SearchBrowseAboutContactDonate
Page Preview
Page 718
Loading...
Download File
Download File
Page Text
________________ ಅನುಬಂಧ – ೧ 202 ಕೊಲ್ಲೇಪಾರಾ ದಾನಪತ್ರ ಚಾಳುಕ್ಯ ವಂಶ I ರಣವಿಕ್ರಮಸತ್ಯಾಶ್ರಯ ಪೃಥ್ವಿಪತಿ ಮಹಾರಾಜ ವಿನಯಾದಿತ್ಯ ಯುದ್ಧಮಲ್ಲ T ಅರಿಕೇಸರಿ ಮಧ್ಯಯುಗದ ಇತಿಹಾಸದಲ್ಲಿ ನಾಲ್ಕು ಚಾಲುಕ್ಯ ಕುಲಗಳಿದ್ದವು. ಒಂದನೆಯದು ಬಾದಾಮಿಯದು. ಎರಡನೆಯದು ಕಲ್ಯಾಣಿಯದು. ಮೂರನೆಯದು ವೆಂಗಿಯದು. ನಾಲ್ಕನೆಯದು ಪಂಪ ಮತ್ತು ಸೋಮದೇವರಿಂದ ಉಕ್ತವಾದುದು. ಇವುಗಳಲ್ಲಿ ಬಾದಾಮಿಯ ಚಾಳುಕ್ಯಕುಲದಿಂದ ವೆಂಗಿಯ ಚಾಳುಕ್ಯಕುಲವು ಉತ್ಪನ್ನವಾಯಿತು. ಕಲ್ಯಾಣಿಯ ಚಾಲುಕ್ಯರು ಬಾದಾಮಿಯ ಚಾಲುಕ್ಯರ ವಂಶಜರೆಂದು ತಾವೇ ಹೇಳಿಕೊಂಡಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲ ಮತ್ತು ಕಲ್ಯಾಣಿಯ ಚಾಲುಕ್ಯರ ಕಾಲಗಳಿಗೆ ಮಧ್ಯೆ ರಾಷ್ಟ್ರಕೂಟರು ಆಳಿದರು. ಈ ಎರಡು ಕುಲಗಳನ್ನು ಜೋಡಿಸಿದವನು ಯಾರು ಎಂಬುದು ನಿಶ್ಚಿತವಾಗಿ ತಿಳಿಯದಿದ್ದರೂ ಈ ಎರಡು ಕುಲಗಳಿಗೂ ಸಂಬಂಧವಿತ್ತೆಂದು ಹೇಳುವುದಕ್ಕೆ ಆಧಾರ ಸಿಗುತ್ತದೆ. ವೆಂಗಿಯೂ ಇವುಗಳ ಶಾಖೆಗೇ ಸೇರಿರಬಹುದು. ಇವರ ಸ್ಥಳವೂ ಲಕ್ಷ್ಮೀಶ್ವರಕ್ಕೆ ಅಕ್ಕಪಕ್ಕದಲ್ಲಿದ್ದಿರಬಹುದು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy