SearchBrowseAboutContactDonate
Page Preview
Page 110
Loading...
Download File
Download File
Page Text
________________ ಪ್ರಥಮಾಶ್ವಾಸಂ | ೧೦೫ ಮ | ಬೆಸಕೆಯ್ದತ್ತು ಸಮುದ್ರಮುದ್ರಿತಧರಾಚಕ್ರಂ ಪ್ರತಾಪಕ್ಕಗು ರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊದಟ್ಟಾಜ್ಞೆಗಂ | ಪಸರ್ಗ೦ ಮುನ್ನಮ ರೂಪುವೋದುದು ವಿಯಚ್ಚಕ್ರಂ ಸಮಂತಂಬಿನಂ ಜಸಮಾ ಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ || ೧೧೦ ವಗ ಅಂತು ಪಾಂಡುರಾಜನಧಿಕತೇಜನುಮವನತವೈರಿಭೂಭತ್ಸಮಾಜನುಮಾಗಿ ನಗುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲಚೆಯಿಂ ಪೋಗಿ ಚಂ | ಇನಿಯಳವತ್ತಿಯಿಂದ ಮೃಗಿ ಮಾಡಿ ಮನೋಜಸುಖಕ್ಕೆ ಸೋಲಲಂ ಏನೆ ನೆರೆಯ ದಿವ್ಯಮುನಿಯುಂ ಮೃಗವಾಗಿ ಮರಲ್ಲು ಕೂಡ ಮ | ಲನೆ ಮೃಗವೆಂದು ಸಾರ್ದು ನನಂ ನಡೆ ನೋಡಿ ನರೇಂದ್ರನೆಚ್ಚು ಭೋಂ ಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ || ೧೧೧ ವ|| ಆಗಳ್ ಪ್ರಳಯದುಳಮುಳ್ಳುವಂತೆ ತನ್ನೆಚ್ಚಂಬು ಮುನಿಕುಮಾರನ ಕನ್ನೊಳಮೆರ್ದೆಯೊಳಮುಕ್ಕೆ ಪೇಟೆಮೆನ್ನನಾವನೆಚ್ಚನೆಂಬ ಮುನಿಯ ಮುನಿದ ಸರಮಂ ಕೇಳು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ ೧೧೦. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವು ಅವನ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿತು. ಅವನ ಶೌರ್ಯಕ್ಕೆ ಹೆದರಿ ದಿಸ್ಮಂಡಲದಲ್ಲಿದ್ದ ರಾಜರೆಲ್ಲ ಗೋಳುಗುಟ್ಟುತ್ತಿದ್ದರು. ಸಂಪೂರ್ಣವಾಗಿ ಎಲ್ಲ ಕಡೆಗೂ ವ್ಯಾಪಿಸಿದ ಅವನ ಆಜ್ಞೆಗೂ ಯಶಸ್ಸಿಗೂ ಆಕಾಶಮಂಡಲವು ಗೂಡಾಗಿ ಪರಿಣಮಿಸಿತು. (ಆವಾಸಸ್ಥಾನವಾಯಿತು) ಎನ್ನುವಾಗ ಅವನ ಧವಳಕೀರ್ತಿ ಸರ್ವಲೋಕವ್ಯಾಪ್ತಿಯಾಯಿತು. ರಾಜರುಗಳಲ್ಲಿ ಪಾಂಡುರಾಜನಿಗೆ ಸಮನಾಗುವವರಾರಿದ್ದಾರೆ? ವ|| ಹಾಗೆ ಆ ಪಾಂಡುರಾಜನು ಅಧಿಕತೇಜಸ್ಸುಳ್ಳವನೂ ನಮಸ್ಕರಿಸಲ್ಪಟ್ಟ ಶತ್ರುರಾಜಸಮೂಹವನ್ನುಳ್ಳವನೂ ಆಗಿ ರಾಜ್ಯಭಾರಮಾಡುತ್ತಿದ್ದು ಒಂದು ದಿವಸ ತೋಹಿನ ಬೇಂಟೆಯೆಂಬುದನ್ನು ಆಡಲು ಆಸಕ್ತನಾಗಿ ಕಾಡಿಗೆ ಹೋದನು. ೧೧೧. ಅಲ್ಲಿ ಕಿಂದಮನೆಂಬ ಋಷಿಯೊಬ್ಬನು ತನ್ನ ಪ್ರಿಯಳನ್ನು ಹೆಣ್ಣು ಜಿಂಕೆಯನ್ನಾಗಿ ಮಾಡಿ ಕಾಮವಶನಾಗಿ ಸಂತೋಷದಿಂದ ಅವಳೊಡನೆ ಕೂಡಿ ಋಷಿಶ್ರೇಷ್ಠನಾದ ತಾನೂ ಗಂಡುಜಿಂಕೆಯ ಆಕಾರವನ್ನು ತಾಳಿ ಉತ್ಸಾಹದಿಂದ ವಿಹರಿಸುತ್ತಿದ್ದನು. ಪಾಂಡುರಾಜನು ಅದು ಜಿಂಕೆಯೆಂದು ಮೆಲ್ಲಗೆ ಅದರ ಹತ್ತಿರ ಬಂದು ಅದರ ಮರ್ಮಸ್ಥಾನವನ್ನು ನೋಡಿ ಗುರಿಯಿಟ್ಟು ಆ ಮೃಗರೂಪದಲ್ಲಿದ್ದ ಆ ಋಷಿಯನ್ನು ತಟ್ಟನೆ ಬಾಣದಿಂದ ಹೊಡೆದು ತನಗೆ ಒಂದು ಮಾರಿಯನ್ನು ತಂದುಕೊಂಡನು. ವ|| ಆಗ ತಾನು ಹೊಡೆದ ಬಾಣವು ಋಷಿಪುತ್ರನ ಕಣ್ಣಿನಲ್ಲಿಯೂ ಎದೆಯಲ್ಲಿಯೂ ಪ್ರಳಯಕಾಲದ ಉಲ್ಕಾಪಾತದಂತೆ ಹೊಳೆಯುತ್ತಿರಲು “ನನ್ನನ್ನು ಯಾರು ಹೊಡೆದನು ಹೇಳಿ' ಎಂಬ ಋಷಿಯ ಕೋಪಧ್ವನಿಯನ್ನು ಕೇಳಿ ಬಿಲ್ಲು ಬಾಣಗಳನ್ನೆಸೆದು ತನ್ನ ಮುಂದೆ ನಿಂತಿದ್ದ ರಾಜನನ್ನು ಮುನಿ ನೋಡಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy