SearchBrowseAboutContactDonate
Page Preview
Page 156
Loading...
Download File
Download File
Page Text
________________ ದ್ವಿತೀಯಾಶ್ಚಾಸಂ | ೧೫೧ ಕಂಕಳೆಯುಂ ಗುಳಯುಂ ಗೊಟ್ಟಿಯು ಮಳವಿಗೆ ಏರಿದಾಗ ತನಗೆ ದುರ್ಯೋಧನನೂ | ಮುಳಿಸುಂ ನೋವುಂ ಕಲುಷಮು ಮಳುಂಬಮನೆ ತನಗರಾತಿಕಾಳಾನಳನೊಳ್ || ೫೮ ವ|| ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನಭ್ಯಾಸಂಗಯ್ಯಂತ ವಿದ್ಯಾಭ್ಯಾಸಂಗೆಯ್ಕೆಕಂ|| ಮನದೊಳೊಗದಸ್ಯಜನ್ಮದ ಮುನಿಸದು, ಕಣ್ಣಂ ತುಳುಂಕೆ ಸೈರಿಸದವನು | ರ್ವಿನ ಕಲಿತನಕ್ಕೆ ದುರ್ಯೊ ಧನನುಂ ಭೀಮನೊಳೆ ಸೆಣಸಿ ಗದೆಯಂ ಕಲಂ || ೫೯ ವ|| ಅಂತು ಭಾರದ್ವಾಜನಾಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಂ ಸಮಯಿಸುವ ಸೂತ್ರಧಾರನಂತೆ ಶಸ್ತವಿದ್ಯಾಭ್ಯಾಸಂಗೆಯ್ಯುತ್ತಿರೆ ದೇಶಾಧೀಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳ ಕಳಾಧರನಂತೆ ಶಸ್ತಕಳಾಧರನಾಗಿ ತನ್ನುಮಂ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನಾರಯಲೆಂದುಕ೦ll ಛಾಯಾಲಕ್ಷ ಮನೊಡ್ಡಿಯು ಮಾಯದ ನೀರೊಳಗೆ ತನ್ನನಡಸಿದ ನೆಗಲಂ | ಬಾಯಟಿವಿನಮಿಸಿಸಿಯುಮರ ಹೋಯಜ ಬಾಷ್ಟೊಂದು ಹರಿಗನಂ ಗುರು ಪೊಗಂ || ೬೦ | ೫೮. ಕಾಲಕಳೆದಂತೆಲ್ಲ ಕರ್ಣನಿಗೆ ದುರ್ಯೊಧನನಲ್ಲಿ ಸ್ನೇಹವೂ ಗುರಿಯೂ (ಸಹಪಾಠಿತ್ವವೂ) ಅಳತೆಗೆ ಮೀರಿದಂತೆ ಅರಾತಿ ಕಾಲಾನಲನಾದ ಅರ್ಜುನನಲ್ಲಿ ಕೋಪವೂ ವ್ಯಥೆಯೂ ಅಸೂಯೆಯೂ ಅಧಿಕವಾಯಿತು. ವಕರ್ಣನು ಗುಣಾರ್ಣವನಲ್ಲಿ ಸ್ಪರ್ಧಿಸಿ ಹಗೆತನವನ್ನಭ್ಯಾಸಮಾಡುವಂತೆಯೇ ವಿದ್ಯೆಯನ್ನು ಅಭ್ಯಾಸಮಾಡಿದನು. ೫೯. ಮನಸ್ಸಿನಲ್ಲಿ ಹುಟ್ಟಿದ ಪೂರ್ವಜನ್ಮದ ಕೋಪವು ಕಣ್ಣಿನಲ್ಲಿ ತುಳುಕುತ್ತಿರಲು ಅವನ ಅಭಿವೃದ್ಧಿಯಾಗುತ್ತಿರುವ ಶೌರ್ಯಕ್ಕೆ ಸಹನೆಯಿಲ್ಲದೆ ದುರ್ಯೊಧನನೂ ಭೀಮನಲ್ಲಿ ಸ್ಪರ್ಧಿಸಿ ಗದೆಯ ಪ್ರಯೋಗವನ್ನು ಕಲಿತನು. ವ|| ಹಾಗೆ ದ್ರೋಣಾಚಾರ್ಯನು ಮುಂದೆ ಬರುವ ಯುದ್ಧರಂಗಕ್ಕೆ ಪಾತ್ರಗಳನ್ನು ಸಿದ್ಧಪಡಿಸುವ ಸೂತ್ರಧಾರನ ಹಾಗೆ ಶಸ್ತವಿದ್ಯಾಭ್ಯಾಸವನ್ನು ಮಾಡಿಸುತ್ತಿರಲು ಅನೇಕ ದೇಶದ ಒಡೆಯರಾದ ಹಲವು ರಾಜಕುಮಾರರ ಮಧ್ಯದಲ್ಲಿ ನಕ್ಷತ್ರಸಮೂಹದ ಮಧ್ಯದ ಪೂರ್ಣಚಂದ್ರನ ಹಾಗೆ ಶಸ್ತಕಲೆಯನ್ನು ಧರಿಸಿ ತನ್ನನ್ನೂ ಗೆದ್ದಿರುವ ಸಾಮಂತಚೂಡಾಮಣಿಯಾದ ಅರ್ಜುನನ (ಅರಿಕೇಸರಿಯ) ಬಾಣಪ್ರಯೋಗ ಪಾಂಡಿತ್ಯವನ್ನು ಪರೀಕ್ಷಿಸಬೇಕೆಂದು-೬೦. ಪ್ರತಿಬಿಂಬದ ಗುರಿಯನ್ನು ಒಡ್ಡಿಯೂ ಆಳವಾದ ನೀರಿನಲ್ಲಿ ತನ್ನನ್ನು ಹಿಡಿದಿದ್ದ ಮೊಸಳೆಯನ್ನು ಅದು ಅರಚಿಕೊಂಡು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy