SearchBrowseAboutContactDonate
Page Preview
Page 265
Loading...
Download File
Download File
Page Text
________________ ೨೬೦) ಪಂಪಭಾರತಂ ಮದನ ದವಾನಲಾರ್ಚಿ ತನುವಂ ಸುಡ ತಳಮೆಯೋಳ್ ಪಳಂಚಿ ಬೀ ಗಿದ ಬೆಳರ್ವಾಯೊಳುಚ್ಚಳಿಸಿ ತುಂಗ ಕುಚಂಗಳ ಪೊಯೊಳೆತ್ತಲುಂ | ಕದಳಿ ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದೋಯ್ಯನೊಯ್ಯನೆ ಹೈದುವು ವಿಲೋಲನೇತ್ರ ಜಲಬಿಂದುಗಳಾಕೆಯ ನಿಮ್ಮನಾಭಿಯಂ | ೯ ನಗೆಮೊಗಮಂ ಪೊದಳಲರ್ದ ತಾವರೆಯಂಬ ವಿಮೋಹದಿಂ ಮೊಗಂ ಬುಗಳೊಡಮಾ ತಳೋದರಿಯ ಸುಗ್ಗಳ ಬೆಂಕೆಯೊಳಿಚ್ಚಿಗೆಟ್ಟು ತೊ ! : ಟ್ಟಗೆ ಕೊಳೆ ಮುಂದೆ ಬಿಟ್ಟು ಮಗುಚ್ಚಾ ಸತಿಯಿಕ್ಕಿದ ಕಣ್ಣ ನೀರ ಧಾ ರೆಗಳೊಳೆ ನಾಂದಲರ್ಚಿ ಪೊದಲ್ಗೊರ್ಮೆಯ ಪಾದುವುದಾಳಿಗಳ್ lino ವ|| ಅಂತಾಬಾಲೆ ಕಾಯ ಪುಡಿಯೊಳಗೆ ಬಿಸುಟ್ಟೆಳವಾಳಿಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಜುಗುರ್ತಿದ್ರಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಣದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕಾರ ಕೃಷ್ಟ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿ ಜನನಿಚಯ ನಿಚಿತ ಮಾನಸೋನ್ನತ ಕಾಮಿನೀ ಗಂಡೂಪ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುಷ್ಟುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದವಂದು (ಅಪರಂಜಿಯ) ಸಲಾಕೆಯ ಹಾಗಿದ್ದಿತು. ೯. ಕಾಮವೆಂಬ ಕಾಡುಗಿಚ್ಚಿನ ಜ್ವಾಲೆಯು ಶರೀರವನ್ನು ವ್ಯಾಪಿಸಲು ಸುಭದ್ರೆಯ ಚಂಚಲವಾದ ಕಣ್ಣೀರಿನ ಹನಿಗಳು ಮುಚ್ಚಿರುವ ರೆಪ್ಪೆಯನ್ನು ತಗುಲಿ ಬಿಳಿಚಿಕೊಂಡಿರುವ ತುಟಿಯಲ್ಲಿ ಚಿಮ್ಮಿ ನೆಗೆದು ಎತ್ತರವಾದ ಸ್ತನಗಳ ಬಡಿತದಿಂದ ಎಲ್ಲಕಡೆಯೂ ಚೆದುರಿ ತ್ರಿವಳಿಗಳ ತೊಡಕುಗಳಲ್ಲಿ ಸೇರಿಕೊಂಡು ನಿಧಾನವಾಗಿ ಆಕೆಯ ಆಳವಾದ ಹೊಕ್ಕುಳನ್ನು ಸೇರಿದುವು. ೧೦. ಸೊಕ್ಕಿದ ದುಂಬಿಗಳು ಸುಭದ್ರೆಯ ಮುಖವನ್ನು ಚೆನ್ನಾಗಿ ಅರಳಿದ ತಾವರೆಯೆಂಬ ಭ್ರಾಂತಿಯಿಂದ ಪ್ರವೇಶಿಸಲು ಆ ತಳೋದರಿಯಾದ ಸುಭದ್ರೆಯ ಉಸಿರಿನ ಬೆಂಕಿಯಲ್ಲಿ ಆಶಾಭಂಗವಾಗಿ ಕಾವು ಹತ್ತಲು ಮುಂದೆ ಬಿದ್ದು ಪುನಃ ಆ ಸತಿಯು ಸುರಿದ ಕಣ್ಣೀರಿನ ಧಾರೆಗಳಲ್ಲಿ ನೆನೆದು ಚೇತರಿಸಿಕೊಂಡು ಇದ್ದಕ್ಕಿದ್ದ ಹಾಗೆಯೇ ಹಾರಿದುವು. ವ| ಹಾಗೆ ಬಾಲೆಯು ಕಾದ ಧೂಳಿನಲ್ಲಿ ಬಿಸುಟ ಎಳೆಯ ಬಾಳೆಯ ಹಾಗೆ ಸುರತಮಕರ ಧ್ವಜನಾದ ಅರ್ಜುನನಲ್ಲಿ ಉಂಟಾದ ವಿರಹದಿಂದ ಮಮ್ಮಲಮರುಗುತ್ತಿದ್ದಳು. ಆ ಕಡೆ ಮನುಜ ಮನೋಜನಾದ ಅರ್ಜುನನೂ ಕೂಡ ಮದನತಾಪವನ್ನು ಸಹಿಸಲಾರದೆ ದುಃಖಿಸಿ ಕೃಷ್ಣನ ಕಣ್ಣನ್ನು ತಪ್ಪಿಸಿಕೊಂಡು ವಿಜೃಂಭಿಸುತ್ತಿರುವ ಹೊಸತಾವರೆಯ ಸಮೂಹದಿಂದ ಆಕರ್ಷಿಸಲ್ಪಟ್ಟ ದುಂಬಿಗಳಿಂದ ರಮ್ಯವಾದುದೂ ಮರಳಿನ ಸಮೀಪಸ್ಥಳದಲ್ಲಿ ಇಡಲ್ಪಟ್ಟು ವಿರಹಿಜನಗಳ ಸಮೂಹದಲ್ಲಿ ಸೇರಿಕೊಂಡಿರುವ ಮನಸ್ಸುಳ್ಳ ಸ್ತ್ರೀಯರು ಮುಕ್ಕುಳಿಸಿದ ಮದ್ಯದಿಂದ ರೋಮಾಂಚಗೊಂಡ ಬಕುಳದ ಮೊಗ್ಗನ್ನುಳ್ಳುದೂ ಅರಳಿದ ಹೂವುಗಳಿಂದ ಕೂಡಿದ ಅಶೋಕವೃಕ್ಷಗಳನ್ನುಳ್ಳುದೂ ರಮಣಿಯರ ರಮಣೀಯವಾದ ಕಾಲಂದಿಗೆಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy