SearchBrowseAboutContactDonate
Page Preview
Page 75
Loading...
Download File
Download File
Page Text
________________ ೭೦) ಪಂಪಭಾರತಂ ಉ || ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ [ವೃತ್ತಿ] ವಿ ನ್ಯಾಸಮನೇಕ ಲಕ್ಷಣಗುಣಪ್ರಭವ ಮೃದುಪಾದಮಾದ ವಾ | ೬ ಸುಭಗಂ ಕಳಾಕಳಿತಮಂಬ ನೆಗಟಳೆಯನಾಳ ಕಬ್ಬಮಂ || ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ || ಚಂ | ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಲ ಕವಿ ನೃಪನೀತನೊಳ್ಳಿದನೆನಲ್ ದೊರೆಯಲು ನೆಗಟಿವೆತ್ತ ಸ | ತೃವಿಗಳ ಮೋಡಶಾವಪರೋಳಿಯೊಳಂ ಕವಿತಾಗುಣಾರ್ಣವಂ ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮಾ ಗುಣಾರ್ಣವಂ || ೧೦ ಚಂ || ಕತೆ ಪಿರಿದಾದೊಡಂ ಕತೆಯ ಮೆಯ್ಲಿಡಲೀಯದೆ ಮುಂ ಸಮಸ್ತ ಭಾ - ರತಮನಪೂರ್ವಮಾಗೆ ಸಲೆ ಪೇಟ್ಟಿ ಕವೀಶ್ವರರಿಲ್ಲ ವರ್ಣಕಂ | ಕತೆಯೊಳೊಡಂಬಡಂ ಪಡೆಯ ಪೇಳ್ಕೊಡೆ ಪಂಪನೆ ಪೇಟ್ಟುಮಂದು ಪಂ ಡಿತರೆ ತಗುಟ್ಟು ಬಿಚ್ಚಣಿಗೆ ಪೇಲೊಡರ್ಚಿನೀ ಪ್ರಬಂಧಮಂ || ೧೧ ಶೋಭಾಯಮಾನವಾಗಿರುತ್ತದೆ. ೯. ಸಮಸ್ತವಾದ ಅರ್ಥಗಳನ್ನೊಳಗೊಂಡಿರುವುದೂ ಅಲುಕಾರಗಳಿಂದ ಕೂಡಿದುದೂ ಉತ್ತಮವಾದ ವೃತ್ತಿ ವಿನ್ಯಾಸದಿಂದ ಯುಕ್ತವಾದುದೂ ಮೃದುಪದಪಾದಗಳನ್ನುಳ್ಳ ವಾಕ್ಸಂಪತ್ತಿನಿಂದ ಸುಂದರವಾಗಿ ಕಲಾನ್ವಿತವಾದುದೂ ಎನಿಸಿಕೊಂಡಿರುವ ಕಾವ್ಯವನ್ನೂ ಕಸ್ಯೆಯನ್ನೂ ಅರಿಕೇಸರಿಗಲ್ಲದೆ ಅಪಾತ್ರರಾದ ಮತ್ತಾರಿಗೋ ಅರ್ಪಿಸುವುದೇ ? (ಕನೈಯ ವಿಷಯವಾಗಿ ಅರ್ಥಮಾಡುವಾಗ ಅರ್ಥ ಎಂಬ ಶಬ್ದಕ್ಕೆ ಐಶ್ವರ್ಯವೆಂದೂ ವೃತ್ತಿಯೆಂಬ ಶಬ್ದಕ್ಕೆ ನಡವಳಿಕೆಯೆಂದೂ ಪಾದವೆನ್ನುವುದಕ್ಕೆ ಕಾಲು ಎಂದೂ ತಿಳಿಯಬೇಕು. ಕಾವ್ಯದೃಷ್ಟಿಯಿಂದ ವೃತ್ತಿಯೆಂಬ ಶಬ್ದಕ್ಕೆ ಅಭಿದಾ, ವ್ಯಂಜನಾ ಮತ್ತು ಲಕ್ಷಣಾ ಎಂಬ ಶಕ್ತಿಗಳಾಗಲಿ ಕೈಶಿಕೀ, ಭಾರತೀ, ಸಾತ್ವತೀ, ಆರಭಟೀ ಎಂಬ ವೃತ್ತಿಗಳಾಗಲಿ ಆಗಬಹುದು). ೧೦. ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡಿರುವವರ ಸಾಲಿನಲ್ಲಿ ಕವಿಯೆಂದಾಗಲಿ ಸಾಮಾನ್ಯವಾಗಿ ರಾಜರೆಂಬ ಹೆಸರನ್ನು ಮಾತ್ರ ಧರಿಸಿರುವವರ ಗುಂಪಿನಲ್ಲಿ ರಾಜನೆಂದಾಗಲಿ ಕರೆಸಿಕೊಳ್ಳುವುದು ವಿಶೇಷವೇನೂ ಇಲ್ಲ. ಸತ್ಕವಿಗಳ ಸಾಲಿನಲ್ಲಿ ಪಂಪನು ಕವಿತಾಗುಣಾರ್ಣವನೆಂದೂ, ಷೋಡಷರಾಜರ ಶ್ರೇಣಿಯಲ್ಲಿ ಅರಿಕೇಸರಿಯು ಗುಣಾರ್ಣವನೆಂದೂ ಪ್ರಸಿದ್ಧರಾಗಿದ್ದಾರೆ. ೧೧. ಕಥೆಯ ವಸ್ತುವು ಹಿರಿದಾಗಿದ್ದರೂ ಅದರ ವಸ್ತುವಿನ್ಯಾಸವು ನಷ್ಟವಾಗದಂತೆ ಸಮಗ್ರಭಾರತದ ಕತೆಯನ್ನು ಅಪೂರ್ವವಾಗಿ ಹೇಳಿದ ಕವಿಗಳು ಕಳೆದ ಕಾಲದಲ್ಲಿ ಇದುವರೆಗೆ ಯಾರೂ ಇಲ್ಲ. ವರ್ಣನಾಂಶಗಳಾದ ಅಷ್ಟಾದಶ ವರ್ಣನೆಗಳೂ ಕಥಾಂಶಗಳೊಡನೆ ಸಮಂಜಸವಾಗಿ ಹೊಂದಿಕೊಳ್ಳುವಂತೆ ಹೇಳುವುದಾದರೆ ಪಂಪನು ಮಾತ್ರ ಶಕ್ತಿ ಎಂದು ಪಂಡಿತರು ಒಂದೇ ಸಮನಾಗಿ ಹೇಳಿ ಸ್ತೋತ್ರಮಾಡುತ್ತಿರಲು ಈ ಉತ್ತಮ ಕಾವ್ಯವನ್ನು ಹೇಳಲು ತೊಡಗಿದ್ದೇನೆ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy