SearchBrowseAboutContactDonate
Page Preview
Page 77
Loading...
Download File
Download File
Page Text
________________ ೭೨) ಪಂಪಭಾರತಂ ಆತಂ ನಿಜಭುಜವಿಜಯ ಖ್ಯಾತಿಯನಾಳಾಳನಧಿಕಬಲನವನಿಪತಿ | ವಾತ ಮಣಿಮಕುಟಕಿರಣ ಜ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ ! : ಏನಂ ಪೇಟ್ಟುದೊ ಸಿರಿಯು ದ್ವಾನಿಯನೆಣ್ಣೆಯೊಳೆ ತೀವಿ ದೀರ್ಷಿಕೆಗಳನಂ | ತಾ ನೃಪತಿ ನಿಚ್ಚಲಯೂ ಜಾನೆಯನವಗಾಹಮಿರಿಸುವಂ ಬೋದನದೊಳ್ || ಶ್ರೀಪತಿಗೆ ಯುದ್ಧಮಲ್ಲ ಮ ಹೀಪತಿಗೆ ನೆಗಟಿ ಪುಟ್ಟ ಪುಟ್ಟಿದನಖಿಳ | ಕ್ಷಾಪಾಲ ಮಾಳಿಮಣಿ ಕಿರ ಕಾಪಾಳಿತ ನಖಮಯೂಖರಂಜಿತ ಚರಣಂ || ಅರಿಕೇಸರಿಯೆಂಬಂ ಸುಂ ದರಾಂಗನತ್ಯಂತ ವಸ್ತುವಂ ಮದಕರಿಯಂ | ಹರಿಯಂ ಪಡಿವಡೆಗುರ್ಚಿದೆ ಕರವಾಳನೆ ತೋಟ ನೃಪತಿ ಗೆಲ್ಲಂಗೊಂಡಂ || ಚಂದ್ರನೆನಿಸುವ ತೇಜಸ್ಸಿನಿಂದ ಕೂಡಿ ತನ್ನ ವಂಶಕ್ಕೆ ಶಿರೋಭೂಷಣನಾಗಿರುವ ಯುದ್ಧಮಲ್ಲನೆಂಬುವನು ಈ ಭೂಮಿಯಲ್ಲಿ ಕೀರ್ತಿವಂತನಾಗಿ ಪ್ರಸಿದ್ಧನಾದನು. ೧೬. ಆತನು ತನ್ನ ಭುಜಬಲದ ವಿಜಯದ ಖ್ಯಾತಿಯನ್ನು ಹೊಂದಿ ಅಧಿಕಬಲನೂ ರಾಜಸಮೂಹದ ರತ್ನಖಚಿತವಾದ ಕಿರೀಟಗಳ ಕಾಂತಿಯಿಂದ ಬೆಳಗಲ್ಪಟ್ಟ ಪಾದವುಳ್ಳವನೂ ಆಗಿ ಸಪಾದಲಕ್ಷ ಭೂಮಿಯನ್ನು ಆಳಿದನು. ೧೭. ಆತನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಬಾವಿಗಳನ್ನು ಎಣ್ಣೆಯಲ್ಲಿ ತುಂಬಿ ಪ್ರತಿದಿನವೂ ಐನೂರಾನೆಗಳನ್ನು ಮಜ್ಜನ ಮಾಡಿಸುತ್ತಾನೆ ಎಂದರೆ ಆತನ ಐಶ್ವರ್ಯಾತಿಶಯವನ್ನು ಏನೆಂದು ಹೇಳುವುದೋ, ೧೮, ಐಶ್ವರ್ಯವಂತನಾದ ಈ ಯುದ್ಧಮಲ್ಲ ಮಹಾರಾಜನಿಗೆ ಕೀರ್ತಿ ಹುಟ್ಟಿದ ಹಾಗೆ ಸಮಸ್ತರಾಜರ ಕಿರೀಟಗಳ ರತ್ನಕಾಂತಿಯಿಂದ ಪೋಷಿತವಾದ ಕಾಲಿನುಗುರುಗಳ ಕಿರಣಗಳಿಂದ ಪ್ರಕಾಶಿಸುತ್ತಿರುವ ಪಾದಗಳನ್ನುಳ್ಳ ೧೯. ಅರಿಕೇಸರಿಯೆಂಬ ಸುಂದರಾಂಗನಾದ ಮಗನು ಹುಟ್ಟಿದನು. ಆ ರಾಜನು ತನಗೆ ಪ್ರತಿಭಟಿಸಿದ ಸೈನ್ಯಕ್ಕೆ ತನ್ನ ಒರೆಯಿಂದ ಹೊರಗೆಳೆದ ಕತ್ತಿಯನ್ನೇ ತೋರಿ ವಿಶೇಷ ಬೆಲೆಬಾಳುವ ವಸ್ತುಗಳನ್ನೂ ಮದ್ದಾನೆಗಳನ್ನೂ ಕುದುರೆಗಳನ್ನೂ ಲಾಭವಾಗಿ: ಪಡೆದನು. ಈ ಅರಿಕೇಸರಿಯು ರಾಷ್ಟ್ರಕೂಟರಾಜನಾದ ನಿರುಪಮದೇವನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳ ಸಮೇತವಾಗಿ ವೆಂಗಿಮಂಡಲವನ್ನು ಗೆದ್ದು ಸ್ವಬಾಹುಬಲದಿಂದ ತನ್ನ ಪ್ರತಿಷ್ಠೆಯನ್ನು ಸಮಸ್ತದಿಕ್ಕಿನ ಗೋಡೆಗಳಲ್ಲಿಯೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy