SearchBrowseAboutContactDonate
Page Preview
Page 167
Loading...
Download File
Download File
Page Text
________________ ೧೬೨ ಪಂಪಭಾರತಂ - ಚಂil ಅವರಿವರನ್ನರಿನ್ನರನವೇಡರಿಕೇಸರಿಗಾಂಪನಿಲ್ಲ ಮಾ : .. ಅವ ತಲೆದೋರ್ವ ಗಂಡರಣಮಿಲ್ಲೆಡೆಯೊಳ್ ಗೆಡವಚ್ಚುಗೊಂಡು ಪಾಂ | , ಡವರನಕಾರಣಂ ಕೆಣಕಿದೀ ಪೊಸ ಪೊಳಾದ ಕಿರ್ಚು ಕೌ "ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ || ೮೭ ವ ಎಂದೂರ್ವರೊರ್ವರೋಂದೋಂದನ ನುಡಿಯತ್ತು ಪೂಗ ಬೆಳಗುವ ದೀವಿಗೆಗಳ ಕಬಲೆಯಂ ತಲೆದೊಅಲೀಯದ ಪ್ರಚಂಡ ಮಾರ್ತಾಂಡನ ತೇಜೊಂಕುರಂಗಳ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಲ್ಕಂ11 ಎಸೆವ ನಿಜವಂಶಮಂ ಪೆ ರ್ಚಿಸುವ ಗುಣಾರ್ಣವನೊಳುಂತ ಸೆಣಸಲೆಂದಿ ! .. : ರ್ಪ ಸುಯೋಧನಂಗೆ ಮುಳಿಸಿಂ ಕಿರುಗಣಿದ ತಆದಿನಮತಕರನುದಯಿಸಿದಂ || * ವll ಆಗ ದುರ್ಯೋಧನಂ ಭೀಮಸೇನನ ಬಲ್ಲಾಳನದಳವುಮಂ ವಿಕ್ರಮಾರ್ಜುನನ ದಿವ್ಯಾಸ್ತ ಕೌಶಳಮುಮಂ ಕಂಡು ತನ್ನೆರ್ದಯುಂ ಪೊಳ್ಳುಮರನಂ ಕಿರ್ಚಳುರ್ವಂತೂಳಗೊಳಗಳುರೆ ಸೈರಿಸಲಾಗಿದೆ ಕರ್ಣನಂ ಕರೆದಾಚಿಸಿ ತಮ್ಮಯ್ಯನಲ್ಲಿಗೆ ಹೋಗಿ ಪೊಡಮಟ್ಟು ಕಟೇಕಾಂತದೊಳಿಂತೆಂದಂ ೮೮ ಮಾತನಾಡುತ್ತಿರಲು ಅವರಲ್ಲಿ ಭವಿಷ್ಯಜ್ಞಾನವುಳ್ಳ ಕೆಲವರು ಹೀಗೆಂದರು-೮೭. ಅವರು ಇವರು ಅಂತಹವರು ಇಂತಹವರು ಎನ್ನಬೇಡ. ಅರಿಕೇಸರಿಯನ್ನೆದುರಿಸುವವರಾರೂ ಇಲ್ಲ. ಅರ್ಜುನನ ಆಜ್ಞೆಯನ್ನು ಮೀರಿ ಅವನನ್ನು ಪ್ರತಿಭಟಿಸುವ ವೀರರು ಯಾರೂ ಇಲ್ಲ. ಇಬ್ಬರಿಗೂ ಸಮಾನವಾಗಿದ್ದ ಸ್ನೇಹಭಂಗವಾಗಿ ಪಾಂಡವರನ್ನು ಕಾರಣವಿಲ್ಲದೆ ಕೆಣಕಿದ ಈ ಹೊತ್ತಿನಲ್ಲಿ ಉಂಟಾದ ಬೆಂಕಿಯು (ಮನಸ್ತಾಪವು) ಕೌರವರಿಗೆ * ವಿಶೇಷವಾದ ಹಿಂಸೆಯನ್ನುಂಟುಮಾಡದೇ ಸಾಮಾನ್ಯವಾಗಿ ಹೋಗುತ್ತದೆಯೇ? ವll ಎಂದು ಒಬ್ಬೊಬ್ಬರು ಒಂದೊಂದನ್ನು ಆಡುತ್ತ ಹೋಗುತ್ತಿರಲಾಗಿ ಪ್ರಕಾಶಮಾನವಾಗಿದ್ದ ಕೈದೀವಿಗೆಗಳು ಕತ್ತಲೆಯು ಹರಡುವುದಕ್ಕೆ ಅವಕಾಶ ಕೊಡದೆ ಪ್ರಕಾಶಮಾನವಾದ ಸೂರ್ಯಕಿರಣಗಳ ಮೊಳಕೆಯಂತೆ ಬೆಳಗುತ್ತಿರಲು ಪಾಂಡವರು ತಮ್ಮ ನಿವಾಸಕ್ಕೆ ಹೋದರು. ಆಗ-೮೮, ಪ್ರಕಾಶಮಾನವಾದ ತನ್ನ ವಂಶವನ್ನೂ ಅಭಿವೃದ್ಧಿಗೊಳಿಸುವ ಗುಣಾರ್ಣವನಾದ ಅರ್ಜುನನಲ್ಲಿ ನಿಷ್ಕಾರಣವಾಗಿ ಜಗಳವಾಡಬೇಕೆಂದಿರುವ ದುರ್ಯೋಧನನಿಗೆ ಕೋಪದಿಂದ ತನ್ನ ಕಣ್ಣನ್ನು ಕೆರಳಿಸಿದ ರೀತಿಯಲ್ಲಿ ಚಂದ್ರನು ಕೆಂಪಗೆ ಉದಯಿಸಿದನು. ವ|| ಆಗ ದುರ್ಯೊಧನನು ಭೀಮಸೇನನ ಪರಾಕ್ರಮದ ಪ್ರಮಾಣವನ್ನೂ ಅರ್ಜುನನ ದಿವ್ಯಾಸ್ತಕೌಶಲವನ್ನೂ ನೋಡಿ ಅವನ ಹೃದಯವು ಪೊಳ್ಳುಮರವನ್ನು ಬೆಂಕಿಯು ಸುಡುವಂತೆ ಒಳಗೊಳಗೆ ಸುಡುತ್ತಿರಲು ಸಹಿಸಲಾರದೆ ಕರ್ಣನನ್ನು ಕರೆದು (ಅವನೊಡನೆ) ಯೋಚನೆಮಾಡಿ ತನ್ನ ತಂದೆಯಾದ ದೃತರಾಷ್ಟ್ರನ ಸಮೀಪಕ್ಕೆ ಹೋಗಿ ನಮಸ್ಕಾರಮಾಡಿ ಬಹು ರಹಸ್ಯವಾಗಿ ಹೀಗೆ ಹೇಳಿದನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy