SearchBrowseAboutContactDonate
Page Preview
Page 132
Loading...
Download File
Download File
Page Text
________________ ದ್ವಿತೀಯಾಶ್ವಾಸಂ / ೧೨೭ ದೆಯ್ಯಬಲಂ ಸೊಗಸಿಕೆ ಮುಂ " ಗೆಯ್ಯ ಬಲಂ ಬಾಳಕಾಲದೊಳ್ ತೊಡರ್ದ ಪೊಡ | ರ್ದಯ್ಯರ ಬಾಲಕ್ರಿಯೆಯುಂ ಮುಯ್ದಂ ನೋಡಿಸಿತು ತಾಯುಮಂ ತಂದೆಯುಮಂ || ೧೧ ವಗಿರಿ ಅಂತಾ ಕೂಸುಗಲ್ ನಿಜ ಜನನೀಜನಕರ ಮನಮನಿಲ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯ ಬಳೆಯೆಚಂ || ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ || ಗಿಲೆ ನನೆದೋಟಿ ನುಣೆಸೆವ ಮಾಮರನೊರ್ಮೊದಲಲ್ಲದುಣ್ಣುವು ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೂ ಬಸಂತಮಾಸದೊಳ್ || ೧೨ ವ|| ಆಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ಳಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದಳಕೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳುಮಾತನ ಬರವಿಂಗೆ ನಟಿಯ ಸೊಗಯಿಸಿ ಕೆಯ್ಯ್ದ ನಲ್ಗಳಂತೆ ನನೆಯ ಜೊತೆಗಾರರೊಡನೆ ಸೊಗಸಾಗಿ ಕಂಡನು. ೧೧. ದೈವಬಲವೂ ಸೊಗಸಿಕೆಯೂ ಮುಂದಿನ ಕಾಲದಲ್ಲಿ ಅವರಿಗುಂಟಾಗಬಹುದಾದ ಸಾಮರ್ಥ್ಯವೂ ಬಾಲಕಾಲದಲ್ಲಿಯೇ ಸೂಚಿತವಾಗಿ ಪ್ರಕಾಶಿತವಾಗಿರುವ ಬಾಲಕ್ರೀಡೆಯು ತಾಯಿಯನ್ನೂ ತಂದೆಯನ್ನೂ ತಮ್ಮ ಭುಜವನ್ನು ತಾವೇ ನೋಡಿಕೊಳ್ಳುವ ಹಾಗೆ ಮಾಡಿತು (ಅಂದರೆ ತಾವೇ ಅದೃಷ್ಟಶಾಲಿಗಳೆಂದು ತಮ್ಮ ಭುಜವನ್ನು ತಾವೇ ನೋಡಿ ಸಂತೋಷಪಡುವ ಹಾಗೆ ಮಾಡಿತು). ವ|ಹಾಗೆ ಆ ಮಕ್ಕಳು ತಮ್ಮ ತಾಯಿತಂದೆಯರ ಮನಸ್ಸನ್ನು ಸೂರೆಗೊಳ್ಳುವಂತೆಯೂ ಶತ್ರುಜನರ ಮನಸ್ಸನ್ನು (ಪ್ರಾಣಾಪಹರಣ ಮಾಡುವಂತೆ) ಆಕ್ರಮಿಸುತ್ತಿರುವಂತೆಯೂ ಬಳೆದರು. ೧೨. ಅರಳಿದ ಅದಿರ್ಮುತ್ತೆಯ ಹೂವು, ಹೊಸದಾಗಿ ಬಿಟ್ಟಿರುವ ಮಲ್ಲಿಗೆಯ ಹೂವು, ಸುವಾಸನೆಯನ್ನು ಒತ್ತಿ ಹೊರಡಿಸುತ್ತಿರುವ ದಕ್ಷಿಣದ ಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿ, ಕೊರಳ ಶಬ್ದದಿಂದ ಕುಕಿಲ್ ಎಂಬ ಧ್ವನಿಯನ್ನು ಹೊರಡಿಸುತ್ತಿರುವ ಕೋಗಿಲೆ, ಹೂವಿನಿಂದ ಕೂಡಿ ನಯವಾಗಿರುವ ಮಾವಿನ ಮರ, ಒಂದೇ ಸಲವಲ್ಲದೆ ಬಾರಿಬಾರಿಗೂ ಹೆಚ್ಚುತ್ತಿರುವ ಉಯ್ಯಾಲೆಯ ಹೊಸನಾದ ಇವು ವಸಂತಋತುವಿನ ಪ್ರವೇಶದಲ್ಲಿ ಏನು ಸೊಗಸಾಗಿ ಕಂಡವೋ! ವೆ! ಆಗ ಆ ವಸಂತರಾಜನ ಬರವಿಗಾಗಿ ಬಾವುಟಗಳನ್ನು ಕಟ್ಟಿದಂತೆ ಕೋಮಲವಾಗಿ ಬೆಳೆದು ಅಲುಗಾಡುವ ಅಶೋಕವೃಕ್ಷಗಳೂ, ಆತನ ಬರವಿಗಾಗಿ ತೋರಣ ಕಟ್ಟಿದಂತೆ ಹಣ್ಣು ಕಾಯಿಗಳನ್ನು ಬಿಟ್ಟಿರುವ ಮಾವಿನ ಮರಗಳನ್ನು ಏರಿ ಅಡ್ಡಲಾಗಿ ಎಳೆಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ಕುಡಿಯನ್ನು ಚಾಚುವ ಮೊಲ್ಲೆಯ ಬಳ್ಳಿಗಳೂ ಆತನ ಬರುವಿಕೆಗೆ ಸಂಪೂರ್ಣ ಸುಂದರವಾಗಿ ಕಾಣುವುದಕ್ಕಾಗಿ ಅಲಂಕಾರವನ್ನು ಮಾಡಿಕೊಳ್ಳುವ ಪ್ರೇಯಸಿಯಂತೆ ಹೂವಿನ ದಪ್ಪ ಮೊಗ್ಗಿನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy