SearchBrowseAboutContactDonate
Page Preview
Page 258
Loading...
Download File
Download File
Page Text
________________ ಚತುರ್ಥಾಶ್ವಾಸಂ | ೨೫೩ ವll ಇಂದುಮಿಾ ದೂದವರೆಂಬರ್ ಬೇಟಕಾಜಿರ ಬೇಟಮೆಂಬ ಲತೆಗಳಡರ್ಪಿಪ್ರಂತಿರ್ದ ರೆಂತಪ್ಪ ಬೇಟಂಗಳುಮವರ್ ಪೊಸಯಿಸೆ ಪೊಸತಪ್ಪುದು ಕಿಡಿಕೆ ಕಿಡುವುದಂತುಮಲ್ಲದೆಯುಂಚoll ನುಡಿಗಳೊಳಾಸೆಯುಂಟೆನಲೊಡಂ ತಳೆದಂತಿರೆ ನಿಲ್ಲುದೆಂತುಮಾ | ವಡೆಯೋಳಮಾಸೆಗಾರನೆನೆ ತೊಟ್ಟನ ಪೊಪುವು ನಲ್ಲರಿರ್ವರೀ | ರೊಡಲೊಳಗಿರ್ಪ ಜೀವಮದುಕಾರಣದಿಂದಮೆ ಪೋಪ ಬರ್ಪೊಡಂ : ಬಡನೊಳಕೊಂಡ ದೂದವರ ಕೆಯ್ಯೋಳೆ ಕೆಯ್ಯಡೆಯಿರ್ಪುದಾಗದೇ || ೧೦೪. ವ|| ಎಂದು ನುಡಿಯುತ್ತುಂ ಬರೆವರೆ ಮತ್ತೊಂದೆಡೆಯೊಳೊರ್ವಂ ಗರ್ಭಶ್ವರಂ ತನ್ನ ಹೃದಯೇಶ್ವರಿಯನಗಟ್ಟು ಬಂದು ಪೆರಾರುಮಂ ಮೆಚ್ಚದಾಕೆಯಂ ನೆನೆದುಚಂil ಮಿಟುಗುವ ತೋರಹಾರಮುಮನಸ್ಸಿನ ಕಾಳಸಗಡ್ಡಮೆಂಬ ಬೇ ಸಟಿನೊಳೆ ಕಟ್ಟಲೊಲ್ಲದನಿತುಅನಿಲ್ಕುಳಿಗೊಂಡಲಂಪಿನ | ತೆಂಗಿದ ನಲ್ಗಳಿರ್ದಯೊಳಕ್ಕಟ ಬೆಟ್ಟುಗಳುಂ ಬನಂಗಳುಂ ತೋಜನೆಗಳುಮಾಗಳೊಡ್ಡಟೆಯದೊಡ್ಡಿಗೆ ಸೈರಿಸುವಂತುಟಾದುದೇ || ೧೦೫ ಎರಡರಷ್ಟಾಗುತ್ತದೆ. ಬಯ್ದರೆ ಪ್ರಿಯನ ಮನಸ್ಸು ಅಸ್ಥಿರವಾಗುತ್ತದೆ. ದೃಷ್ಟಿಸಿ ನೋಡಿದರೆ ಪ್ರೇಮವೂ ಬೇಟೆಕಾರನ ಸವಿಯೂ ರಾಶಿರಾಶಿಯಾಗುತ್ತದೆ. ನೂಂಕಿದರೆ ಬೇಟೆಕಾರನ ಮನಸ್ಸು ಬೆನ್ನಟ್ಟಿ ಬರುತ್ತದೆ. ಆದುದರಿಂದ ಈ ಬೇಟವೆಂಬುದು ಎಂಥ ಪರಸ್ಪರ ವಿರೋಧ ಸ್ವಭಾವವುಳ್ಳುದೋ ? ವು ಹೀಗೆ ದೂದವಿಯರೆಂಬುವರು ಬೇಟೆಕಾರರ ಬೇಟವೆಂಬ ಲತೆಗೆ ಆಶ್ರಯದಂತಿದ್ದಾರೆ. ಎಂತಹ ಪ್ರೇಮವೂ ಅವರು ಹೊಸದು ಮಾಡಿದರೆ ಹೊಸದಾಗುತ್ತದೆ. ಕೆಡಿಸಿದರೆ ಕೆಟ್ಟುಹೋಗುತ್ತದೆ. ಅಲ್ಲದೆಯೂ ೧೦೪. ಪ್ರೇಮಿಗಳಿಬ್ಬರ ಶರೀರದಲ್ಲಿರುವ ಪ್ರಾಣವು ದೂತರು ತರುವ ಮಾತುಗಳಲ್ಲಿ ಆಸೆಯಿದೆಯೆಂದೊಡನೆ ಜೀವಧಾರಣೆ ಮಾಡಿದ ಹಾಗೆ ಎದ್ದು ನಿಲ್ಲುತ್ತದೆ. ಯಾರ ಕಡೆಯಲ್ಲಿಯೂ ಆಸೆಯಿಲ್ಲವೆಂದೊಡನೆ ತಟಕ್ಕನೆ ಹೊರಟು ಹೋಗುತ್ತದೆ. ಆದುದರಿಂದ ಪ್ರಿಯರಲ್ಲಿಗೆ ಹೋಗಿ ಬಂದು ಅವರ ಒಪ್ಪಿಗೆಯನ್ನು ಪಡೆದಿರುವ ದೂತಿಯರ ಕಯ್ಯಲ್ಲಿಯೇ ಪ್ರಣಯಿಗಳ ಪ್ರಾಣವು ಮೀಸಲಾಗಿರುವುದು ವ|| ಎಂದು ಮಾತನಾಡುತ್ತ ಬರುತ್ತಿರಲು ಮತ್ತೊಂದು ಕಡೆಯಲ್ಲಿ ಒಬ್ಬ ಆಗರ್ಭ ಶ್ರೀಮಂತನು ತನ್ನ ಪ್ರಾಣಪ್ರಿಯೆಯನ್ನು ಅಗಲಿ ಬಂದು ಬೇರೆ ಯಾರನ್ನೂ ಮೆಚ್ಚದೆ ಆಕೆಯನ್ನು ಜ್ಞಾಪಿಸಿಕೊಂಡು ೧೦೫, ಪ್ರಿಯಳು ಮುತ್ತಿನ ಹಾರವನ್ನು ಧರಿಸಿದರೆ ನಮ್ಮಆಲಿಂಗನದ ಬೆಸುಗೆಗೆ ಅಡ್ಡಿಯಾಗುತ್ತದೆಂದು ಅವಳ ಕತ್ತಿನಲ್ಲಿ ಅದನ್ನು ತೊಡಿಸದೇ ಅಷ್ಟು ಪ್ರೇಮವನ್ನು ಸೆಳೆದುಕೊಂಡ ನಾನು ಈಗ ಸುಖದ ಕಡೆಗೇ ಬಾಗಿದ ನಲ್ಗಳ ನಡುಗುವ ಎದೆಗೂ ನನಗೂ ಮಧ್ಯೆ ಅಯ್ಯೋ ಬೆಟ್ಟಗಳೂ ತೊರೆಗಳೂ ಕಾಡುಗಳೂ ರಾಶಿ ರಾಶಿಯಾಗಿ ಅಡ್ಡವಾಗಿರುವಂತೆ ಚಾಚಿಕೊಂಡಿರಲು ಸಹಿಸುವ ಹಾಗಾಯಿತೆ? t (ಅಷ್ಟು ಗಾಢವಾದ ಪ್ರೇಮವನ್ನು ಅಗಲಿ ನಾನು ದೂರವಿರುವುದನ್ನು ಹೇಗೆ ಸಹಿಸಲಿ ಎಂದು ಭಾವ) .
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy