SearchBrowseAboutContactDonate
Page Preview
Page 268
Loading...
Download File
Download File
Page Text
________________ ಪಂಚಮಾಶ್ವಾಸಂ | ೨೬೩ ಚoll ಪಡಿದೆವಂದದಿಂದಮರ್ದಯುಂ ತತೆದತ್ತು ಪೊದಳ ಸಂಕೆಯಿಂ ನಡುಕಮುಮಾಗಳುಬದಿಗಮಾದುದು ಸಾಧ್ವಸದಿಂ ಬೆಮರ್ ಬೆಮ | ರ್ವೆಡೆಗಳಿನು ಪೂಣಿದುದು ಕಣ್ ನಡ ನೋಡದೆ ತಪ್ಪು ನೋಡಿ ನಾ ಹೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚಗಂಡನಂ || ೧೫ ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಧಿಯೊಳ್ ಮೂಡಿ ಮುಲುಗಾಡಿದರಂತೆ ಕಿಟೆದು ಚೇಗಮನಿರ್ತು ತನಿಂ ತಾನೆ ಚೇತರಿಸಿ ಸುಭದ್ರಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇವಾಡಿವದ ಸಸಿಯಂತ ಸೊಗಯಿಸುವಸಿಯಳಂ ಕಂಡು- ಚಂl ಸರಸ ಮೃಣಾಳನಾಳವಳಯಂಗಳೊಳುಚ್ಚಳ ವೃತ್ತ ಮೌಕ್ತಿಕಾ ಭರಣ ಗಣಂಗಳೊಳ್ ಶಶಿಕರಂಗಳೊಳಾದ ಬೇಟದೊಳ್ ಕನ || qುರಿವರ್ದ ನೋಡ ನೋಡಲೊಡನಾಳದುದೇನಮರ್ದಿಂದ ತೊಯ್ದು ಕ ಪುರವಳುಕಿಂದಜಂ ಕಡೆದು ಕಂಡರಿಷಂ ವಲಮೆನ್ನ ನಳಂ || ೧೬ ಉll ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಳನಾ ಇತ್ತು ದುಕೂಲದೊಂದು ಮಡಿವಾಸಿದ ಮಾಜವೊಲಾಯ್ತು ಮೆಯ್ಯನಿ 1 ಕುತ್ತಿಗೆ ಪತ್ನಿ ಕೆಂದಳಿರ್ಗಳಚ್ಚುಗಳಚ್ಚಿದಂತೆ ಕಾಮನ ಚೊತ್ತಿದ ಬೇಟದಚ್ಚುಗಳ ಮಾಯೊಳಿರ್ದುದು ಮಯ್ ಸುಭದ್ರಯಾ || ೧೭ ನೋಡಿದಳು. ೧೫. ಪಡೆಮೆಚ್ಚೆಗಂಡನಾದ ಅರ್ಜುನನನ್ನು ನೋಡಿದ ತಕ್ಷಣವೇ ಆ ಸತಿಗೆ ಬಾಗಿಲು ತೆರೆಯುವಂತೆ ಎದೆಯು ತೆರೆಯಿತು, ಉಂಟಾದ ಸಂದೇಹದಿಂದ ನಡುಕವೂ ವಿಶೇಷವಾಗಿ ತಲೆದೋರಿತು; ಸಡಗರದಿಂದ ಬೆವರು, ಬೆವರುವ ಕಡೆಗಳಿಂದ ಹೆಚ್ಚಿ ಹೊರಸೂಸಿತು; ಕಣ್ಣುಗಳ ಲಜ್ಜೆಯಿಂದ ನೇರವಾಗಿ ನೋಡದೆ ತಪ್ಪು (ಓರೆ) ದೃಷ್ಟಿಯಿಂದ ನೋಡಿದುವು. ವ|| ಆಗ ಸುರತಮಕರಧ್ವಜನಾದ ಅರ್ಜುನನೂ ಕೂಡ ಮನ್ಮಥನ ಅಮೃತಸಮುದ್ರದಲ್ಲಿ ಮೂಡಿ ಮುಳುಗಿದವರ ಹಾಗೆ ಕೆಲವು ಕಾಲವಿದ್ದು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೆ ನೋಡಿ ತನ್ನಲ್ಲುಂಟಾದ ವಿರಹದಿಂದ ಕೃಶನಾಗಿ ಶುಕ್ಲಪಕ್ಷದ - ಪಾಡ್ಯದ ಚಂದ್ರನ ಹಾಗೆ ಸೊಗಯಿಸುವ ಕೃಶಾಂಗಿಯನ್ನು ಕಂಡು-೧೬. ಚಂದ್ರ ಕಿರಣಗಳಿಂದ ಕಡಮೆಯಾಗದೆ ವಿರಹದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆಯು ರಸಯುಕ್ತವಾದ ತಾವರೆಯ ದಂಟಿನ ಕಂಕಣಗಳಿಂದಲೂ ಹೊಳೆಯುವ ದುಂಡು ಮುತ್ತಿನ ಒಡವೆ ಗಳಿಂದಲೂ ಕೂಡಿದ ಸುಭದ್ರೆಯನ್ನು ನೋಡಿದೊಡನೆಯೇ ಆರಿ ಹೋಯಿತು; ನಿಜವಾಗಿಯೂ ಬ್ರಹ್ಮನು ಈ ನನ್ನ ಪ್ರಿಯಳನ್ನು ಅಮೃತದಲ್ಲಿ ನೆನೆಸಿ ಕರ್ಪೂರದ ಹಳುಕಿನಿಂದ ಕಡೆದು ಕೊರೆದಿದ್ದಿರಬೇಕು. ೧೭. ದುಂಡಾದ ಮೊಲೆಗಳಿಂದ * ಉದುರಿದ ಶ್ರೀಗಂಧದಿಂದ ಚಿಗುರಿನ ಹಾಸಿಗೆಯು ಬಿಳಿಯ ಬಣ್ಣವನ್ನು ತಾಳಿದೆ. ರೇಷ್ಮೆಯ ಮಡಿವಸ್ತ್ರವು ಮಾಸಿದ ವಸ್ತದಂತಾಗಿದೆ. (ಹಾಸಿಗೆಯ ಮೇಲ) ಮೈಯನ್ನಿಟ್ಟಿರಲಾಗಿ ಆ ಸುಭದ್ರೆಯ ಮೈಯಿ ಕೆಂಪು ಚಿಗುರುಗಳು ಮುದ್ರೆಗಳಿಂದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy