SearchBrowseAboutContactDonate
Page Preview
Page 197
Loading...
Download File
Download File
Page Text
________________ ೧೯೨) ಪಂಪಭಾರತಂ ವ|| ಎಂದೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗಟ್ಟು ಮಂಗಳಮಸದನ ಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಳಂ ತುಡಿಸಲುಮೆಂದು ನಳಿಯ ಪಸದಸಂಗೊಳಿಸಿ ಕ೦ll ಮಸೆದುದು ಮದನನ ಬಾಳ್ ಕೂ ರ್ಮಸೆಯಿಟ್ಟುದು ಕಾಮನಂಬು ಬಾಯೂಡಿದುದಾ | ಕುಸುಮಾಸ್ತನ ಚಕ್ರಮಿದಂ ಬೆಸಕಮನಾಳತ್ತು ಪಸದನಂ ದೌಪದಿಯಾ 1 . ೪೭ ವ|| ಅಂತು ನೆಆಯ ಪಸದನಂಗೊಳಿಸಿ ಬಿಡುಮುತ್ತಿನ ಸೀಸೆಯನಿಕ್ಕಿ ತಾಯಂ ತಂದೆಗಂ ಪೊಡಮಡಿಸಿಕಂii ನಿಟ್ಟಸ ಹೋಮಾನಲನೂಲ್ ಪುಟ್ಟಿದ ನಿನಗಕ್ಕೆ ಪರಕೆ ಯಾವುದೊ ನಿನ್ನಂ 1 ಪುಟ್ಟಿಸಿದ ಬಿದಿ ನೆಗಟಿಯ ಜೆಟ್ಟಗನೊಳ್ ನೆರಪುಗೀಗಳರಿಕೇಸರಿಯೊಳ್ | ೪೮ ವ|| ಎಂದು ಪರಸಿ ಕನಕನಕಖಚಿತವುಂ ಮೌಕ್ತಿಕ ಸ್ತಂಭಮುಮಪ್ಪ ಸರ್ವತೋಭದ್ರಮಂಬ ಸಿವಿಗಯನೇಳಿಸಿ ಚಾಮರದ ಕುಂಚದಡಪದ ಡವಕೆಯ ವಾರ ವಿಳಾಸಿನಿಯರೆಡುಂ ಕೆಲದೊಳ್ ಸುತ್ತಿಳದು ಬಳಸಿ ಬರೆ ತಲೆವರಿಜೆಯ ಪಿಡಿಯನೇಟಿ (ಆದುದರಿಂದ) ಒಡ್ಯಾಣದ ಭಾರ ಬೇರೆಯೇತಕ್ಕೆ? ಅದನ್ನು ತೊಡದೆ ಬಿಡು, ತೊಡೆಯ ಭಾರವೇ ಪಾದಕಮಲಗಳಿಗೆ ಭಾರವಾಗಿದೆ (ಹೀಗಿರುವಾಗ) ಕಾಲಂದಿಗೆಯನ್ನೇಕೆ ತೊಡಿಸುವುದು. ಈಕೆಗೆ ಆಭರಣಗಳೇತಕ್ಕೆ ರೂಪೇ ಸಾಲದೆ? ವlು ಎಂದು ಒಬ್ಬೊಬ್ಬರೂ ಆಕೆಯ ಸೌಂದರ್ಯವನ್ನು ಹೊಗಳಿ ಮಂಗಳಾಲಂಕಾರಮಾಡಿದರು. ಹೊಸ ಮದುವಣಗಿತ್ತಿಯಾದುದರಿಂದ ಆಭರಣವನ್ನೂ ತೊಡಿಸಲೇಬೇಕೆಂದು ಪೂರ್ಣವಾಗಿ ಅಲಂಕಾರಮಾಡಿದರು. ೪೭. ಆ ಬ್ರೌಪದಿಯ ಅಲಂಕಾರವು ಮನ್ಮಥನ ಕತ್ತಿಯು ಮಸೆಯಲ್ಪಟ್ಟಿತು, ಕಾಮನ ಬಾಣವು ಹರಿತವಾಗಿ ಮಾಡಲ್ಪಟ್ಟಿತು, ಪುಷ್ಪಬಾಣನಾದ ಅನಂಗನ ಚಕ್ರಾಯುಧವು ಹರಿತವಾದ ಬಾಯಿಂದ ಕೂಡಿದುದಾಯಿತು ಎನ್ನುವಷ್ಟು ಸೌಂದರ್ಯವನ್ನು ಪಡೆಯಿತು. ವರ ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿ ಬಿಡಿಮುತ್ತಿನ ಅಕ್ಷತೆಯನ್ನು ಅವಳ ತಲೆಯ ಮೇಲೆ ಚೆಲ್ಲಿ ತಾಯಿಗೂ ತಂದೆಗೂ ನಮಸ್ಕಾರ ಮಾಡಿಸಿದರು. ೪೮. ವಿಚಾರಮಾಡುವುದಾದರೆ ಹೋಮಾಗ್ನಿಯಲ್ಲಿ (ಯಜ್ಞ ಕುಂಡದಲ್ಲಿ ಹುಟ್ಟಿದ ನಿನಗೆ ಪ್ರತ್ಯೇಕವಾದ ಹರಕೆ ಯಾಕಮ್ಮ ನಿನ್ನನ್ನು ಹುಟ್ಟಿಸಿದ ಆ ವಿಧಿಯು ಸುಪ್ರಸಿದ್ದ ಪರಾಕ್ರಮಿಯಾದ ಆ ಅರಿಕೇಸರಿಯಲ್ಲಿ ನಿನ್ನನ್ನು ಸೇರಿಸಲಿ ವ| ಎಂದು ಹರಸಿ ಹೊಳೆಯುವ ಚಿನ್ನದಿಂದ ಕೆತ್ತಲ್ಪಟ್ಟುದೂ ಮುತ್ತಿನ ಕುಂಭಗಳನ್ನುಳ್ಳದೂ ಸರ್ವತೋಭದ್ರವೆಂಬ ಹೆಸರುಳ್ಳುದೂ (ನಾಲ್ಕು ಕಡೆಯೂ ಬಾಗಿಲುಳ್ಳದು) ಆದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಚಾಮರ, ಕುಂಚ, ಎಲೆ ಅಡಿಕೆಯ ಚೀಲ ಮತ್ತು ಪೀಕದಾನಿಗಳನ್ನು ಹಿಡಿದಿದ್ದ ಪರಿವಾರದ ಹೆಂಗಸರು ಎರಡುಪಕ್ಕದಲ್ಲಿಯೂ ಸುತ್ತ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy