿಂದು ಪೊಲಿಮಾಜುಗೆ ಚಂದ್ರಕರಂಗಳಿಂದು ತ | ಇದುವೆರ್ದಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ ಟದೊಳಿಸಿದಕ್ಕೆ ಮತ್ಸಗೆ ಬೇಜ್ ಪಳಾಳದೊಳೇಂ ಗುಣಾರ್ಣವಾ ೧೮ ಬೆಳಗುವ ಸಾಂದ್ರಚಂದ್ರಕಿರಣಾಳಿಗಳ್ಳಿ ಗಳಿಂದಮೆತ್ತಮು ಜಳಿಸುವಿರುಳಳಂ ಕಳೆದುಮೆಯ ತಳಿರ್ತಳಮಾವುಮಂ ಮನಂ | ಗೋಳ ನಡ ನೋಡಿಯುಂ ಕಿವಿಯನಿಂದೋಳದಿಂಚರಕಾಂತುಮಿಂತು ಕೊ ಮಳೆಯಸು ಮತ್ತಮಾಯೊಡಲೊಳಿರ್ದುದಿದಮ್ಮಯ ಸೈಫು ಭೂಪತೀ || ೧೯ ವ! ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳು ಸಂತಸಂಬಟ್ಟು ಚಕ್ತಿ ಚಕ್ರಕಾವರ್ತಿಯಪುದಳೆಂದಾ ವನಾಂತರಾಳಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು ಅಚ್ಚೆತ್ತಿದ ಹಾಗೆ ಅಂಟಿಕೊಂಡು ಮನ್ಮಥನು ಮುದ್ರಿಸಿದ ಪ್ರೇಮಮುದ್ರೆಗಳಂತಿವೆ. ವ|| ಆದುದರಿಂದ ಈಕೆಯು ನನಗೆ ನೈಜವಾದ ಮನಸ್ಸನ್ನು ತೋರಿಸುವುದರಲ್ಲಿಯೂ ಸಲಿಗೆಯನ್ನು ತೋರಿಸುವುದರಲ್ಲಿಯೂ ದೋಷವೇನಿದೆ? ಎಂದು ಆಕೆ ಕುಳಿತಿದ್ದ ಚಿಗುರುಹಾಸಿಗೆಯಲ್ಲಿಯೇ ಕುಳಿತನು. ಲಜ್ಜೆಪಟ್ಟು ಹೋಗಲೆಂದು ಎದ್ದ ಕನೈಯನ್ನು ಚೂತಲತಿಕೆಯೆಂಬ ಸಖಿಯು ಗದರಿಸಿ ಕುಳ್ಳಿರಿಸಿ ಗಂಧೇಭವಿದ್ಯಾಧರನಾದ ಅರ್ಜುನನನ್ನು ಕುರಿತು ಹೀಗೆಂದಳು - ೧೮. ಮನ್ಮಥನ ಕೋಪ ನಿಲ್ಲಲಿ; ಬ್ರಹ್ಮನ ಆಶೆ ತೀರಲಿ, ಹೃದಯದ ವಿರಹತಾಪ ಮನಸ್ಸಿನಿಂದ ಹೊರಹೋಗಲಿ, ಚಂದ್ರಕಿರಣ ಗಳು ಇಂದು ಹೃದಯಕ್ಕೆ ತಂಪನ್ನುಂಟುಮಾಡುವುದಾಗಲಿ, ಕೆಂದಳಿರ ಹಾಸಿಗೆಯ ತಾಪವು ಹೋಗಲಿ. ನಿನ್ನನ್ನು ಸೇರುವುದರಿಂದ ನನ್ನ ಸಖಿಗೆ ಸವಿಯುಂಟಾಗಲಿ, ಗುಣಾರ್ಣವನೇ ಇತರ ವ್ಯರ್ಥಾಲಾಪದಿಂದ ಏನು ಪ್ರಯೋಜನ? ೧೯. ಅರ್ಜುನ! ಪ್ರಕಾಶಮಾನವೂ ದಟ್ಟವೂ ಆದ ಚಂದ್ರಕಿರಣಗಳ ಸಮೂಹದಿಂದ ಎಲ್ಲೆಡೆಯೂ ವಿಜೃಂಭಿಸುವ ರಾತ್ರಿಗಳನ್ನು ಕಳೆದು ಸಂಪೂರ್ಣವಾಗಿ ಚಿಗುರಿದ ಎಳೆಯ ಮಾವಿನ ಮರಗಳನ್ನು ತೃಪ್ತಿಯಾಗುವ ಹಾಗೆ ದೀರ್ಘವಾಗಿ ನೋಡಿಯೂ ಹಿಂದೋಳರಾಗದ ಇಂಪಾದ ಧ್ವನಿಗೆ ಕಿವಿಗೊಟ್ಟೂ ಈ ಕೋಮಳೆಯಾದ ಸುಭದ್ರೆಯ ಪ್ರಾಣವು ಈ ಶರೀರದಲ್ಲಿಯೇ ಇದ್ದುದು ನಮ್ಮ ಅದೃಷ್ಟವೆಂದೇ ಹೇಳಬೇಕು. ವ|| ಎನ್ನುವಷ್ಟರಲ್ಲಿ ಅರ್ಜುನ ಸುಭದ್ರೆಯರ ವಿರಹತಾಪಕ್ಕೆ ಸಂಬಂಧಪಟ್ಟ ಮಾತುಗಳನ್ನು ಕಿವಿಯಿಂದ ಕಿವಿಗೆ ಕೇಳಿ ಸಂತೋಷಪಟ್ಟು ಶ್ರೀಕೃಷ್ಣನು ಕಪಟೋಪಾಯವುಳ್ಳವನಾದುದರಿಂದ ಆ ವನದ ಮಧ್ಯಭಾಗಕ್ಕೆ ಒಬ್ಬನೇ ಬಂದು ಮಾಧವೀಮಂಟಪವನ್ನು ಪ್ರವೇಶಿಸಿ ಅವರಿಬ್ಬರ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy