SearchBrowseAboutContactDonate
Page Preview
Page 205
Loading...
Download File
Download File
Page Text
________________ ೨೦೦ | ಪಂಪಭಾರತಂ ವ|| ಎಂದು ಕೆಳರ್ದು ನುಡಿದು ಸಯಂಬರಕೆ ನೆರದರಸುಮಕ್ಕಳೆಲ್ಲರನುತ್ಸಾಹಿಸಿ ನೋಡ ನೋಡಿಈ ಪಕ್ಕರೆಯಿಕ್ಕಿ ಬಂದುವು ಹಯಂ ಘಟಿ ಪಣಿದುವಾಯುಧಂಗಳಿಂ . ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲಾದಳುರ್ಕ ಕೈ | - ಮಿಕ್ಕಿರೆ ಬಂದುದೋಂದಣಿ ರಣಾನಕ ರಾವಮಳುಂಬಮಾದುದಾರ್ ಮಿಕ್ಕು ಬರ್ದುಂಕುವನ್ನರಿವರ್ಗಂಬಿನೆಗಂ ಮಸಗಿತು ರಾಜಕಂ || ೬೭ ವ|| ಅಂತು ನಲಂ ಮೂರಿವಿಟ್ಟಂತೆ ತಳರ್ದುಚಂ|| ತರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳಿವಟ್ಟ ಬೆ ಭೈರೆಗಳ ಪಿಂಡನೆತ್ತಿಸಿದ ಬೆಳೊಡೆಗಳ ಮಕರಂಗಳ ಭಯಂ | ಕರ ಕರಿಗಳ ತಂಬೂಳೆವ ಮಿಾಂಗಳನುಳ್ಳುವ ಕೈದುಗಳ ನಿರಾ ಕರಿಸಿರೆ ಮೆರೆದಪ್ಪಿ ಕವಿದತ್ತು ನರಾಧಿಪಸೈನ್ಯಸಾಗರಂ || ೬೮ ವ|| ಅಂತು ಕವಿದ ರಿಪುಬಳಜಳನಿಧಿಯ ಕಳಕಳರವಮಂ ಕೇಳು ಪೋಲಲಂ ಪುಗಲೊಲ್ಲದೆ ನಿಂದ ಮನುಜಮಾಂಧಾತನಂ ಪಾಂಚಾಳರಾಜನಿಂತೆಂದಂಮ|| ಧನುವಂ ನೀಂ ತೆಗೆದಚ್ಚು ಮಾನನಳವಂ ಕೆಯ್ಯೋಂಡುದರ್ಕಂ ಕರಂ ನಿನಗೀ ಕನ್ನಿಕೆ ಸೋಲುದರ್ಕಮರ್ದಯೊಳ್ ಕೋಪಾಗ್ನಿ ಕೈಗನ್ಮ ಬಂ | ದಿನಿತುಂ ರಾಜಕುಲಂ ಸಮಸ್ತಭರದಿಂ ಮೇಲೆತ್ತುದಿನ್ ಕಾವನಾ ವನೊ ನೀನಲ್ಲದೆ ಕಾವುದನ್ನ ತಲೆಯಂ ವಿದ್ವಿಷ್ಟವಿದ್ರಾವಣಾ | ಸಾರ್ಥಕತೆಯೇನು? ವ|| ಎಂದು ಕೋಪಿಸಿ ನುಡಿದು ಸ್ವಯಂವರಕ್ಕೆ ಸೇರಿದ್ದ ಎಲ್ಲ ರಾಜಕುಮಾರರನ್ನೂ ಪ್ರೋತ್ಸಾಹಿಸಿ ನೋಡುತ್ತಿದ್ದಂತೆಯೇ ೬೭. ಜೀನುಗಳನ್ನು ಧರಿಸಿದ ಕುದುರೆಗಳು ಬಂದುವು. ಆನೆಗಳ ಸಮೂಹವು ಯುದ್ಧಸನ್ನದ್ದವಾದವು. ಆಯುಧಗಳಿಂದ ತುಂಬಿದ ರಥಗಳು ಬಂದವು. ಕಾಲಾಳುಸೈನ್ಯದ ಪಂಕ್ತಿಯೊಂದು ಹುಲಿಯ ಹಿಂಡಿನ ಹಾಗೆ ಕೈಮೀರಿ ಮುಂದೆ ಬಂದಿತು. ಯುದ್ಧವಾದ್ಯವೂ ವಿಜೃಂಭಿಸಿತು. ಇದನ್ನು ಮೀರಿ ಯಾರು ಬದುಕುತ್ತಾರೆ ಎನ್ನುವ ಹಾಗೆ ರಾಜಸಮೂಹವು ರೇಗಿ ಬಂದಿತು. ವಗಿ ಹಾಗೆ ನೆಲವು ಪ್ರಸರಿಸಿದ ಹಾಗೆ ನಡೆದು ೬೮. ಚಲಿಸುತ್ತಿರುವ ಧ್ವಜಗಳ ಸಮೂಹವು ತೆರೆಗಳ ರಾಶಿಗಳನ್ನೂ ಎತ್ತಿ ಹಿಡಿದ ಬಿಳಿಯ ಕೊಡೆಗಳು ಸಾಲಾಗಿರುವ ಬಿಳಿಯ ನೊರೆಗಳ ಸಮೂಹವನ್ನೂ ಭಯಂಕರವಾದ ಆನೆಗಳು ಮೊಸಳೆಗಳನ್ನೂ ಪ್ರಕಾಶಿಸುತ್ತಿರುವ ಆಯುಧಗಳು ಹೊಳೆಯುತ್ತಿರುವ ಮೀನುಗಳನ್ನೂ ತಿರಸ್ಕರಿಸುತ್ತಿರಲು ರಾಜರ ಸೇನಾಸಮುದ್ರವು ಮೇರೆಯನ್ನು ಮೀರಿ ಕವಿಯಿತು. ವ|| ಹಾಗೆ ಮುತ್ತಿದ ಶತ್ರುಸೇನಾಸಮುದ್ರದ ಕಳಕಳಶಬ್ದವನ್ನು ಕೇಳಿ ಪುರಪ್ರವೇಶಮಾಡದೇ ನಿಂದ ಮನುಜಮಾಂಧಾತನಾದ ಅರ್ಜುನನನ್ನು ಕುರಿತು ಪಾಂಚಾಳರಾಜನಾದ ದ್ರುಪದನು ಹೀಗೆಂದನು-೬೯. ನೀನು ಬಿಲ್ಲನ್ನು ಏರಿಸಿ ಮೀನನ್ನು ಹೊಡೆದು ಪರಾಕ್ರಮವನ್ನು ಪ್ರದರ್ಶಿಸಿದುದಕ್ಕೂ ಈ ಕನ್ಯ ನಿನಗೆ ವಿಶೇಷವಾಗಿ ಸೋತು ಅಧೀನಳಾದುದಕ್ಕೂ ಎದೆಯಲ್ಲಿ ಕೋಪಾಗ್ನಿ ಹೆಚ್ಚಿ ಈ ರಾಜಸಮೂಹವು ವಿಶೇಷ ವೇಗದಿಂದ ನಮ್ಮ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy