SearchBrowseAboutContactDonate
Page Preview
Page 93
Loading...
Download File
Download File
Page Text
________________ ೮೮) ಪಂಪಭಾರತಂ ಮ|| ಮೃಗಯಾವ್ಯಾಜದಿನೊರ್ಮೆ ಶಂತನು ತೋರ್ಪಂ ಪಳಂಚಲೆ ತ: ಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಚೋಲ್ ಸೋಲು ಕಂಡೂಲ್ಲು ನ | ಲೆಗೆ ದಿಂಬಿಡಿವಂತವೋಲ್ ಪಿಡಿದು ನೀನ್ ಬಾ ಪೋಪಮೆಂದಂಗೆ ಮ ಗೆ ತಕ್ಕಕೆ ನಾ ಬೇಡುವೊಡೆ ನೀವಮ್ಮಯ್ಯನಂ ಬೇಡಿರೇ ೭೦ ವ|| ಎಂಬುದುಂ ಶಂತನು ಪೋಲಲ್ಲಿ ಮಗುಟ್ಟು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡ ಪರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಏರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡವೆಮ್ಮ ಮಗಳ ಪುಟ್ಟಿದಾತಂ ರಾಜ್ಯಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ರೊಡೆ ಕುಡುವೆಮೆನೆ ತದ್ವತ್ತಾಂತಮಂ ಮಂತ್ರಿಗಳಿಂ ಶಂತನು ಕೇಳುಮll ಕ್ರಮಮಂ ವಿಕ್ರಮದಿಂದ ತಾಳುವ ಮಗಂ ಗಾಂಗೇಯನಿರ್ದಂತ ನೋ | ಡ ಮರುಳ ಶಂತನು ತನದೊಂದು ಸವಿಗಂ ಸೋಲಕ್ರಮಿತಂ ನಿಜ 1 . ಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋ ಕಮನಾವರ್ತಿಸ ಬಡನ್ನ ಕುಲಮುಂ ತಕೂರ್ಮಯುಂ ಮಾಸದೇ | ೭೧ ವ್ಯಾಸಮಹರ್ಷಿಯು ಹುಟ್ಟಲಾಗಿ ಅವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಸತ್ಯವತಿಗೆ ಪುನಃ ಕನ್ಯಾಭಾವವನ್ನು ದಯಮಾಡಿ ಕೊಟ್ಟು ಪರಾಶರಋಷಿಯು ಹೊರಟು ಹೋದನು. ಈ ಕಡೆ ೭೦. ಒಂದು ದಿನ ಬೇಟೆಯ ನೆಪದಿಂದ ಸುತ್ತಾಡಿ ಬರುತ್ತಿದ್ದ ಶಂತನುವು ಜಿಂಕೆಯ ಮರಿಯ ಕಣ್ಣಿನಂತೆ ಕಣ್ಣುಳ್ಳ ಯೋಜನಗಂಧಿಯ ವಾಸನೆಯು ಅವನನ್ನು ಮುಟ್ಟಲಾಗಿ (ಅದರಿಂದ ಆಕರ್ಷಿತನಾಗಿ) ದುಂಬಿಯ ಹಾಗೆ ಸೋತು ಹೋಗಿ ಅವಳನ್ನು ಪ್ರೀತಿಸಿದನು. ತನ್ನ ಪ್ರೀತಿಗೆ ಸಾಕ್ಷಿಯಾಗಿ ದಿವ್ಯವನ್ನು ಹಿಡಿಯುವ ಹಾಗೆ ಅವಳ ಕೈಹಿಡಿದು 'ನೀನು ಬಾ ಹೋಗೋಣ' ಎನ್ನಲು ಆ ಕನ್ಯಯು ನಾಚಿಕೊಂಡು ಮೆಲ್ಲಗೆ ನೀವು ನನ್ನನ್ನು ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ ಎಂದಳು. ವಗ ಶಂತನು ಪಟ್ಟಣಕ್ಕೆ ಹಿಂದಿರುಗಿ ಬಂದು ಅವಳ ತಂದೆಯಾದ ದಾಶರಾಜನಲ್ಲಿಗೆ ಕನೈಯನ್ನು ಬೇಡುವುದಕ್ಕಾಗಿ ಹೆಗ್ಗಡೆಗಳನ್ನು ಕಳುಹಿಸಿದನು. ದಾಶರಾಜನು ಭೀಷ್ಕನು ರಾಜನ ಹಿರಿಯಮಗನೂ ಕ್ರಮಪ್ರಾಪ್ತವಾದ ಹಕ್ಕುದಾರಿಕೆಗೆ ಅರ್ಹನೂ ಆಗಿರುವಾಗ ನಮ್ಮ ಮಗಳನ್ನು (ಶಂತನುವಿಗೆ) ಮದುವೆ ಮಾಡಿಕೊಡು ವುದಿಲ್ಲ. ನನ್ನ ಮಗಳಿಗೆ ಹುಟ್ಟಿದವನು ರಾಜ್ಯಕ್ಕೊಡೆಯನೂ ಹಿರಿಯ ಮಗನೂ ರಾಜ್ಯಕ್ಕೆ ಕ್ರಮವಾದ ಅರ್ಹನೂ ಆಗುವುದಾದರೆ ಕೊಡುವೆವು ಎಂದನು. ಆ ವೃತ್ತಾಂತ ವನ್ನು ಶಂತನುವು ಮಂತ್ರಿಗಳಿಂದ ಕೇಳಿ ೭೧. ಪರಾಕ್ರಮದಿಂದ ಕ್ರಮಪ್ರಾಪ್ತವಾದುದನ್ನು ಧರಿಸುವ (ಧರಿಸಲು ಯೋಗ್ಯನಾದ) ಮಗನಾದ ಭೀಷ್ಮನಿರುವಾಗ, ನೋಡಯ್ಯ, ಅವಿವೇಕಿಯಾದ ಶಂತನುವು ತನ್ನ ಒಂದು ಭೋಗಕ್ಕೂ ಮೋಹಪರವಶತೆಗೂ ತನ್ನ ಕ್ರಮಪ್ರಾಪ್ತವಾದ ರಾಜ್ಯವನ್ನು ತನ್ನ ಮೋಹದಾಕೆಯ ಮಗನಿಗೆ ಕೊಟ್ಟನು ಎಂಬ ಒಂದು ಅಪಯಶಸ್ಸು ಲೋಕವನ್ನು ಆವರ್ತಿಸುವ ಹಾಗೆ ಬಾಳಿದರೆ ನನ್ನ ಕುಲವೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy