SearchBrowseAboutContactDonate
Page Preview
Page 206
Loading...
Download File
Download File
Page Text
________________ ತೃತೀಯಾಶ್ವಾಸಂ | ೨೦೧ ವ|| ಎಂಬುದುಮರಾತಿಕಾಳಾನಳನಿದರ್ಕೆನುಂ ಚಿಂತಿಸಿದ ನೀಮನ್ನ ಕಾಳಗಮಂ ಪೆಜಿಗಿರ್ದು ನೋಡಿಯೆಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಕ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆದಿಸೆಚಂl ಸರಳ ಪೊದಲ್ಲ ಬರಿಯ ಕೋರಲಾಗಿದೆ ಬಿಲ್ ತರಳು ದು ರ್ಧರ ಹಯಮಕ್ಕೆ ಸಂದಣಿಸಿ ಸಂದಣಿ ಕೊಟ್ಟುದಿಗೊಂಡುದಗ್ರ ಭೀ | ಕರ ರಥಮಣ್ಣಿ ದಂತಿಘಟೆಗಳ್ ಪಳಗಿಟ್ಟೋಡೆ ಕಟ್ಟೆಗಟ್ಟದಂ ತಿರೆ ತಳರ್ದತರಾತಿಬಲಮಾಂಸವರಾರ್ ಕದನತ್ರಿಣೇತ್ರನಂ || ವ|| ಆಗಳ್ ಕರ್ಣನರ್ಣವನಿನಾದದಿಂದಾರ್ದು ಗುಣಾರ್ಣವನೊಳ್ ಬಂದು ತಾಗಿ ಶಲ್ಯಂ ಭೀಮಸೇನನೊಳ್ ತಾಗಿ ಕಿಳದುಂ ಪೊಟ್ಟು ಕಾದೆಚಂ|| ಅರಿದು ಗೆಲಿ ಪಾರ್ವನ ಶರಾಸನವಿದೈಯನೆಂದು ನೊಂದು ನಿ ತರಿಸದೆ ಪಾರ್ವನೊಳ್ ಕಲಹಮಾಗದು ಚಿಃ ದೊರೆಯಲಿದೆಂದು ಭಾ | . ಸರಸುತನೊಯ್ಯನೋಸರಿಗೆ ಮದ್ರಮಹೀಶನುಮಂ ಮರುತ್ತುತಂ ವಿರಥನೆ ಮಾಡಿ ತಳ್ಳು ನೆಲಕಿಕ್ಕಿದನೊರ್ಮೆಯೆ ಮಲ್ಲಯದ್ಧದೊಳ್ || ೭೧ ವಗೆ 'ಆಗಳಾ ಬಲದ ನಡುವಿರ್ದ ನಾರಾಯಣಂ ಬಲದೇವಂಗ ಸುಟ್ಟಿತೋಟಿ ಭೀಮಾರ್ಜುನರ್ಕಳಿವರಮೋಘಮಪ್ಪರೆಂದವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದಾಗಳುಆದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದು ಕಂಡು ಮನಂಗೆಟ್ಟು ಮೇಲೆದ್ದಿದೆ. ಇನ್ನು ಮೇಲೆ ನಮ್ಮನ್ನು ರಕ್ಷಣೆ ಮಾಡುವವರು ನೀನಲ್ಲದೆ ಮತ್ತಾರು? ಎಲೈ ವಿದ್ವಿಷ್ಟವಿದ್ರಾವಣನೇ ನನ್ನ ತಲೆಯನ್ನು ಕಾಯಬೇಕು ಎಂದನು. ವn ಅರಾತಿಕಾಲಾನಳನು (ಅರ್ಜುನನು) ಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ: ನೀವು ನನ್ನ ಕಾಳೆಗವನ್ನು ಹೊರಗಿದ್ದು ನೋಡಿ ಎಂದು ಹೇಳಿ ತಾನೂ ಭೀಮಸೇನನೂ ಉತ್ತಮವಾದ ಬಿಲ್ಲುಗಳನ್ನು ತೆಗೆದುಕೊಂಡು ಪ್ರತಿಜ್ಞೆಮಾಡಿ ಪ್ರವೇಶಮಾಡಿದ ಶತ್ರುಸೈನ್ಯವನ್ನು ಪ್ರತಿಭಟಿಸಿ ದೀರ್ಘವಾಗಿ ಎಳೆದು ಪ್ರಯೋಗಮಾಡಿದರು. ೭೦. ಒಟ್ಟಿಗೆ ಸೇರಿದ ಬಿಲ್ಲಿನ ಮಳೆಯ ಸುರಿತವನ್ನು ತಡೆಯಲಾರದೆ ಬಿಲ್ಲಾಳುಗಳು ಹಿಮ್ಮೆಟ್ಟಿದರು, ಪ್ರತಿಭಟಿಸಲಾಗದೆ ಕುದುರೆಗಳು ನಾಶವಾದವು. ಗುಂಪುಕೂಡಿದ ಬಿಲ್ಲಾಳಿನ ಸಾಲುಗಳು ಬಿಲ್ಲಿನ ಪೆಟ್ಟಿನಿಂದ ಕುದಿದುಹೋಯಿತು. ಎತ್ತರವೂ ಭಯಂಕರವೂ ಆದ ರಥವು ಅಳಿದುಹೋಯಿತು. ಆನೆಯ ಸಮೂಹವು ಹಿಮ್ಮೆಟ್ಟಿ ಓಡಿತು. ಹಿಂದೆ ಇದ್ದ ಆನೆಯ ಗುಂಪುಗಳು ಕಟ್ಟೆಯನ್ನು ಕಟ್ಟಿದ ಹಾಗಿರಲು ಶತ್ರುಸೈನ್ಯವು ಸರಿದೋಡಿತು. ಕದನತ್ರಿಣೇತ್ರನಾದ ಅರ್ಜುನನನ್ನು ಪ್ರತಿಭಟಿಸುವವರಾರಿದ್ದಾರೆ? ವlು ಆಗ ಕರ್ಣನು ಸಮುದ್ರಘೋಷದಿಂದ ಆರ್ಭಟಮಾಡಿ ಗುಣಾರ್ಣವನಲ್ಲಿಯೂ ಶಲ್ಯನು ಭೀಮಸೇನನಲ್ಲಿಯೂ ತಾಗಿದರು. ೭೧. ಕರ್ಣನು ಹಾರುವನ ಬಿಲ್ವಿದ್ಯೆಯನ್ನು ಗೆಲುವುದಸಾಧ್ಯ ಎಂದು ದುಃಖಿಸಿ ಚಿಃ ಬ್ರಾಹ್ಮಣರಲ್ಲಿ ಜಗಳವಾಡುವುದು ಯೋಗ್ಯವಲ್ಲ ಎಂದು ನಿಧಾನವಾಗಿ ಹಿಮ್ಮೆಟ್ಟಿದನು, ಭೀಮನೂ ಮದ್ರರಾಜನಾದ ಶಲ್ಯನನ್ನು ರಥದಿಂದ ಕೆಳಕ್ಕಿಳಿಸಿ ಮಲ್ಲಯುದ್ದದಲ್ಲಿ ಒಂದೇ ಸಲಕ್ಕೆ ನೆಲಕ್ಕುರುಳಿಸಿದನು. ವt ಆಗ ಆ ಸೈನ್ಯದ ಮಧ್ಯೆ ಇದ್ದ ಶ್ರೀಕೃಷ್ಣನು ಬಲರಾಮನಿಗೆ ಇವರು ಭೀಮಾರ್ಜುನರು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy