________________
ದ್ವಿತೀಯಾಶ್ವಾಸಂ | ೧೪೩ ಗೂಢಗುಲ್ಲವಾರ್ಷಿಗಳನೊಳಗೊಂಡ ಮನುಜಮಾಂಧಾತನ ಪೋಲಿ ಅಡಿಗಳ ವಿರೋಧಿ ಭೂಪಾಳರನಡಿಗೆಳಗಿಸಿದ ಸಂತೋಷದೊಳುನ್ನತಂಗಳಾದಂತೆ ಕೂರ್ಮೋನ್ನತಂಗಳಾದುವು ನೊಸಲಂ ಸುಟ್ಟ ತೋರ್ಪನ್ನವಪ್ಪುಗುಟಂಗಳೊಳ್ ಮಿಂಚಂ ಕೀಲಿಸಿದಂತೆ ತೊಳಗಿ ಪೊಳೆವ ಪ್ರಚಂಡ ಮಾರ್ತಾಂಡನ ಪಾದನಖಂಗಳ ಗಂಡರ ಪೆಂಡಿರಂಜಿದಳಿದ ಮೊಗಮಂ ನೋಡ ಕನ್ನಡಿಗಳನ್ನವಾದುವು ಪೊಸತಲರ್ದ ಕೆಂದಾವರೆಯ ಕೆಂಪುಮಂ ಮೆಲ್ಲುಮನಿಚ್ಚುಳಿಗೊಂಡು ತೊಳಗುವರಿಕೇಸರಿಯ ಪಾದತಳಂಗಳಡಿಗೆಅಗಿದರಿನರಪಾಲರ ಮಕುಟಮಾಣಿಕ್ಯಮರೀಚಿಜಾಲ ಬಾಳಾತಪಂಗಳನಲೆದು ಕೆಂಕಮಾದಂತಾದುವು ಪೊಸವೆಸಗೆಯ ಬಣ್ಣದಂತೆ ಸೊಗಯಿಸುವ ಸಾಮಂತ ಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತನೆಂಬ ಚಿತ್ತಾರಿಯ ವರ್ಣಕ್ರಮಂಗೆಯ ಕದಳೀಗರ್ಭಶ್ಯಾಮಮಂಬ ಬಣ್ಣದಂತಾದುದು
ಚಂ
ಮನದೊಳೊದಲು ಜೋಳಿಸಿ ನೋಡಲೊಡಂ ಸತೆಗೆಯು ಕಣ್ಣುಮಂ ಮನಮುಮನಂಗಜನನರಲಂಬುಗಳಿಂದ ಮರುಳ್ಳಿ ಬಂದ ಮಾ | ವಿನ ಬನದೊಳ್ ತೆರಳ್ಳಿ ಪೊಳೆವಿಂದುಮರೀಚಿಗಳಿಂದುರು ಪೂ ವಿನ ಪಸೆಯೊಳ್ ಪೊರಳಿದನಳುರ್ಕೆಯ ಬರ್ದೆಯರು ಗುಣಾರ್ಣವ ||
೪
ಮನುಜಮಾಂಧಾತನ ಅಡಿಯ ಹೊರಭಾಗಗಳು ಶತ್ರುರಾಜರನ್ನು ಕಾಲಿಗೆ ಬೀಳುವಂತೆ ಮಾಡಿದ ಸಂತೋಷದಲ್ಲಿ ಎತ್ತರವಾದಂತೆ ಹಾಗೆಯೇ ಆಮೆಯ ಚಿಪ್ಪಿನ ಮೇಲುಭಾಗದುತೆ ಉಬ್ಬಿಕೊಂಡವು. ಮುಖವನ್ನು ಸುಟ್ಟಿ ತೋರಿಸುವಂತಿರುವ ಕಾಲಿನ ಬೆರಳುಗಳಲ್ಲಿ ಸ್ವಲ್ಪ ನೆಟ್ಟಿರುವ ಹಾಗೆ ಪ್ರಕಾಶಮಾನವಾಗಿರುವ ಪ್ರಚಂಡಮಾರ್ತಾಂಡನ ಕಾಲಿನ ಉಗುರುಗಳು ವೀರಪತ್ನಿಯರು ಹೆದರಿದ ತಮ್ಮ ಮುಖವನ್ನು ನೋಡುವುದಕ್ಕೆ (ಉಪಯೋಗಿಸುವ) ಕನ್ನಡಿಯಂತಾದುವು. ಹೊಸದಾಗಿ ಅರಳಿರುವ ಕೆಂಪುದಾವರೆಯಂತೆ: ಕೆಂಪುಬಣ್ಣವನ್ನೂ ಬಿಳಿಯಬಣ್ಣವನ್ನೂ ತಿರಸ್ಕರಿಸುವ ಅರಿಕೇಸರಿಯ ಪಾದತಳೆಗಳು ಕಾಲಿಗೆ ಬಿದ್ದ ಶತ್ರುರಾಜರ ಕಿರೀಟದಲ್ಲಿರುವ ಮಾಣಿಕ್ಯ ಸಮೂಹದ ಕೊಂಬಿಸಿಲನ್ನು ಹಿಯ್ಯಾಳಿಸಿ ಕೆಂಪಾದಂತಾದುವು. ಹೆಸರುಕಾಳಿನ ಹೊಸಮೊಳಕೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಶರೀರದ ಬಣ್ಣವು ಬ್ರಹ್ಮನೆಂಬ ಬಣ್ಣಗಾರನು ಬಣ್ಣಗಳನ್ನು ಕಲಸಿಮಾಡಿದ ಬಾಳೆಯ ಹೂವಿನ ಮೋತೆಯಂತೆ ಕೆಂಪುಮಿಶ್ರವಾದ ಕಪ್ಪುಬಣ್ಣದಿಂದ ಕೂಡಿತು. ೪೦. ಗುಣಾರ್ಣವನು ದಿಟ್ಟರಾದ ಸ್ತ್ರೀಯರು ತನ್ನನ್ನು ಮನಸ್ಸಿನಲ್ಲಿ ಪ್ರೀತಿಸಿ ತನಗೆ ಅಧೀನವಾಗಿ ಸೋತು ಆಶೆಯಿಂದ ನೋಡಲು ಅವರ ಕಣ್ಣನ್ನೂ ಮನಸ್ಸನ್ನೂ ಮನ್ಮಥನ ಪುಷ್ಪಬಾಣದಿಂದ ಸೆರೆಹಿಡಿದು ಅವರಿಗೆ ಮೋಹವುಂಟಾಗುವ ಹಾಗೆ ಮಾಡಿ ಫಲಭರಿತವಾದ ಮಾವಿನ ತೋಟದಲ್ಲಿ ಸೇರಿಸಿ ಪ್ರಕಾಶಮಾನವಾದ ಬೆಳುದಿಂಗಳಿಂದ ಉರುಳಿಸಿ ಹೂವಿನ ಹಾಸಿಗೆಯಲ್ಲಿ ಹೊರಳುವ ಹಾಗೆ ಮಾಡಿದನು. (ಅವನನ್ನು ನೋಡಿದ ಧೀರಸ್ತ್ರೀಯರೂ ವಿಧವಿಧವಾದ ಕಾಮಬಾಧೆಗೊಳಗಾಗುತ್ತಿದ್ದರು ಎಂದು ಭಾವ).