SearchBrowseAboutContactDonate
Page Preview
Page 196
Loading...
Download File
Download File
Page Text
________________ ತೃತೀಯಾಶ್ವಾಸಂ / ೧೯೧ ಕಂ| ತಂತಮ್ಮ ರಾಜ್ಯ ಚಿಹ್ನಂ ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ | ತಂತಮ್ಮೆಸೆವ ವಿಳಾಸಂ , ತಂತಮಿರ್ಪಡೆಯೊಳೋಳಿಯಿಂ ಕುಳ್ಳಿರ್ದರ್ || ೪೩ ವ|| ಆಗ ದ್ರುಪದಂ ತನ್ನ ಪುರಕ್ಕಮಂತಃಪುರಕ್ಕಂ ಪರಿವಾರಕ್ಕಂಕಂl ಸಾಸಿರ ಪೊಂಗೆಯುಂ ಚಿಃ ಕಾಸಟಮಂದೊಂದು ಲಕ್ಕಗೆಯ್ಯುದಿದರ್ಕಂ | ಮಾಸರಮುಡಲೆಂದಧಿಕ ವಿ ಳಾಸದಿನುಡಲಿಕ್ಕಿ ನೆಳೆಯ ಬಿಯಮಂ ಮೇದಂ || ೪೪ ವ|| ಅಂತು ಮೆದು ಕೂಸ ನೆಯ ಕೆಯ್ದಯ್ಕೆಮೆಂದು ಮುನ್ನಂ ಕೆಯ್ದಯ್ಯುತಿರ್ದ ತಂದ ಗುಜುಗೆಯರಪ್ಪಂತಃಪುರ ಪುರಂದ್ರಿಯರಂ ಕರೆದು ಪೇಟ್ಟುದುಮಂತಗೆಯ್ಮಂದುಕ೦ll ಈ ಪೊತ್ತಿಂಗೀ ರುತುವಿಂ ಗೀ ಪಸದನಮಿಂತುಟಪ್ಪ ಮಯ್ಯಣ್ಣಕ್ಕಿಂ | ತೀ ಹೂವಿನೂಳೇ ತುಡುಗಿಯೊ ಈ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ || ವ|| ಎಂದು ನೆಹಿತಿಯ ಪಸದನಂಗೊಳಿಸಿಚಂ|| ತುಡಿಸದೆ ಹಾರಮಂ ಮೊಲೆಯ ಬಣ್ಣಿನೊಳಂ ನಡು ಬಳಿದಪ್ಪುದೀ ನಡುಗುವುಲ್ಲವೇ ತೊಡೆ ನಿತಂಬದ ಬಣ್ಣಿನೊಳೇವುದಕ್ಕೆ ಪೋ | ಬಿಡು ಕಟಸೂತಮಂ ತೊಡೆಯ ಬಿಣು ಪದಾಂಬುರುಹಕ್ಕೆ ತಿಣಮಂ ತುಡಿಸುವುದಕ್ಕೆ ನೂಪುರಮನೀ ತೊಡದೇವುದೂ ರೂಪ ಸಾಲದ || ೪೬ ೪೩. ರಾಜರು ತಮ್ಮ ತಮ್ಮ ರಾಜ್ಯಚಿಹ್ನೆ ವೈಭವ ಸೈನ್ಯ ವಿಳಾಸಗಳಿಂದ ಕೂಡಿ ತಾವಿದ್ದ ಸ್ಥಳಗಳಲ್ಲಿ ಸಾಲಾಗಿ ಕುಳಿತರು. ವ|| ಆಗ ದ್ರುಪದನು ತನ್ನ ಪಟ್ಟಣಕ್ಕೂ ರಾಣಿವಾಸಕ್ಕೂ ಪರಿವಾರಕ್ಕೂ ೪೪, ಸಹಸ್ರಹೊನ್ನನ್ನು ಕೊಟ್ಟರೂ ಇದು ಲಭ್ಯವಾಗುವುದಿಲ್ಲ. ಹತ್ತಿಯ ಬಟ್ಟೆಯಾದರೂ ಇದು ಲಕ್ಷಬೆಲೆಯುಳ್ಳದ್ದು ಎಂಬ ವಸ್ತಗಳನ್ನು ಮಧುರವಾಗಿ ಧರಿಸಲೂ ಸಂತೋಷದಿಂದ ಉಡಲೂ ಕೊಟ್ಟು ವಿಶೇಷವಾಗಿ ತನ್ನ ಔದಾರ್ಯವನ್ನು ಪ್ರಕಾಶಿಸಿದನು. ವರ ಹಾಗೆಯೇ ಕನೈಯನ್ನು ಪೂರ್ಣವಾಗಿ ಅಲಂಕರಿಸಿ ಎಂದು ಹೇಳಿದನು. ಹಾಗೆ ಹೇಳುವುದಕ್ಕೆ ಮುಂಚೆಯೇ (ತಾವಾಗಿಯೇ) ಅಲಂಕರಿಸುತ್ತಿದ್ದ ಶಕ್ತರೂ ಅನುಭವಶಾಲಿಗಳೂ ಆದ ರಾಣಿ ವಾಸದ ಸ್ತ್ರೀಯರು ಹಾಗೆಯೇ ಮಾಡುತ್ತೇವೆಂದರು. ೪೫. ಈ ಹೊತ್ತಿಗೆ ಈ ಋತುವಿಗೆ ಇಂತಹ ಅಲಂಕಾರ; ಇಂತಹ ಮೈಬಣ್ಣಕ್ಕೆ ಇಂತಹ ಹೂವು ಈ ಆಭರಣ ಈ ಸೀರೆ ಉಚಿತವಾದುದು ವ|| ಎಂದು ನಿಷ್ಕರ್ಷಿಸಿ ಪೂರ್ಣವಾಗಿ ಅಲಂಕಾರಮಾಡಿದರು. ೪೬. ಹಾರವನ್ನು ತೊಡಿಸದಿದ್ದರೂ ಮೊಲೆಯ ಭಾರದಿಂದಲೇ ಸೊಂಟವು ಬಳುಕುತ್ತದೆ. ಪಿತ್ರೆ (ಪೃಷ್ಠಭಾಗ)ಯ ಭಾರದಿಂದಲೇ ತೊಡೆ ನಡುಗುವುದಲ್ಲವೇ ?
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy