SearchBrowseAboutContactDonate
Page Preview
Page 109
Loading...
Download File
Download File
Page Text
________________ ೧೦೪ / ಪಂಪಭಾರತಂ ತುಲುಗೆ ನೀಳ ಪುರ್ವು ನಿಡುಗಣ್ ಪೊಯಲ್ಲದೆ ಬಟ್ಟಿತಪ್ಪ ಬಾ ಯೇ ತನು ರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತಧ್ವಸಿಮ್ ಕರಂ | ನೆಲದ ನಿತಂಬವಿಂಬುವಡೆದೊಳ್ಕೊಡೆ ನಕ್ಕರವದ್ದಿ ತಾನೆ ಪೋ ಕಿರುದೊಡೆಯೆಂದು ಧಾತ್ರಿ ಪೊಗಟ್ಟುಂ ಪೊಗಟ್ಟನ್ನರ ಕುಂತಿ ಮಾದಿಗಳ ೧೦೮ ವ|| ಅಂತಾಕೆಗಳಿರ್ವರುಮರಡುಂ ಕೆಲದೊಳಿರೆ ಕಲ್ಪಲತೆಗಳೆರಡು ನಡುವಣ ಕಲ್ಪವೃಕ್ಷ ಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸ ಈ || ಮಾರುವವೆಂಬ ಮಾಂಡಳಿಕರೀಯಧರೆಂಬದಟ‌ ವಯಲ್ಲಿ ಮ ಯೋಲುವವೆಂಬ ಪೂಣಿಗರಡಂಗಿ ಕುನುಂಗಿ ಸಿಡಿಲು ಜೊಲು ಕಾ | ಕ್ಷಾ ನಭಕ್ಕೆ ಪಾಡೆದುದು ಗಂಡರ ನೆತ್ತಿಯೊಳೊತ್ತಿ ಬಾಳನಿ ನ್ಯೂಲುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ || ೧೦೯ ಮಧ್ಯೆ ಮಧ್ಯೆ ಓಡಾಡುವ ಸುಮಂಗಲಿಯರು, ಮತ್ತು ಸುತ್ತುವರಿದಿದ್ದ ವೇದಪಂಡಿತರ ಸಮೂಹ ಇವುಗಳಿಂದ ಪಾಂಡು ಮತ್ತು ಕುಂತಿ ಮಾದ್ರಿಯರಲ್ಲಿ ಆದ ವಿವಾಹ ಮಂಗಳಕಾರ್ಯವು ಆಶ್ಚರ್ಯಕರವಾಯಿತು. ೧೦೮. ಕುಂತಿ ಮಾದ್ರಿಯರ ದಟ್ಟವಾದ ಕೂದಲಿನಿಂದ ಕೂಡಿದ ರೆಪ್ಪೆ, ಉದ್ದವಾಗಿರುವ ಹುಬ್ಬು, ದೀರ್ಘವಾದ ಕಣ್ಣು, ಹಗುರವಾಗಿಯೂ ದುಂಡಾಗಿಯೂ ಇರುವ ತುಟಿ, ಸಣ್ಣ ರೇಖೆಗಳಿಂದ ಕೂಡಿದ ಕೊರಳು, ಮುಂದಕ್ಕೆ ಚಾಚಿಕೊಂಡಿರುವ ದಪ್ಪವಾದ ಮೊಲೆ, ತೆಳುವಾದ ಹೊಟ್ಟೆ, ವಿಶೇಷವಾಗಿ ತುಂಬಿಕೊಂಡಿರುವ ಪೃಷ್ಠಭಾಗ, ಹೊಂದಿಕೊಂಡಿರುವ ಒಳತೊಡೆ, ಚಿಕ್ಕತೊಡೆ (ನೆರ್ಕೊರೆಪಟ್ಟೆ?) ಇವುಗಳು ಸೊಗಸಾಗಿವೆ ಎಂದು ಲೋಕವೆಲ್ಲ (ಅವರನ್ನು) ಹೊಗಳಿದವು. ವಾಸ್ತವವಾಗಿ ಕುಂತಿ ಮಾದ್ರಿಗಳು ಹೊಗಳಿಸಿಕೊಳ್ಳುವಂಥವರೇ ಸರಿ. ವll ಹಾಗೆ ಅವರಿಬ್ಬರೂ ಎರಡು ಪಕ್ಕಗಳಲ್ಲಿರಲು ಎರಡು ಕಲ್ಪಲತೆಗಳ ಮಧ್ಯೆಯಿರುವ ಕಲ್ಪವೃಕ್ಷದಂತಿದ್ದ ಪಾಂಡುರಾಜನಿಗೆ ಧೃತರಾಷ್ಟ್ರನು ಅಂಗಹೀನನೆಂಬ ಕಾರಣದಿಂದ (ಕುರುಡನಾಗಿದ್ದುದರಿಂದ) ವಿವಾಹಮಂಗಳದೊಡನೆ ಪಟ್ಟಾಭಿಷೇಕಮಹೋತ್ಸವವೂ ನಡೆಯಿತು. ೧೦೯. ಪಾಂಡುರಾಜನ ಆಜ್ಞೆಯನ್ನು ಮೀರಿ ನಡೆಯುತ್ತೇವೆ' ಎಂಬ ಸಾಮಂತರಾಜರೂ, ಕಪ್ಪಕಾಣಿಕೆಗಳನ್ನು ಕೊಡುವುದಿಲ್ಲವೆಂದ ಶೂರರೂ, ಕಾಳೆಗದಲ್ಲಿ ಪ್ರತಿಭಟಿಸಿ ಯುದ್ಧಮಾಡುವೆವು ಎಂದು ಪ್ರತಿಜ್ಞೆಮಾಡಿದವರೂ ಕುಗ್ಗಿ ಸಿಡಿದು ಕೆಳಕ್ಕೆ ಬಿದ್ದು ಕೋಪವಿರಹಿತರಾಗಲು ಪಾಂಡುರಾಜನ ತೇಜಸ್ಸೆಂಬ ಜಾಜ್ವಲ್ಯಮಾನವಾದ ಬೆಂಕಿಯು ಆಕಾಶಕ್ಕೆ ಚಿಮ್ಮಿತು. ಪಾಂಡುರಾಜನ ಕತ್ತಿಯು ಇನ್ನೂ ಪರಾಕ್ರಮಿಗಳ ಹಣೆಯಲ್ಲಿ ನಾಟಲ್ಪಡುತ್ತಿವೆ ಎಂದಾಗ ಅವನ ಮಹತ್ವ ಎಷ್ಟು ಹಿರಿದೋ! (ಎಂದರೆ ಅವನ ಪ್ರತಾಪಾಗ್ನಿ ಯಾವ ತಡೆಯೂ ಇಲ್ಲದೆ ಅಭಿವೃದ್ಧಿಯಾಗಿ ಆಕಾಶಕ್ಕೆ ಚಿಮ್ಮುತ್ತಿರುವುದರಿಂದ ಅವನ ಮೇಲೆಯು ಅತ್ಯತಿಶಯವಾದುದು ಎಂದು ಭಾವ).
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy