SearchBrowseAboutContactDonate
Page Preview
Page 155
Loading...
Download File
Download File
Page Text
________________ [೧೫೦ | ಪಂಪಭಾರತಂ ಕoll ಇನಿಬರೊಳಗೀತನೊರ್ವನೆ ಧನುರಾಗಮದೆಡೆಗೆ ಕುಶಲನಕ್ಕುಮದರ್ಕೆಂ | ಕಿನಿಸದಿರಿಂ ಮುನ್ನಪಿದೆ - ನೆನೆ ಭೀಷ್ಮನಲಂಪು, ಮಿಗೆ ಮುಗುಳಗೆ ನಕ್ಕಂ || ೫೫ : ವ|| ಅಂತು ದ್ರೋಣಾಚಾರನಾಚಾರಪದವಿಯಂ ಕೈಕೊಂಡು ಪಾಂಡವ ಕೌರವರ್ಗ ಚತುರಂಗ ಧನುರ್ವದಮುಮಂ ದಿವ್ಯಾಸಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಂಡಿವಾಳ ಮುದ್ಧರ ಗದಾದಿ ವಿವಿಧಾಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮನುಪದೇಶಂಗೆಯುತ್ತುಮಿರೆಯಿರಕoll ಯಾದವ ವಂಶಜರುಂ ನಾ ನಾ ದೇಶ ನರೇಂದ್ರರುಂ ಘಟೋದವನ ಧನು | ರ್ವದಮನ ಕಲಲ್ ಬಂದಾ ಳಾದರ್ ವಿದ್ಯಾಪ್ರಭಾವಮಾ ದೊರೆತ ವಲಂ || ದ್ರೋಣಂ ಗಡಮಿಸುವಿಗೆ ಜಾಣಂ ಗಡಮೆಂದು ಕೇಳು ಕೌರವರ್ಗಲ್ಲಂ | ಪ್ರಾಣಂ ಬರ್ಪಾಕೃತಿಯೋಳೆ . ಬಾಣಾಸನ ಬಾಣಪಾಣಿ ಕರ್ಣ೦ ಬಂದಂ || ವ|| ಅಂತು ಬಂದು ವೈರಿಗಜಘಟಾವಿಘಟನನೊಲ್ ವಿಘಟಿಸಿ ಬಿಲ್ಲು ಭೀಷ್ಮನಿಗೆ ಹೀಗೆ ಹೇಳಿದನು-೫೫, 'ಇಷ್ಟು ಮಕ್ಕಳಲ್ಲಿ ಇವನೊಬ್ಬನೇ ಬಿಲ್ವಿದ್ಯೆಯಲ್ಲಿ ಪಾರಂಗತನಾಗುತ್ತಾನೆ. ಅದಕ್ಕೆ ಕೋಪಿಸಬೇಡಿ; ಮೊದಲೇ ತಿಳಿಸಿದ್ದೇನೆ' ಎನ್ನಲು ಭೀಷ್ಮನು ಸಂತೋಷಾತಿಶಯದಿಂದ ಮುಗುಳ್ಳಗೆ ನಕ್ಕನು. ವ|| ಹಾಗೆ ದ್ರೋಣಾಚಾರ್ಯನು ಆಚಾರ್ಯಪದವಿಯನ್ನು ಅಂಗೀಕಾರ ಮಾಡಿ ಪಾಂಡವ ಕೌರವರುಗಳಿಗೆ ನಾಲ್ಕು ಭಾಗವಾಗಿರುವ ಬಿಲ್ವಿದ್ಯೆಯನ್ನೂ ದಿವ್ಯಾಸ್ತಗಳ ಪ್ರಯೋಗಗಳನ್ನೂ ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಧರ, ಗದೆಯೇ ಮೊದಲಾದ ಬಗೆಬಗೆಯ ಆಯುಧ ಪ್ರಯೋಗಗಳನ್ನೂ ಆನೆ, ತೇರು, ಕುದುರೆ ಮತ್ತು ಕಾಲಾಳುಗಳ ಯುದ್ದದ ರೀತಿಯನ್ನೂ ಹೇಳಿಕೊಟ್ಟನು. ೫೬. ಯಾದವ ವಂಶದವರೂ ನಾನಾ ದೇಶದ ರಾಜರೂ ದ್ರೋಣಾಚಾರ್ಯರ ಧನುರ್ವಿದ್ಯೆಯನ್ನು ಕಲಿಯಲು ಬಂದು ಆತನ ಶಿಷ್ಯರಾದರು. ದ್ರೋಣನ ವಿದ್ಯಾಪ್ರಭಾವವು ಅಂತಹ ಮಹಿಮೆಯುಳ್ಳದ್ದಲ್ಲವೆ? ೫೭. ದ್ರೋಣನಲ್ಲವೆ! ಬಾಣವಿದ್ಯೆಯಲ್ಲಿ ಜಾಣನಲ್ಲವೆ! ಎಂಬ ಪ್ರಶಂಸೆಯನ್ನು ಕೇಳಿ ಕೌರವರಿಗೆಲ್ಲ ಪ್ರಾಣ ಬರುವ ರೀತಿಯಲ್ಲಿ ಬಿಲ್ಲುಬಾಣಗಳನ್ನು ಹಿಡಿದು ಕರ್ಣನೂ ಅಲ್ಲಿಗೆ ಬಂದು ಕೂಡಿದನು. ವll ಹಾಗೆ ಬಂದು ಶತ್ರುರಾಜರ ಆನೆಗಳ ಸಮೂಹವನ್ನು ಭೇದಿಸಲು ಸಮರ್ಥನಾದ ಅರ್ಜುನನಲ್ಲಿ (ಅರಿಕೇಸರಿಯಲ್ಲಿ ಸ್ಪರ್ಧಿಸಿ ಬಿಲ್ವಿದ್ಯೆಯನ್ನು ಕಲಿತನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy