SearchBrowseAboutContactDonate
Page Preview
Page 88
Loading...
Download File
Download File
Page Text
________________ ಪ್ರಥಮಾಶ್ವಾಸಂ | ೮೩ ದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗವಾದ ರಾಗದಿಂ ದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿಕೇತನಂಗಳಿಂ ಧನದ ಭವನಮೆನಿಪ ಸಿರಿಯ ಬಚರಾಪಣಂಗಳಿಂ ಪೊದಟ್ಟ ಕಾವಣಂಗಳಿಂ ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಗ ಹೃದಯಹಾರಿಯಿಂ | ಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ ಸುರತಸುಖದ ಬಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾ ವಿನೋದನೀಡದಿಂ ಕನಕಶೈಲಮೆನಿಸಿ ನೆಗಟ್ಟಿ ಭೂಮಿಪಾಲಭವನದಿಂ ಸಮಸ್ತ ವಸ್ತುಭುವನದಿಂ 11೫೮|| ವ|| ಅಂತು ಮೂಜುಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳಿದಂತೆ ಸಮಸ್ತವಸ್ತುವಿಸ್ತಾರಹಾರವಾಗಿರ್ದ ಹಸ್ತಿನಪುರವೆ ನಿಜವಶಾವಳಂಬವಾಗ ನಗು ಭರತಕುಲತಿಲಕರ ವಂಶಾವತಾರಮೆಂತಾದುದೆಂದೂಡ* ಕಂ || ಜಳರುಹನಾಭನ ನಾಭಿಯ ಜಳ ಬುದ್ಗುದದೊಳಗೆ ಸುರಭಿ ಪರಿಮಳ ಮಿಳಿತೋ | ಝುಳಿತಾಳಿ ಜಲಜಮಾಯ್ತಾ ಜಳಜದೊಳೊಗದಂ ಹಿರಣ್ಯಗರ್ಭ ಬ್ರಹ್ಮ | ೫೯ ಕಮಲೋದ್ದವನಮಳಿನ ಹೃ ತಮಲದೊಳೊಗೆದರ್ ಸುರೇಂದ್ರ ಧಾರಕರಾವಾ | ಗಮಳರ್ ನೆಗಟ್ಟಿರ್ದರ್ ಪುಲ ಹ ಮರೀಚತ್ಯಂಗಿರಃ ಪುಳಸ್ಯ ಕ್ರತುಗಳ್ | ಕುಲಪರ್ವತವೆನಿಸಿಕೊಳ್ಳುವ ದೇವಸ್ಥಾನಗಳ ಐಶ್ವರ್ಯದಿಂದಲೂ ಸ್ವರ್ಗವನ್ನೇ ಹಾಸ್ಯಮಾಡುವ ಹಾಗೆ ಚಲಿಸುತ್ತಿರುವ ಧ್ವಜಗಳಿಂದಲೂ ದಾನಮಾಡುವವರ ಮನೆಗಳಿಂದಲೂ, ಕುಬೇರ ಭವನಗಳೆನಿಸಿಕೊಂಡಿರುವ ಸಂಪದ್ಯುಕ್ತವಾದ ವೈಶ್ಯರ ಅಂಗಡಿಗಳಿಂದಲೂ ವ್ಯಾಪಿಸಿಕೊಂಡಿರುವ ಚಪ್ಪರಗಳಿಂದಲೂ ವಿಟ ಜನರು ಸಿಕ್ಕಿಕೊಳ್ಳುವ ಸಂಕೋಲೆಯಂತೆಯೂ ಪಂಡಿತರ ಹೃದಯವನ್ನು ಸೂರೆಗೊಳ್ಳುವಂತೆಯೂ ಇರುವ ಸೂಳೆಗೇರಿಯಿಂದಲೂ ಚಿನ್ನದ ಗೋಪುರ ದೊಳಗಿರುವ ಎರಡು ಕಡೆಯ ನೃತ್ಯಶಾಲೆಗಳಿಂದಲೂ ವಿಲಾಸವತಿಯರಾದ ಸ್ತ್ರೀಯರ ಸಮೂಹದಿಂದಲೂ ಸಂಭೋಗಸುಗಾತಿಶಯದಿಂದ ಕೂಡಿದ ಲತಾಗೃಹಗಳಿಂದಲೂ ಆರಾಮಗೃಹಗಳಿಂದಲೂ ಮೇರುಪರ್ವತವೆನಿಸಿಕೊಂಡು ಪ್ರಸಿದ್ದಿಯಾಗಿರುವ ಅರಮನೆಗಳಿಂದಲೂ ಭಂಡಾರಗಳಿಂದಲೂ ವರ ಮೂರುಲೋಕದ ಸೌಂದರ್ಯವನ್ನು ಬ್ರಹ್ಮನು ಒಂದು ಕಡೆ ರಾಶಿ ಮಾಡಿದ ಹಾಗೆ ಸಮಸ್ತ ವಸ್ತು ವಿಸ್ತಾರದಿಂದ ಮನೋಹರವಾಗಿದ್ದ ಹಸ್ತಿನಾಪಟ್ಟಣದಲ್ಲಿ ಭರತವಂಶಶ್ರೇಷ್ಠರು ರಾಜ್ಯಭಾರ ಮಾಡುತ್ತಿದ್ದರು. ಅವರ ಹುಟ್ಟು ಹೇಗಾಯಿತೆಂದರೆ ೫೯. ವಿಷ್ಣುವಿನ ಹೊಕ್ಕುಳ ನೀರಿನ ಗುಳ್ಳೆಯಲ್ಲಿ ಸುಗಂಧಯುಕ್ತವೂ ದುಂಬಿಗಳಿಂದ ಆವೃತವೂ ಆದ ಕಮಲವು ಹುಟ್ಟಿತು. ಆ ಕಮಲದಲ್ಲಿ ಹಿರಣ್ಯಗರ್ಭ ಬ್ರಹ್ಮನು ಹುಟ್ಟಿದನು. ೬೦. ಬ್ರಹ್ಮನ ಪರಿಶುದ್ಧವಾದ ಹೃದಯಕಮಲದಲ್ಲಿ ಶ್ರೇಷ್ಠವಾದ ನೀರಿನ ಕಮಂಡಲವನ್ನು ಧರಿಸಿದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy