SearchBrowseAboutContactDonate
Page Preview
Page 194
Loading...
Download File
Download File
Page Text
________________ ತೃತೀಯಾಶ್ವಾಸಂ | ೧೮೯ ವ|| ಅಂತು ನೋಡುತ್ತುಂ ಬರೆವರೆಚಂ|| ಮದಗಜಬೃಂಹಿತಧ್ವನಿ ತುರಂಗಮಹಷಿತಭೂಷಮಾದಮೊ ರ್ಮೊದಲೆ ಪಯೋಧಿಮಂಥನಮಹಾರವಮಂ ಗೆಲೆ ತಳ ಬಣ್ಣವ | ಇದ ಗುಡಿ ತೂಂಬೆಗೊಂಚಲೆಲೆಯಿಕ್ಕಿದ ಕಾವಣಮಲ್ಲಿಯುಂ ಪೊದ ದಎರ ಕಣ್ಣ ಕಂಡುವಖಿಳಾವನಿಪಾಳರ ಬಿಟ್ಟ ಬೀಡುಗಳ್ || ೩೮ ವ|| ಅಂತು ನೋಡುತ್ತುಂ ಮೆಚ್ಚುತ್ತುಂ ಬರೆವರೆಉ || ಈ ತ್ರಿಜಗಂಗಳೊಳ್ ನೆಗಟ್ಟ ಪೆಂಡಿರುಮಂ ಗೆಲೆವಂದ ಪದಿನೀ ಪತ್ರವಿಚಿತ್ರನೇತ್ರಗೆ ಸಯಂಬರದೊಳ್ ವರನಷ್ಟವಾದೊಡೀ | ಧಾತ್ರಿಯನಾಮಾಮ ವಲಮೆಂದು ತೆರಳ ಸಮಸ್ತ ರಾಜಕ ಚ್ಛತ್ರದಿನಂದು ಛತ್ರವತಿಯೆಂಬಭಿಧಾನಮನಾಳುದಾ ಪೋಲಿ || ೩೯ ವ!! ಅಂತು ಸೊಗಯಿಸುವ ಪೋಬಲಂ ಪೊಕ್ಕೆಲ್ಲಿಯುಂ ಬೀಡು ಬಿಡಲೆಡೆವಡೆಯ ದೊಂದು ಭಾರ್ಗವಪರ್ಣಶಾಲೆಯೊಳಡಮಾಡಿಕೊಂಡು ಬ್ರಹ್ಮಲೋಕಮಿರ್ಪಂತಿರ್ದ ಬ್ರಹ್ಮಸಭೆಯೊಳಗೆ ದೇವ ಬ್ರಾಹ್ಮಣರಾಗಿರ್ದರನ್ನೆಗಂ ದ್ರುಪದನಿತ್ತಲ್ಚಂ|| ನರದ ಸಮಸ ರಾಜಕಮನಾದರದಿಂದಿದಿರ್ಗೊ೦ಡನೇಕ ರ ತ್ವ ರಚಿತಮಾಗೆ ಮಾಡಿಸಿ ಸಯಂಬರಸಾಲೆಯನೋಳಿಯಿಂ ನರೇ | ಶರರ್ಗಿರಲೆಂದು ಚಾಪಳಿಗೆಗಳ್ ಪಲವಂ ಸಮದಲ್ಲಿ ರತ್ನದಿಂ ಬೆರಸಿದ ಬಣ್ಣದೊಳ್ ಮೆಳಯ ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ II೪೦ ತೋಟದ ಸಾಲುಗಳು ಅರಿಕೇಸರಿಯ ಮನಸ್ಸನ್ನಾಕರ್ಷಿಸಿದುವು. ೩೮. ಮದ್ದಾನೆಗಳ ಘೀಳಿಡುವ ಶಬ್ದ, ಕುದುರೆಗಳ ಕೆನೆತದ ಶಬ್ದ ಅವು ಒಟ್ಟುಗೂಡಿ ಸಮುದ್ರಮಥನದ ದೊಡ್ಡ ಶಬ್ದವನ್ನು ಮೀರಿದ್ದಿತು. ಒತ್ತಾಗಿ ಸೇರಿಕೊಂಡಿರುವ ಬಣ್ಣಬಣ್ಣದ ಬಾವುಟಗಳ ಕುಚ್ಚು, ಹೂಗೊಂಚಲು ಚಿಗುರುಗಳಿಂದ ಕೂಡಿದ ಚಪ್ಪರಗಳು ಎಲ್ಲೆಲ್ಲಿಯೂ ವ್ಯಾಪಿಸಿ ಒಪ್ಪಿದ್ದವು. ಸಮಸ್ತ ರಾಜರು ಇಳಿದುಕೊಂಡಿದ್ದ ಬೀಡುಗಳು ಕಣ್ಣಿಗೆ ಕಂಡವು. ವ|| ಹಾಗೆ ನೋಡುತ್ತಿರಲು ಮೆಚ್ಚುತ್ತಲೂ ಬರುತ್ತಿರಲು-೩೯. ಈ ಮೂರು ಲೋಕದ ಸುಪ್ರಸಿದ್ದ ಹೆಂಗಸರನ್ನು ಮೀರಿಸಿರುವ ಕಮಲಪತ್ರದಂತೆ ವಿಚಿತ್ರವಾದ ಕಣ್ಣುಳ್ಳ ಬ್ರೌಪದಿಗೆ ಸ್ವಯಂವರದಲ್ಲಿ ಪತಿಯಾಗುವುದಾದರೆ ನಾವು ನಿಶ್ಚಯವಾಗಿಯೂ ಈ ಭೂಮಿಯನ್ನು ಆಳುವವರೇ ಸರಿ ಎಂದು ಒಟ್ಟಾಗಿ ಸೇರಿದ ಸಮಸ್ತ ರಾಜರ ಬೆಳ್ಕೊಡೆಗಳಿಂದ ಆ ದಿನ ಆ ಪಟ್ಟಣವನ್ನು ಪ್ರವೇಶಿಸಿ ಎಲ್ಲಿಯೂ ಬೀಡುಬಿಡಲು ಸ್ಥಳ ಸಿಕ್ಕದೆ ಒಂದು ಕುಂಬಾರನ ಗುಡಿಸಲಿನಲ್ಲಿ ಅವಕಾಶವನ್ನು ಮಾಡಿಕೊಂಡು ಬ್ರಹ್ಮಲೋಕದ ಹಾಗಿದ್ದ ಬ್ರಾಹ್ಮಣರ ಸಭೆಯಲ್ಲಿ ದೇವಬ್ರಾಹ್ಮಣರಂತಿರುತ್ತಿದ್ದರು. ೪೦. ಅಲ್ಲಿ ಸೇರಿದ ಎಲ್ಲ ಕ್ಷತ್ರಿಯವರ್ಗವನ್ನು ಆದರದಿಂದ ಇದಿರುಗೊಂಡು ಸ್ವಯಂವರಶಾಲೆಯನ್ನು ಅನೇಕ ರತ್ನಗಳಿಂದ ರಚಿತವಾಗಿರುವ ಹಾಗೆ ಮಾಡಿಸಿ ರಾಜರುಗಳಿರುವುದಕ್ಕಾಗಿ ಸಾಲಾಗಿ ಅನೇಕ ತೊಟ್ಟಿಯ ಮನೆಗಳನ್ನು ನಿರ್ಮಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy