SearchBrowseAboutContactDonate
Page Preview
Page 257
Loading...
Download File
Download File
Page Text
________________ ೨೫೨) ಪಂಪಭಾರತಂ | ವll ಎಂದು ನಗಿಸುತ್ತಿರ್ದಳ್ ಮತ್ತಮೊಂದೆಡೆಯೊಳೊರ್ವಳ್ ತನ್ನ ನಲ್ಮನಲ್ಲಿಗೆ ದೂದುವೋಗಿ ಬಂದ ದೂದವಿಗೇಗೆಯ್ಯ ತನುಮನಳೆಯದೆ ಪದೆದು ಪಡೆಮಾತು ಬೆಸಗೊಳ್ವಳು ಕಂಡುಚಂ|| ಬಿರಯಿಸಿ ಬೇಟದೊಳ್ ಬಿರಿವ ನರಗಲ್ಲು ಕನಲ್ಲೊನಲ್ಲು ನ ಲ್ಲರ ದೆಸೆಯಿಂದಮವರೆ ಕೋಗಿಲೆಯಾಲರಕ್ಕೆ ತುಂಬಿಯ | ಕರಗಿಳಿಯಕ್ಕೆ ಬಂದೊಡಮೊಲ್ಲೆರ್ದೆಯಾಳುವರೆಂದೊಡೇತ ದೂ ತರೆ ತರ ಬಂದ ಸಬ್ಬವದ ಮಾತುಗಳು ಗುಡಿಗಟ್ಟಿ ಕೇಳರೇ ೧೦೧ `ವರ ಅಂತುಮಲ್ಲದೆಯುರಿಚoll. ಮನದೊಳಲಂಪನಾಳ್ಳಿನಿಯನಟ್ಟಿದ ದೂದರ ಸೀಯನಪ್ಪ ಮಾ ತಿನ ರಸದೊಳ್ ಕೋನರ್ವುದು ತಳಿರ್ವುದು ಪೂವುದು ಕಾಯುದಂತು ಕಾ ಹೈನಿತಾಳಂತು ಎಂದು ಮನದೊಳ್ ತೊದಳಿಲ್ಲದ ನಲೆಯೆಂಬ ನಂ ದನವನಮೋಪದೊಳ್ ನೆರೆದೊಡಂತು ರಸಂ ಬಿಡ ಪಣುದಾಗದೇ || ೧೦೨ ವ|| ಅಂತುಮಲ್ಲದೆಯುರಿಚಂ|| ಅನುವಿಗೆ ಬೇಟಕಾಳಿನೊಲವಿರ್ಮಡಿಯಪ್ಪುದು ಬಯ್ಕೆ ಬೇಟಕಾ ಅನ ಬಗೆ ನಿಲ್ಲದಿಕ್ಕೆಗೊಳಗಪ್ಪುದು ನಿಟ್ಟಸ ಬೇಟ ಚೇಟಕಾ | ಜನ ರುಚಿ ಬಂಬಲುಂ ತುಜುಗಲುಂ ಕೊಳುತಿರ್ಪುದು ನೂಂಕೆ ಬೇಟಕಾ ಜನ ಮನವಟ್ಟಿ ಪತ್ತುವುದು ಬೇಟವಿದೇಂ ವಿಪರೀತವೃತ್ತಿಯೋ || ೧೦೩ ಕೆಮ್ಮಿ ಎದುಗುಟ್ಟಿದರೆ ತೋಳಿನಲ್ಲಿಯೇ ಜೀವ ಹೋಗುತ್ತದೆಯೆಂಬ ಭಯ ವುಂಟಾಗುತ್ತದೆ. (ಇಂತಹ) ಆ ಮುದುಕನು (ನನ್ನಲ್ಲಿ) ಕೂಡುವುದಕ್ಕೆ ಬಂದು (ಎಷ್ಟೇ) ಹೊನ್ನುಗಳನ್ನು ಸುರಿದರೂ ಅವನ ಹಲ್ಲಿಲ್ಲದ ಬಾಯಿನ ದುರ್ಗಂಧವನ್ನು ಯಾರು ತಾನೆ ಸಹಿಸುತ್ತಾರೆ. ವ|| ಎಂದು ನಗಿಸುತ್ತಿದ್ದಳು, ಇನ್ನೊಂದೆಡೆಯಲ್ಲಿ ಒಬ್ಬಳು ತನ್ನ ಪ್ರಿಯನ ಕಡೆಗೆ ಪ್ರೇಮಸಂದೇಶವನ್ನು ಕೊಂಡುಹೋಗಿ ಬಂದ ದೂತಿಗೆ ಏನು ಮಾಡಬೇಕೆಂಬುದನ್ನು ತಿಳಿಯದೆ ಆಶೆಪಟ್ಟು (ಅವನು ಕಳುಹಿಸಿದ) ಪ್ರತ್ಯುತ್ತರವನ್ನು ಕೇಳುವವಳನ್ನು ನೋಡಿ ೧೦೧. ವಿರಹವೇದನೆಯಿಂದ ನರಳುತ್ತಿರುವ ಪ್ರೇಮಿಗಳ ಕೋಪದಿಂದ ಅಗಲಿಹೋದ ತಮ್ಮನಲ್ಲರ ಕಡೆಯಿಂದ ಪ್ರೇಮಸಮಾಚಾರವು ಬರಲು ಕೋಗಿಲೆಯಾಗಲಿ, ಗಾಳಿಯಾಗಲಿ, ತುಂಬಿಯಾಗಲಿ, ಗಿಳಿಯಾಗಲಿ, ಬಂದರೂ ನಲಿದು ಮನಸ್ಸಮಾಧಾನವನ್ನು ಪಡೆಯುತ್ತಾರೆ ಎಂದಾಗ ತಮ್ಮ ಪ್ರೀತಿಪಾತ್ರರಾದ ದೂತರೇ ತಂದಿರುವ ಪ್ರಿಯವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ ? ವl ಹಾಗಲ್ಲದೆಯೂ ೧೦೨. ಪ್ರಿಯನು ಮನಸ್ಸಿನಲ್ಲಿ ಸಂತೋಷಗೊಂಡು ಕಳುಹಿಸಿದ ದೂತರ ಸಿಹಿಯಾದ ಮಾತಿನ ರಸದಲ್ಲಿ ಶುದ್ಧಪ್ರೇಮವೆಂಬ ನಂದನವನವು ಕವಲೊಡೆಯುವುದು, ಚಿಗುರುವುದು, ಹೂ ಬಿಡುವುದು. ಹಾಗೆಯೇ ಕಾಯಾಗುವುದು - ಮನಸ್ಸಿನಲ್ಲಿ ನಿಂತು ನಲ್ಲನಲ್ಲರ ಸಮಾಗಮದಲ್ಲಿ ಹಣ್ಣಾಗುವುದಿಲ್ಲವೇ? ವಗ ಹಾಗಲ್ಲದೆಯೂ ೧೦೩. ಬಲಾತ್ಕಾರ ಮಾಡಿದರೆ ಪ್ರೇಮಿಯ ಪ್ರೀತಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy