SearchBrowseAboutContactDonate
Page Preview
Page 166
Loading...
Download File
Download File
Page Text
________________ ಕಂ।। ದ್ವಿತೀಯಾಶ್ವಾಸಂ | ೧೬೧ ಪೊಡಮಡುವರ್ ಜೀಯೆಂಬ‌ ಕುಡು ದಯೆಗೆಯ್ಯಂ ಪ್ರಸಾದವೆಂಬವು ಪರೊಳ್ | ನಡೆಗೆಮ್ಮ ನಿನ್ನಯೆಡೆಯೊಳ್ ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ || ೮೫ ವ|| ಎಂದು ಬೇಡಿಕೊಂಡು ಕರ್ಣನಂ ಮುಂದಿಟ್ರೊಡಗೊಂಡು ಪೋಗಿ ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್ 611 ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮು ಯಾಂತಿರದಿರ್ ಗುಣಾರ್ಣವನಿನಸಮಯಕ್ಕಿದು ಸಾಲುಮಾಗಳೆಂ | ಬಂತವೊಲಂದು ಮುಂದಲೆದು ತನ್ನ ಮಗಂಗೆ ಸಮಂತು ಬುದ್ಧಿವೇ ಅಂತವೊಲತ್ತಲಸಗಿರಿಯಂ ಮಜಗೊಂಡುದು ಸೂರ್ಯಮಂಡಲಂ || ೮೬ ವ|| ಆಗಳ್ ದುರ್ಯೋಧನನಂ ಮುಂದಿಟ್ಯೂಡಗೊಂಡು ಧೃತರಾಷ್ಟ್ರ ಕರ್ಣ ಶಲ್ಕ ಶಕುನಿ ಸೈಂಧವ ಪ್ರಕೃತಿಗಳ ನೆಲಂ ಮೂರವಿಟ್ಟಂತೆ ಸಭಾಕ್ಷೇಭಮಾಗೆ ತಳರ್ದು ನಾನಾ ವಿಧ ವಾಹನಂಗಳನೇಟೆ ನಿಜನಿವಾಸಗಳೆ ಪೋದರಿತ್ತ ಧರ್ಮಪುತ್ರನ ಮುಂದಿಟ್ಟು ಭೀಮಾರ್ಜುನ ನಕುಲ ಸಹದೇವರುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಕೃತಿಗಳ ನಾನಾವಿಧ ವಾಹನಗಳ ನೇಹಿ ಬರೆ ಪುರಜನಂಗಳೆಲ್ಲಮೋರೋರ್ವರನೆ ಪಿಡಿಯಚ್ಚುವಿಡಿದು ನುಡಿಯ ಕೆಲರನಾಗತಮನವ ಬುದ್ಧಿಯೊಡೆಯರಿಂತ೦ಬರ್ ಅನುಗ್ರಹಿಸಬೇಕು ಎಂದನು. ೮೫. ಎಲೈ ರಾಧೇಯನೇ ಇತರರು ನನಗೆ ನಮಸ್ಕಾರ ಮಾಡುತ್ತಾರೆ; ಸ್ವಾಮಿ ಎನ್ನುತ್ತಾರೆ; ಕೊಡಿ, ದಯಪಾಲಿಸಿ, ಏನು ಪ್ರಸಾದ ಎನ್ನುತ್ತಾರೆ. ಇವೆಲ್ಲ ಇತರರಲ್ಲಿ ನಡೆಯಲಿ; ನನ್ನ ನಿನ್ನ ವ್ಯವಹಾರದಲ್ಲಿ ಬೇಡ, ನೀನು ನನಗೆ ಸ್ನೇಹಿತನು ಮಾತ್ರನಾಗಿರುತ್ತೀಯೆ. ವ|| ಎಂದು ಬೇಡಿಕೊಂಡು ಕರ್ಣನನ್ನು ಮುಂದುಮಾಡಿಕೊಂಡು ಹೋಗಿ ಧೃತರಾಷ್ಟ್ರನಿಗೂ ಗಾಂಧಾರಿಗೂ ನಮಸ್ಕಾರ ಮಾಡಿಸಿದನು. ೮೬. 'ಹೀಗೆ ದುರ್ಯೋಧನನು ಮಾಡಿದ ರಾಜ್ಯವೈಭವಕ್ಕೆ ಸುಮ್ಮನೆ ಉಬ್ಬಿಹೋಗಬೇಡ. ಗುಣಾರ್ಣವನಿಂದ ನೀನು ಸಾಯುವುದಕ್ಕೆ ಈಗ ಇಷ್ಟೇ ಸಾಕು' ಎಂದು ಸೂರ್ಯನು ಮುಂದೆ ತನಗಾಗುವುದನ್ನು ಇಂದೇ ಪೂರ್ಣವಾಗಿ ಬುದ್ದಿ ಹೇಳುವ ಹಾಗೆ ಅಸ್ತಮಯನಾದನು (ಸೂರ್ಯಮಂಡಲವು ಅಸ್ತಪರ್ವತದ ಹಿಂದೆ ಮರೆಗೊಂಡಿತು). ವll ಆಗ ದುರ್ಯೋಧನನನ್ನು ಮುಂದಿಟ್ಟುಕೊಂಡು ಧೃತರಾಷ್ಟ್ರ, ಕರ್ಣ, ಶಲ್ಯ, ಶಕುನಿ, ಸೈಂಧವ, ಮೊದಲಾದವರು ನೆಲ ಬಿರಿದುಹೋದ ಹಾಗೆ ಸಭಾಮಂಟಪವು ಕಲಕಿಹೋಗುವ ಹಾಗೆ ಹೊರಹೊರಟು ನಾನಾವಿಧವಾದ ವಾಹನಗಳನ್ನು ಹತ್ತಿಕೊಂಡು ತಮ್ಮ ವಾಸಸ್ಥಳಕ್ಕೆ ಹೋದರು. ಈ ಕಡೆ ಧರ್ಮರಾಜನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲ ಸಹದೇವರೂ ಭೀಷ್ಮ ದ್ರೋಣ, ಕೃಪ, ವಿದುರರೇ ಮೊದಲಾದವರೂ ಬಗೆಬಗೆಯ ವಾಹನಗಳನ್ನು ಹತ್ತಿ ಬರುತ್ತಿರಲು ಪಟ್ಟಣದವರೆಲ್ಲ ಒಬ್ಬೊಬ್ಬರನ್ನೂ ಅವರ ಪ್ರತ್ಯೇಕವಾದ ಸಂಕೇತಗಳಿಂದ ಗುರುತಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy