SearchBrowseAboutContactDonate
Page Preview
Page 147
Loading...
Download File
Download File
Page Text
________________ ೧೪೨] ಪಂಪಭಾರತಂ ರಕ್ತಾಶೋಕಪುವದಂತೆ ತೊಳತೊಲೆತ್ತುವಾಂಧಿ; ಕುಚಕಲಶ ಪಲ್ಲವನ ಕರತಳಪಲ್ಲವಂಗ ಸಮದ ಗಜಕುಂಭಕಣಾಸ್ಲಾಳನ ಕರ್ಕಶಂಗಳಾದುವು ಪೊಡರ್ವ ಪಗೆವರನುಜದ ಕೊಂಡ ಸಂತೋಷದೊಳ ಪೀಯನೊಳಕೊಂಡ ಸಂತೋಷದೊಳಂ, ತೆಕ್ಕನೆ ತೀವಿದ ಕೇರಳೀ ಕೇಳಿ ಕಂದರ್ಪನಗಲುರ ಲಕ್ಷ್ಮಿಗೆ ಕುಲಭವನಮುಂ ನಿವಾಶಭವನಮುಮಾದುದು ಪೊಡರ್ವ ಮಂಡಳಿಕರ ಮನದಂತೆ ಕರಮ:ದದ ಪರಾಕ್ರಮಧಪತನ ಸುಧ್ಯಪ್ರದೇಶಂ ನಾರಾಯಣಂ ತಾಳಂ ಮಾಡಿ ತಾನಾಳ್ಳಾಡಿಯುಂ ತಾನಳ್ಳಾಡೆಯುಂ ಬರ್ದೆಯರ ಮನವನನ್ನಾಡಿಸುವಂತಾದುದು ಗಂಭೀರಗುಣದೊಳಮಾವರ್ತನ ಸಿದ್ದಿಯೊಳಂಜಳನಿಧಿಯನ ಪೋಲ್ಯ ಶರಣಾಗತ ಜಳನಿಧಿಯ ನಿಮ್ಮನಾಭಿ ಚೆಲ್ವಿಂಗೆ ತಾನೆ ನಾಭಿಂಯಾಡುಗು ಸಿಂಹಕಟಿತಟಮನಿಳಿಸುವ ರಿಪುಕುರಂಗ ಕಂಠೀರವನ ಕಟತಟಮೋಲ್ಲು ನೋಡುವ ಗಾಡಿಕಾರ್ತಿಯ - ಕಣ್ಣ ಕಾಮನಚ್ಚಣಚಂತೆ ದೊಡ್ಡಿತ್ತಾಗಿ ಮಾಡುವುದ್ವತ್ ವ್ಯತ್ಯತೆಯ ನಿಟ್ಟುಕೊಂಡಂತುದ್ವತ್ತಂಗಳಾದುವು ಉದಾತ್ತನಾರಾಯಣನೂರುಯುಗಂಗಳ್ ಮಾನಿನಿಯರ ಮನೋಗಜಂಗಳಂ ಕಾಲಾನ ಸಂಭಂಗಳಾದುವು ಅಂತಪೂರ್ವಂಗಳಾಗಿ ತೋಳಗುವ ಕಿದೊಡೆಗಳುಡುವಡರ್ದನಮಾರೂಢ ಸರ್ವಜ್ಞನ ದೊಡ್ಡ ಮಾರ್ಗಂಗಳೆಳವಾಡಿಕೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು ಪ್ರಕಾಶಮಾನವಾಗಿರುವ ಆಂದ್ರೀಕುಚಕಲಶಪಲ್ಲವನ ಚಿಗುರಿನಂತಿರುವ ಅಂಗೈಗಳು ಮದ್ದಾನೆಗಳ ಕುಂಭಸ್ಥಳವನ್ನು ಅಪ್ಪಳಿಸುವುದರಿಂದ ಒರಟಾದುವು; ಉದ್ಧತರಾದ ಶತ್ರುಗಳನ್ನು ಶೀಘ್ರವಾಗಿ ಸೋಲಿಸಿದ ಸಂತೋಷದಿಂದಲೂ ಐಶ್ವರ್ಯವನ್ನು ಪಡೆದ ಸಂತೋಷದಿಂದಲೂ ಇದ್ದಕ್ಕಿದ್ದ ಹಾಗೆ ತುಂಬಿಕೊಂಡ ಕೇರಳೀಕೇಳೀಕಂದರ್ಪನ ವಿಶಾಲವಾದ ಎದೆಯು ಲಕ್ಷ್ಮೀದೇವಿಗೆ ವಂಶಪಾರಂಪರ್ಯವಾಗಿ ಬಂದ ನೆಲೆಯೂ ನಿತ್ಯವಾಸಸ್ಥಳವೂ ಆಯಿತು; ಉತ್ತರಾದ (ಮೇಲೆ ಬೀಳುವ) ಸಾಮಂತರಾಜರ ಮನಸ್ಸಿನಂತೆ ಬಹಳ ಕೃಶವಾದ ಪರಾಕರ್ಮಧವಳನ ಸೊಂಟವು ಶ್ರೀಮನ್ನಾರಾಯಣನು ತಾನೇ ಯಜಮಾನನಾಗಿಯೂ ತನ್ನನ್ನೇ ಆಳಾಗಿಯೂ ಮಾಡಿಕೊಂಡೂ ತಾನೇ ನರ್ತನಮಾಡಿ ಕುಲಸ್ತೀಯರ ಮನಸ್ಸನ್ನು ವಿಚಲಿತವನ್ನಾಗಿ ಮಾಡುವಂತಾಯಿತು. ಗಂಭೀರಗುಣದಲ್ಲಿಯೂ ಸುಳಿಸುಳಿಯಾಗಿರುವ ಇತರ ಗುಣದಲ್ಲಿಯೂ ಸಮುದ್ರವನ್ನು ಹೋಲುವ ಶರಣಾಗತ ಜಲನಿಧಿಯ ಆಳವಾದ ಹೊಕ್ಕುಳು ಸೌಂದರ್ಯಕ್ಕೆ ತಾನೆ ಕೇಂದ್ರವಾಯಿತು; ಸಿಂಹದ ಸೊಂಟದ ಭಾಗವನ್ನೂ ಹಿಯ್ಯಾಳಿಸುವ ರಿಪುಕುರಂಗಕಂಠೀರವನ ಸೊಂಟದ ಭಾಗವು ಪ್ರೀತಿಯಿಂದ ನೋಡುವ ಸುಂದರಸ್ತ್ರೀಯರ ಕಣ್ಣಿಗೆ ಕಾಮನ ಗುರಾಣಿಯಂತೆ ದೊಡ್ಡದಾಗಿ ಬೆಳೆದು ಅತಿಶಯವಾದ ದಪ್ಪವನ್ನು ತಾಳಿದಂತೆ ವಿಶೇಷ ಗುಂಡಾಗಿ ಬೆಳೆದುವು; ಉದಾತ್ತ ನಾರಾಯಣನ ಎರಡು ತೊಡೆಗಳು ಸ್ತ್ರೀಯರ ಮನಸ್ಸೆಂಬ ಆನೆಗಳನ್ನು ಕಟ್ಟುವ ಕಂಬಗಳಾದುವು, ಹಾಗೆಯೇ ಅಪೂರ್ವವಾಗಿ ಪ್ರಕಾಶಿಸುವ ಕಿರುದೊಡೆಗಳು ಉಡುಹತ್ತಿದಂಥವು - ಆರೂಢಸರ್ವಜ್ಞನ ತೊಡೆಯ ಕಿಣ ಅಥವಾ ಜಡ್ಡುಗಳು (ಕುದುರೆಸವಾರಿಮಾಡುವಾಗ ಒತ್ತಿ ಆದ ಜಡ್ಡು) ಎಳೆಯ ಬಾಳೆಯ ದಿಂಡಿನಲ್ಲಿ ಸಾಣೆಯಕಲ್ಲನ್ನು ಕಟ್ಟಿದ ಹಾಗಾದುವು; ಗೂಢವಾದ ಕಾಲಿನ ಹರಡನ್ನು ಹೊಂದಿರುವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy