SearchBrowseAboutContactDonate
Page Preview
Page 266
Loading...
Download File
Download File
Page Text
________________ ಪಂಚಮಾಶ್ವಾಸಂ | ೨೬೧ ಚಂ11 ಬಿರಿದಲರೂ ತಅಂಬೊಳೆವ ತುಂಬಿ ತಳಿರ್ತಳಮಾವು ಮಾವಿನಂ ಕುರಮನೆ ಕರ್ಚಿ ಬಿಚ್ಚಟಪ ಕೋಗಿಲೆ ಕಂಪನವುಂಕಿ ಹೊತ್ತು ನಿ | ತರಿಪೇರಲೆಂಬಿವೇವುವೂ ಮದೀಯ ಮನೋಗತ ಕಾಮ ರಾಗ ಸಾ ಗರದೊದವಿಂಗೆ ನyಳ ವಿಲೋಕನಚಂದ್ರಿಕೆಯೊಂದೆ ಸಾಲದೇ || ೧೧ ವಗ ಎನುತ್ತುಂ ಬಂದು ಬಿರಿದ ಬಿರಿಮುಗುಳಳೊಳೆಗಿ ತುಲುಗಿದಶೋಕ ಲತಯನರ್ತು ನೋಡಿಚಂil ಅಲರಲರ್ಗಣ್ ಮುಗುಳ್ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ ಗೊಲೆ ಮೇಲೆ ಕೆಂಪು ಕೆಂಪು ಕೋನ ಸೆಳುಗುರ್ಗ ಕುಡಿ ತೋಳ ನಯಂ ನಯಂ| ನಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪಂತಲ್ಲಿದೆಂತೂ ಕೂ ಮಲಲತೆ ಪೇಟಿಮೆನ್ನಿನಿಯಳಂ ಮಣಿಗೊಂಡು ಸೂಜಿಗೊಂಡುದೋ || ೧೨ ವ|| ಎಂದು ಕಿಟೆದಾನುಂ ಬೇಗಮಳೆ ಮರುಳಾದಂತಾ ಲತೆಯೊಳ್ ಪಳೆಗಾಳಗಂಗಾದಿ ಬರೆವರೆ ಕಾಮದೇವನಿಮಾವಿನ ನನೆಯನಂಬುಗಳುಮನವಣಿ ಬಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡ ಶಬ್ದದಿಂದ ರಮ್ಯವೂ ದಟ್ಟವೂ ಹೂವಿನ ಪರಾಗಗಳಿಂದ ಮಾಸಲಾದ ಮರಳಿನಿಂದ ಬಿಳುಪಾಗಿ ಮಾಡಲ್ಪಟ್ಟ ಭೂಭಾಗವನ್ನುಳ್ಳುದೂ ಅರಳಿರುವ ಚಿಗುರುಗಳ ಲೀಲೆಗೊಳಗಾದ ಮದಿಸಿರುವ ಕೋಗಿಲೆಗಳಿಗೆ ಉಲ್ಲಾಸವನ್ನುಂಟುಮಾಡುವುದೂ ತುಂತುರುಮಳೆಯಿಂದ ದೀರ್ಘವಾದ ಮೋಡ ಕವಿದ ದಿನದಂತಿರುವುದೂ ಆದ ವನವನ್ನು ಅರ್ಜುನನು ಸಮೀಪಿಸಿದನು. ೧೧. ಅರಳಿದ ಪುಷ್ಟದಲ್ಲಿ ವಿಧವಿಧವಾಗಿ ಹೊಳೆಯುವ ದುಂಬಿಯೂ ಚಿಗುರಿದ ಎಳೆಮಾವೂ ಮಾವಿನ ಮೊಳಕೆಯನ್ನೇ ಕಚ್ಚಿ ಉತ್ಸಾಹಗೊಳ್ಳುವ ಕೋಗಿಲೆಯೂ ವಾಸನೆಯನ್ನು ತನ್ನಲ್ಲಿ ಅಡಕಿಕೊಂಡು ಹೊತ್ತು ದಾಟಿ ಬರುವ ಗಾಳಿಯೂ (ವಿರಹ ಪರಿಹಾರಕ್ಕೆ) ಏನುಮಾಡಬಲ್ಲವು. ನನ್ನ ಮನಸ್ಸಿನಲ್ಲಿ ಸೇರಿರುವ ಮನ್ಮಥಪ್ರೇಮಸಾಗರದ ಅಭಿವೃದ್ಧಿಗೆ ಸುಭದ್ರೆಯ ನೋಟವೆಂಬ ಬೆಳದಿಂಗಳಿನ ಸಹಾಯವೊಂದೆ ಸಾಲದೆ ? ವ|| ಎನ್ನುತ್ತ ಬಂದು ಅರಳಿದ ಬಿರಿಮುಗುಳಿನಿಂದ ಬಾಗಿ ಕಿಕ್ಕಿರಿದಿದ್ದ ಅಶೋಕದ ಬಳ್ಳಿಯನ್ನು ಪ್ರೀತಿಸಿ ನೋಡಿ ೧೨. ಈ ಬಳ್ಳಿಯ ಹೂವು ಅವಳ ಹೂವಿನಂತಿರುವ ಕಣ್ಣು, ಇದರ ಮೊಗ್ಗು ಅವಳ ನಗೆ, ಇದರ ಬಳ್ಳಿ ಅವಳ ತೊಡೆಗಳು, ಇಲ್ಲಿಯ ದುಂಬಿ ಅವಳ ಮುಂಗುರುಳುಗಳು, ಇಲ್ಲಿಯ ಚಿಗುರು ಅವಳ ಅಂಗೈ, ಗೊಂಚಲು ಸ್ತನಗಳು, ಈ ಬಳ್ಳಿಯ ಕೆಂಪು ಬಣ್ಣ ಅವಳ ಕೆಂಪು ಬಣ್ಣ, ಅವಳ ತೆಳುವಾದ ಉಗುರುಗಳು ಇದರ ಎಳೆಯದಾದ ಕೊನೆಗಳು, ಕುಡಿಗಳು ಅವಳ ತೋಳುಗಳು; ಬಳ್ಳಿಯ ನಯ ಸುಭದ್ರೆಯ ನಯ, ಇದರ ರೀತಿ, ಅವಳ ರೀತಿ, ಇಲ್ಲಿಯ ಹದವಾದ ಹಣ್ಣುಗಳು ಹೊಳೆಯುವ ತುಟಿಗಳು ಬೇರೆಯಿಲ್ಲ, ಈ ಬಳ್ಳಿಯು ನನ್ನ ಪ್ರಿಯೆಯನ್ನು ಮರೆಯಾಗಿಟ್ಟುಕೊಂಡಿದೆಯೋ ಇಲ್ಲವೇ ಅವಳ ಸರ್ವಸ್ವವನ್ನೂ ಸೂರೆಗೊಂಡಿದೆಯೋ? (ಬಳ್ಳಿಗೆ ಸ್ವತಃ ಇಷ್ಟೆಲ್ಲ ಸೌಂದರ್ಯವೆಲ್ಲಿ ಬರಬೇಕು ?) ವll ಎಂದು ಸ್ವಲ್ಪಕಾಲ ಜ್ಞಾನಶೂನ್ಯನಾದ ಹುಚ್ಚನಂತೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy