SearchBrowseAboutContactDonate
Page Preview
Page 716
Loading...
Download File
Download File
Page Text
________________ ೭೧೧. ಅನುಬಂಧ - ೧ ೧೦. ಬದ್ದೆಗ-ಅರಿಕೇಸರಿಯ ಹಿರಿಯ ಮಗ, ರಾಜಧಾನಿ ಗಂಗಾಧಾರಾ (ಯಶಸ್ತಿಲಕದಿಂದ) ಫೀಟರು ಇದರಲ್ಲಿ ಉಕ್ತವಾಗಿರುವ ಕೆಲವು ಸಂಗತಿಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಚಿಸಿದ್ದಾರೆ. (Dynasties of the Canarese Districts) ಎಂಬ ಗ್ರಂಥದಲ್ಲಿ, ಅವುಗಳನ್ನು ಹೀಗೆ ಸಂಗ್ರಹಿಸಬಹುದು : ನರಸಿಂಹ ಭದ್ರದೇವರು ಏಕವ್ಯಕ್ತಿಗಳು - (ಮುಂದಿನ ಸಂಶೋಧನೆಯಿಂದ ಇದು ಸರಿಯಲ್ಲವೆಂದು ಸಿದ್ಧಾಂತವಾಗಿದೆ) ವಂಶವೃಕ್ಷದಲ್ಲಿ ಬರುವ ನರಸಿಂಹನು ಲಾಳನನ್ನು ಸೋಲಿಸಿದುದನ್ನು ಅವರು ಹೇಳಿಲ್ಲ. ಸಂಗನನ್ನು ಸೋಲಿಸಿದುದೂ ಅವರಿಂದ ಉಕ್ತವಾಗಿಲ್ಲ. ಆದರೆ ರೈಸರು ತಮ್ಮ ಪಂಪಭಾರತದ ಪೀಠಿಕೆಯ ನಾಲ್ಕನೆಯ ಪುಟದ ಅಡಿಟಿಪ್ಪಣಿಯಲ್ಲಿ ಇದನ್ನು ನಮೂದಿಸಿದ್ದಾರೆ. ಫೀಟರು ಇವನ ಹೆಂಡತಿಯು 'ಚಂದ್ರಾನನೆ' ಎಂದು ಹೇಳುತ್ತಾರೆ. ರೈಸರು 'ಜಾತವೆ' ಎಂದಿದ್ದಾರೆ (ಪಂ.ಭಾ.ಪೀಠಿಕೆ). ರಾ. ನರಸಿಂಹಾಚಾರ್ಯರು ಜಾಕವ್ವ ಎಂದೇ ಹೇಳಿದ್ದಾರೆ. ಮೂಲದಲ್ಲಿ ಆ ಭಾಗವು ಉಕ್ತವಾಗಿದೆ. ಚಂದ್ರಾನನಾ ಎಂಬುದು ವಿಶೇಷಣವಿರಬಹುದು. ಅರಿಕೇಸರಿಯ ತಂದೆಯ ಹೆಸರು ಯುದ್ಧಮಲ್ಲನೆಂದು ಫೀಟರು ಹೇಳುತ್ತಾರೆ. ಇದು ಸರಿಯಲ್ಲ. ಏಕೆಂದರೆ ಪಂಪಭಾರತ, ಪರಭಣಿ ತಾಮ್ರಶಾಸನ ವೇಮಲುವಾಡಶಾಸನಗಳಲ್ಲಿ 'ನರಸಿಂಹ' ಎಂದೇ ಹೇಳಿದೆ - ಬದ್ದೆಗನು ಅರಿಕೇಸರಿಯ ಮೊದಲನೆಯ ಮಗನೆಂದು ಸೋಮದೇವನು ತನ್ನ 'ಯಶಸ್ತಿಲಕಚಂಪುವಿನಲ್ಲಿ ತಿಳಿಸಿದ್ದಾನೆ. ಆದುದರಿಂದ ಇವನಿಗೆ ಇನ್ನೂ ಇತರ ಮಕ್ಕಳಿದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಪರಭಣಿಯ ತಾಮ್ರ ಶಾಸನದಲ್ಲಿ ಭದ್ರದೇವನು ಅರಿಕೇಸರಿಯ ಒಬ್ಬನೇ ಮಗನೆಂದು ಉಕ್ತವಾಗಿದೆ. ಪಂಪಭಾರತದಲ್ಲಿ ಬರುವ ಚಾಳುಕ್ಯವಂಶವೃಕ್ಷಕ್ಕೆ ಒಂದನೇ ಅರಿಕೇಸರಿಯ ಕೋಲೇಪಾರಾ ದಾನಪತ್ರವೂ ಎರಡನೆಯ ಅರಿಕೇಸರಿಯ ವೇಮಲವಾಡ ಶಿಲಾ ಲೇಖನವೂ ಮೂರನೆಯ ಅರಿಕೇಸರಿಯ ಪರಭಣಿ ತಾಮ್ರಶಾಸನವೂ ಉಪಷ್ಟಂಭಕವಾಗಿವೆ. ಇವುಗಳಲ್ಲಿರುವ ಈ ಭಾಗವನ್ನು ಮುಂದಿನ ರೀತಿಯಲ್ಲಿ ಚಿತ್ರಿಸಬಹುದು. ಪರಭಣಿಯ ತಾಮ್ರಶಾಸನ ಚಾಳುಕ್ಯವಂಶ (ಆದಿತ್ಯಭವ) ೧. ಯುದ್ಧಮಲ್ಲ ೧. ಸಪಾದಲಕ್ಷ ರಾಜ್ಯವನ್ನು ಆಳುತ್ತಿದ್ದನು.. ೨. ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು. ೩. ಕಲಿಂಗತ್ರಯದೊಡನೆ ವೆಂಗಿಯನ್ನು ಸಂರಕ್ಷಿಸಿದನು. ಅರಿಕೇಸರಿ ನರಸಿಂಹ ೪. ಭದ್ರದೇವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy