SearchBrowseAboutContactDonate
Page Preview
Page 193
Loading...
Download File
Download File
Page Text
________________ ೧೮೮ / ಪಂಪಭಾರತಂ ಕಂ|| ಇದು ನಿನ್ನ ಕೊಟ್ಟ ತಲೆ ನಿನ ಗಿದನಿತ್ತಪನೆಂದು ನುಡಿಯಲಾಗದು ಮಾರ್ಕೊ | ಇದಿರೆಂದು ಗಿಳಿಯ ಬಣ್ಣದ ಕುದುರೆಯನಯೂರನಿತ್ತನಂಗದಪರ್ಣ೦ || ವll ಇತೊಡಿವನ್ನೆಗಮೆಮಗಾಗಿರ್ಕೆಂದು ಪ್ರಿಯಂ ನುಡಿದಂಗದಪರ್ಣನನಿರಟ್ಟು ಮಾರ್ತಾಂಡೋದಯಮ ನಿಜೋದಯಮಾಗೆ ಪಯಣಂಬೋಗಿಕಂll ಪುಣ್ಯನದೀನದ ನಗ [ಲಾ] ವಣ್ಯ ವಿಭೂಷಣೆಯನೊಲ್ಲು ನೋಡುತ್ತುಮಿಳಾ | ಪುಣ್ಯ ಸ್ತ್ರೀಯಂ ಸಂಚಿತ ಪುಣ್ಯರ್ ಪಾಂಚಾಲದೇಶಮಂ ಪುಗುಂದರ್ || ೩೬ ವ|| ಅಂತು ತದ್ವಿಷಯವಿಳಾಸಿನಿಗೆ ಹಿಡಿದ ಕನಕಚ್ಚತ್ರದಂತ ಸೊಗಯಿಸುವ ಛತ್ರವತೀಪುರದ ಪೊಜವೊಲಲನೆಯ್ತರ್ಪಾಗಳ ಉ 1 ಪಾಡುವ ತುಂಬಿ ಕೊಡುವ ಪುಟೆಲ್ ನಡಪಾಡುವ ರಾಜಹಂಸ ಬಂ ದಾಡುವ ತೊಂಡುವುರುಳಿ ತೀಡುವ ತಂಬೆರಲೊಲ್ಲು ನಲ್ಲರೊಳ್ | ಕೂಡುವ ನಲ್ಲರಾರೆರ್ದಗಮಾರ ಮನಕ್ತಮನಂಗರಾಗಮಂ ಮಾಡೆ ಮನಕ್ಕೆ ಬಂದುವರಿಕೇಸರಿಗಲ್ಲಿಯ ನಂದನಾಳಿಗಳ್ | ೩೭ ಕರೆದುಕೊಂಡು ಹೋಗಿ ಪ್ರೀತಿಯಿಂದ ಆತಿಥ್ಯವನ್ನು ಮಾಡಿದನು. ಅಲ್ಲದೆ ೩೫. ಇದು ನೀನು ಕೊಟ್ಟ (ಬದುಕಿಸಿದ-ಉಳಿಸಿದ) ತಲೆ ಇದನ್ನು ನಿನಗೆ ಪ್ರತಿಯಾಗಿ ಕೊಡುತ್ತಿದ್ದೇನೆಂದು ಹೇಳಕೂಡದು. ಪ್ರತಿಮಾತಾಡಬೇಡ ಎಂದು ಅಂಗದಪರ್ಣನು ಗಿಳಿಯ ಬಣ್ಣದ ಅಯೂರು ಕುದುರೆಗಳನ್ನು ಅರ್ಜುನನಿಗೆ ಕೊಟ್ಟನು. ವll ನಾವು ಅಪೇಕ್ಷಿಸುವವರೆಗೆ ಇವು ನಮ್ಮದಾಗಿ ನಿಮ್ಮಲ್ಲಿರಲಿ ಎಂದು ಪ್ರಿಯವಾದ ಮಾತನಾಡಿ ಅಂಗದಪರ್ಣನನ್ನು ಅಲ್ಲಿರಲು ಹೇಳಿ ಸೂರ್ಯೊದಯವೇ ತಮ್ಮ ಅಭಿವೃದ್ಧಿ ಸೂಚಕವಾಗಿರಲು ಪಾಂಡವರು ಮುಂದೆ ಪ್ರಯಾಣ ಮಾಡಿದರು. ೩೬. ಪವಿತ್ರವಾದ ನದಿ, ನದ, ನಗರ, ಅರಣ್ಯಗಳಿಂದ ಅಲಂಕೃತವೂ ಪುಣ್ಯಭೂಮಿಯೂ ಆದ ಆ ಪ್ರದೇಶಗಳನ್ನು ಪ್ರೀತಿಯಿಂದ ನೋಡುತ್ತ ಪುಣ್ಯಶಾಲಿಗಳಾದ ಪಾಂಡವರು ಪಾಂಚಾಲ ದೇಶವನ್ನು ಪ್ರವೇಶಮಾಡಿದರು. ವ|| ಆ ದೇಶವೆಂಬ ಸ್ತ್ರೀಗೆ ಹಿಡಿದ ಚಿನ್ನದ ಕೊಡೆಯಂತೆ ಸೌಂದರ್ಯದಿಂದ ಕೂಡಿದ ಛತ್ರವತಿಪುರದ ಹೊರಪಟ್ಟಣ (ಪ್ರದೇಶವನ್ನು ಬಂದು ಸೇರಿದರು. ೩೭. ಅಲ್ಲಿ ಹಾಡುತ್ತಿರುವ ದುಂಬಿ, ತಂಪಾಗಿರುವ ತೋಪು, ನಡೆದಾಡುತ್ತಿರುವ ರಾಜಸಿಂಹ, ಬಂದು ಮಾತನಾಡುವ ತುಂಟಹೆಣ್ಣು ಗಿಳಿ, ಬೀಸುವ ತೆಂಕಣಗಾಳಿ, ಪ್ರೇಯಸಿಯರಲ್ಲಿ ಕೂಡುವ ಪ್ರಿಯರು - ಇವು ಯಾರ ಹೃದಯಕ್ಕೂ ಯಾರ ಮನಸ್ಸಿಗೂ ಕಾಮೋದ್ರೇಕವನ್ನುಂಟುಮಾಡುತ್ತಿರಲು ಅಲ್ಲಿಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy