SearchBrowseAboutContactDonate
Page Preview
Page 133
Loading...
Download File
Download File
Page Text
________________ ೧೨೮ / ಪಂಪಭಾರತಂ ಬಿರಿಮುಗುಳಳ ತುಣುಗಲೊಳೆಗಿ ತುಲುಗಿದ ಕಲ್ಪಲತೆಗಳುಮಾತನ ಬರವಿಂಗೆ ಬದ್ದವಣಂ ಬಾಜಿಪಂತ ಭೋರ್ಗರೆದು ಮೊರವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತ ಪುಳಿನಸ್ಥಳಂಗಳೊಳುದಿರ್ದ ಕಟವೂಗಳುಮಾತನ ಬರವಿಂಗೆ ವನವನಿತ ಮೆಚ್ಚಿ ನಡೆಯ ಕೆಯ್ದೆಯಂತ ನಿಳನಿಳಗೊಂಡು ಸೊಗಯಿಸುವ ನಿಗನ ನಿಂದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ ನಂದನವನಂಗಳ ಜನಂಗಳನನಂಗಂಗೆ ತೊತ್ತುವೆಸಂಗೆಯ್ದಿದುವು ಚಂ || ಬಿರಯಿಯ ಮಿತ್ತುವಂ ಮಿರಿದೊಡಲ್ಲದಣಂ ಮುಳಿಸಾಗಿದೆಂದು ಪ ಲೊರದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ | ಅರನಿರದೂ ಸಾಹಿ ಜಡಿವಂತೆಗುಂ ಸಹಕಾರ ಕೊಮಳಾಂ ಕುರ ಪರಿತುಷ್ಟ ಪಪ್ಪ ಪರಪುಷ್ಪ ಗಳಧ್ವನಿ ನಂದನಂಗಳೊಳ್ || ಚಂ || ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ ವಿಲನುವಾಗಿ ಬಂದ ಮಲಯಾನಿಲನೂದೆ ತೆರಳ್ ಚೂತ ಪ | ಲ್ಲವದ ತೆರಳಿ ತವ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ ಲ್ಲವದ ತೆರಳೆಯಂತೆಸೆಯ ಕಣ್ಣೆಸೆದಿರ್ದುವು ನಂದನಾಳಿಗಳ್ || 02 24 ಗುಂಪುಗಳಿಂದ ಕೂಡಿ ದಟ್ಟವಾಗಿರುವ ಕಲ್ಪಲತೆಗಳೂ ಆತನ ಬರವಿಗೆ ಮಂಗಳವಾದ್ಯವನ್ನು ಬಾಜಿಸುವಂತೆ ಭೋರ್ಗರೆದು ಶಬ್ದಮಾಡುವ ದುಂಬಿಗಳೂ ಆತನ ಬರವಿಗೆ ರಂಗೋಲೆಯನ್ನಿಕ್ಕಿದಂತೆ ಮರಳಿನ ಪ್ರದೇಶದಲ್ಲಿ ಉದುರಿದ್ದ ಕಳಿತಹೂವುಗಳೂ ಆತನ ಬರುವಿಕೆಗೆ ವರಲಕ್ಷ್ಮಿಯು ಸಂತೋಷಪಟ್ಟು ಸಂಪೂರ್ಣವಾಗಿ ಅಲಂಕಾರಮಾಡಿದಂತೆ ನಿರಿಗೆನಿರಿಗೆಯಾಗಿ ಸೊಗಯಿಸುವ ಸಿಹಿಮಾವಿನ ಸಾಲಾಗಿರುವ ಗೊಂಚಲುಗಳೂ ಆತನ ಮೇಲೆ ಪ್ರೀತಿಸಿ ನುಗ್ಗಲು ರೋಮಾಂಚನ ವಾದಂತೆ ಹುಟ್ಟಿರುರ ಚಿಗುರು ಮತ್ತು ಕಿರುಗೊಂಬೆಗಳ ಮೊಳಕೆಗಳೂ ಆತನ ಶರೀರಸ್ಪರ್ಶದಿಂದ ಕಾಮರಸವು ಜಿನುಗುವಂತೆ ಸ್ರವಿಸುವ ಮರದ ಹಾಲಿನ ಸೋನೆಗಳೂ ಇವುಗಳಿಂದ ಆ ಆಶ್ರಮದ ನಂದನವನಗಳು ಜನಗಳು ಮನ್ಮಥನಿಗೆ ಸೇವೆಗೆಯ್ಯುವ ಹಾಗೆ ಮಾಡಿದುವು. ೧೪. ನಾನು ವಿರಹಿಗಳ ಶತ್ರುವಾಗಿದ್ದೇನೆ. ಅವರನ್ನು ತುಳಿದಲ್ಲದೆ ನನ್ನ ಕೋಪವು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಗಡಿದು ಕೂಗುತ್ತಿದ್ದಾನೆ. ಇಲ್ಲಿಗೆ ವಿರಹಿಗಳು ಪ್ರವೇಶಿಸಲು ಅವಕಾಶಕೊಡಬೇಡಿ ಎಂದು ಒಂದೇ ಸಮನಾಗಿ ಬಲಾತ್ಕಾರದಿಂದ ಕೂಗಿ ಹೇಳಿ ಹೆದರಿಸುವಂತೆ ಮಾವಿನ ಮೃದುವಾದ ಚಿಗುರುಗಳನ್ನು ತೃಪ್ತಿಯಾಗುವಷ್ಟು ತಿಂದು ಕೊಬ್ಬಿ ಬೆಳೆದಿರುವ ಕೋಗಿಲೆಗಳ ಕೊರಳನಾದವು ಆ ತೋಟಗಳಲ್ಲಿ ಪ್ರಕಾಶಿಸುತ್ತದೆ. ೧೪. ಮುತ್ತಿಕೊಳ್ಳುತ್ತಿರುವ ಸೊಕ್ಕಿದ ದುಂಬಿಗಳಿಂದ ಮಾಸಿದವನಾಗಿಯೂ ತಾವರೆಯ ಪರಾಗಗಳಿಂದ ಮಾಸಲುಗೆಂಪುಬಣ್ಣದವನಾಗಿಯೂ ತಲೆದೋರಿದ ಮಲಯಮಾರುತನು ಬೀಸಿದುದರಿಂದ ಅಳ್ಳಾಡುವ ಮಾವಿನಮರದ ಚಿಗುರುಗಳ ಅಲುಗಾಟವು ಆ ವನಲಕ್ಷ್ಮಿಯು ಉಟ್ಟ ರೇಷ್ಮೆಯ ಸೀರೆಯ ಸೆರಗಿನ ಅಲುಗಾಟದಂತ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy