SearchBrowseAboutContactDonate
Page Preview
Page 79
Loading...
Download File
Download File
Page Text
________________ ೭೪ | ಪಂಪಭಾರತ ಬಲ್ವರಿಕೆಯೊಳರಿನೃಪರ ಪ ಡಡ ತಳಿದು ರಣದೊಳಾ ವಿಕ್ರಮಮಂ | ಸೋನಮಾವರ್ಜಿಸಿದಂ ನಾಲ್ವತ್ತೆರಡಚಿಕೆಗಾಳೆಗಂಗಳೊಳೀತಂ 11 ೨೫ ಚಂ|| ವನಧಿಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪಂ ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದು | ರ್ವನಲಿದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ ಮನನನಿಗರ್ವದಿಂ ಪಿಡಿಯ ಮೆಯ್ದಲಿ ಬದ್ದೆಗನನ್ನನಾವನೋ | ೨೬ ಮ! ಮುಗಿಲು ಮುಟ್ಟಿದ ಪೆಂಪು ಪಂಪನೊಳಕೊಂಡುದ್ಯೋಗಮುದ್ರೋಗದೊಳ್ ನೆಗಬ್ದಾಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು | ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪನ್ನೆಗಂ ಸಂದನೀ ಜಗದೊಳ್ ಬದ್ದೆಗನನ್ನನಾವನಿಕುಂ ಭೂಕೋಟಿಯಿಂ ಕೋಟಿಯಂ ||೨೭ ಕಂ || ಮೇರುವ ಪೊನ್ ಕಲಾಂಘಿಷ ದಾರವೆ ರಸದೂಳಿವು ಪರುಷವೇದಿಯ ಕಣಿ ಭಂ | ಡಾರದೊಳುಂಟೆನೆ ಕುಡುವ ನಿ ವಾರಿತ ದಾನಕ್ಕೆ ಪೋಲ್ಡರಾರ್ ಬದ್ದೆಗನಂ || ಹೋಲುವವರಿದ್ದಾರೆ? ೨೫. ಈ ಭದ್ರದೇವನು ಬಲವಾದ ಧಾಳಿಯಲ್ಲಿ ಶತ್ರುರಾಜರು ಚದುರಿ ಓಡಿಹೋಗುವಂತೆ ಪ್ರತಿಭಟಿಸಿ ತನ್ನ ಶೌರ್ಯವನ್ನು ಜನಗಳೆಲ್ಲ ಕೊಂಡಾಡುವಂತೆ ಯುದ್ಧಮಾಡಿ ನಲವತ್ತೆರಡು ಸುಪ್ರಸಿದ್ದ ಕಾಳಗಗಳಲ್ಲಿ ತನ್ನ ಪ್ರತಾಪವನ್ನು ಪ್ರಕಟಿಸಿದನು. ೨೬. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲದಲ್ಲಿ ಇವನೊಬ್ಬನೇ ಯಾರಿಗೂ ಸೋಲದ ವೀರ ಎಂಬ ಹಿರಿಮೆಯನ್ನು ಗಳಿಸಿದ್ದಲ್ಲದೆ ತನ್ನನ್ನು ಪ್ರತಿಭಟಿಸಿದವರನ್ನು ಪರಾಕ್ರಮದಿಂದ ಎದುರಿಸಿ ಭಯಂಕರವಾಗಿ ಇರಿದು ಯುದ್ದಮಾಡಿದ ಭೀಮನೆಂಬ ರಾಜನನ್ನು ನೀರಿನಲ್ಲಿ ಮುಳುಗಿಸಿ ಮೊಸಳೆಯನ್ನು ಹಿಡಿವಂತೆ ವಿಶೇಷ ದರ್ಪದಿಂದ ಹಿಡಿದಿರುವಾಗ ಈ ಶೂರನಾದ ಭದ್ರದೇವನಂತಹ (ಶೂರ) ನಾವನಿದ್ದಾನೆ. ೨೭ . (ಈ ಭದ್ರದೇವನ) ಅತ್ಯುನ್ನತವಾದ ಹಿರಿಮೆಯೂ ಹಿರಿಮೆಯಲ್ಲಿ ಕೂಡಿಕೊಂಡ ಕಾರ್ಯಕಲಾಪಗಳಲ್ಲಿ ಹುದುಗಿ ಕೊಂಡಿರುವ ಆಜ್ಞಾಫಲವೂ ಅದರಲ್ಲಿ ಸೇರಿರುವ ಭಯವೂ ಭಯದಿಂದ ಆಶ್ಚರ್ಯ ಗೊಳ್ಳುತ್ತಿರುವ ಶತ್ರುಸಮೂಹವೂ ಅವನ ಕೀರ್ತಿಗೆ ಆಶ್ರಯವಾಗುತ್ತಿರಲು ಆ ಭದ್ರ ದೇವನು ಭೂಮಂಡಲದಲ್ಲಿ ಸುಪ್ರಸಿದ್ದನಾದನು. ಒಂದು ಸಲ ಹುಬ್ಬುಹಾರಿಸುವುದ ರಿಂದ ಕೋಟ್ಯಂತರ ಸೈನ್ಯವನ್ನು ಇಳಿಸಿಬಿಡುವ ಅವನಂಥವರು ಬೇರೆ ಯಾರಿದ್ದಾರೆ? ೨೮. ಆ ಭದ್ರದೇವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವೂ ಕಲ್ಪವೃಕ್ಷದಾರಾಮವೂ ಸಿದ್ದರಸದೂಟೆಯೂ ಸ್ಪರ್ಶಶಿಲೆಯ ಗಣಿಯೂ ಇವೆಯೆಂದರೆ ಅವಿಚ್ಛಿನ್ನವಾದ ದಾನಕ್ಕೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy