SearchBrowseAboutContactDonate
Page Preview
Page 90
Loading...
Download File
Download File
Page Text
________________ ಪ್ರಥಮಾಶ್ವಾಸಂ | ೮೫ ಭರತನನೇಕಾಧ್ವರ ಭರ ನಿರತಂ ಜಸಮುಚಿಯ ಕಟಿಯ ಭೂಪರ್ ಪಲರಾ | ದರಿಸಿದ ಧರಣೀಭರಮಂ ಧರಿಯಿಸಿದಂ ಪ್ರತಿಮನೆಂಬನಪ್ರತಿಮಬಲಂ || ಅಂತಾ ಪ್ರತಿಮಂಗೆ ಸುತರ್ ಶಂತನು ಬಾಹಿಕ ವಿನೂತ ದೇವಾಪಿಗಳೋ | ರಂತ ಧರೆ ಪೊಗಳ ನಗರ ನಂತ ಬಳ‌ ಪರಬಳ ಪ್ರಭೇದನ ಶೌರ್ಯರ್ || ೬೫ ವ|| ಅವರೊಳಗೆ ದೇವಾಪಿ ನವಯವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದ , ಪ್ರತಿಮನುಂ ಪ್ರತಾಪಪ್ರಸರಪ್ರಕಟಪಟುವಾಗಿ ಪಲವುಕಾಲಮರಸುಗಯು ಸಂಸಾರಾಸಾರತಗೆ ದೇಸಿ ತಪೋವನಕ್ಕಭಿಮುಖನಾಗಲ್ಬಗೆದು ಕಂತು ಶರ ಭವನನಾ ಪ್ರಿಯ ಕಾಂತಾ ಭೂವಿಭ್ರಮ ಗ್ರಹಾಗ್ರಹವಶದಿಂ | ಭ್ರಾಂತಿಸದುಪಶಾಂತಮನಂ ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ | - ೬೬ ಶಂತನುಗಮಮಳ ಗಂಗಾ ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ | ಭ್ರಾಂತಿಯೋಳಿ ಬಂದು ನಿರ್ಜಿತ ಕಂತುವನಂತು ಹುಟ್ಟಿದ ಗಾಂಗೇಯಂ | ಪ್ರಖ್ಯಾತನಾದನು. ರಾಜರು ಹೀಗೆ ಪ್ರಸಿದ್ದರಾಗಬೇಕು. ೬೪. ಅನೇಕಯಜ್ಞಕಾರ್ಯ ಗಳಲ್ಲಿ ಆಸಕ್ತನಾದ ಭರತನು ಕೀರ್ತಿಶೇಷನಾಗಿ ಸಾಯಲು ಅನೇಕರಾಜರು ಪ್ರೀತಿಸಿದ ಭೂಭೂರವನ್ನು (ರಾಜ್ಯಭಾರವನ್ನು) ಅಪ್ರತಿಮಬಲನಾದ ಪ್ರತಿಮನೆಂಬುವನು ಧರಿಸಿದನು. ೬೫. ಹಾಗೆ ಆ ಪ್ರತಿಮನಿಗೆ ಕೊನೆಯಿಲ್ಲದ ಬಲವುಳ್ಳವರೂ ಶತ್ರುಸೈನ್ಯವನ್ನು ವಿಶೇಷವಾಗಿ ಭೇದಿಸುವ ಶೌರ್ಯವುಳ್ಳವರೂ ಆದ ಬಾಸ್ತಿಕ, ವಿನೂತ, ದೇವಾಪಿ ಗಳೆಂಬ ಮಕ್ಕಳು ಲೋಕವು ಏಕಪ್ರಕಾರವಾಗಿ ಹೊಗಳುವಂತೆ ಪ್ರಸಿದ್ಧರಾದರು. ವ|| ಅವರಲ್ಲಿ ದೇವಾಪಿಯು ಹೊಸದಾದ ಯವ್ವನಪ್ರಾರಂಭದಲ್ಲಿಯೇ ತಪಸ್ಸು ಮಾಡುವುದ ರಲ್ಲಿ ಆಸಕ್ತನಾದನು. ಪ್ರತಿಮನೂ ಕೂಡ ಪ್ರತಾಪವನ್ನು ಪ್ರಕಟಿಸುವುದರಲ್ಲಿ ಸಮರ್ಥ ನಾಗಿ ಅನೇಕಕಾಲ ರಾಜ್ಯಭಾರಮಾಡಿ ಸಂಸಾರದ ಅಸಾರತೆಗೆ ಅಸಹ್ಯಪಟ್ಟು ತಪೋ ವನಕ್ಕಭಿಮುಖನಾದನು ೬೬. ಮನ್ಮಥನ ಬಾಣಗಳಿಗೆ ವಾಸಸ್ಥಾನವಾದ ಬತ್ತಳಿಕೆಯ ಹಾಗಿದ್ದ ಆ ಪ್ರತಿಮನು ತನ್ನ ಪ್ರೀತಿಪಾತ್ರರಾದ ಸ್ತ್ರೀಯರ ಹುಬ್ಬಿನ ವಿಲಾಸವೆಂಬ ಗ್ರಹಕ್ಕೆ ವಶನಾಗಿ ಭ್ರಮಗೊಳ್ಳದೆ ಸಮಾಧಾನಚಿತ್ತನಾಗಿ ಸಮಸ್ತರಾಜ್ಯ ಸಂಪತ್ತನ್ನೂ ಶಂತನುವಿಗೆ ಕೊಟ್ಟನು. ೬೭. ಶಂತನುವಿಗೂ ಪರಿಶುದ್ಧಳಾದ ಗಂಗಾದೇವಿಗೂ ಎಂಟನೆಯ ವಸುವು ವಸಿಷ್ಠನ ಶಾಪದಿಂದ ರೂಪಿನಲ್ಲಿ ಮನ್ಮಥನನ್ನು ಸೋಲಿಸುವ ಸೌಂದರ್ಯದಿಂದ ಕೂಡಿ ಭೀಷ್ಮನಾಗಿ ಹುಟ್ಟಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy