SearchBrowseAboutContactDonate
Page Preview
Page 714
Loading...
Download File
Download File
Page Text
________________ ಅನುಬಂಧ - ೧ ೭೦೯ ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನೂ ಭೂಮಿಯನ್ನು ಗೆಲ್ಲಲು ಸಮರ್ಥವಾದ ವಿಜಯ ಭುಜಬಲವುಳ್ಳವನೂ ಆದ ಯುದ್ಧಮಲ್ಲನು ಮಗ. ಇವನ ಮಗ ನರಸಿಂಹನು ನಹುಷ, ಪೃಥು, ಭಗೀರಥ, ನಳರೆಂಬ ಮಹಾಪುರುಷರನ್ನು ಕಡೆಗಾಣಿಸಿದ ಮಹಿಮೆಯುಳ್ಳವನೂ ಜ್ಞಾನದಲ್ಲಿ ಪರಮಾತ್ಮನಂತಿದ್ದವನೂ ಆಗಿ ಹಿರಿಯರ ಆಜ್ಞೆಯನ್ನು ಉಲ್ಲಂಘನೆ ಮಾಡದೆ ಶತ್ರುಸೈನ್ಯವನ್ನು ಅಡಗಿಸಿಕೊಳ್ಳುವುದರಲ್ಲಿ ಅವನ ಕೋಪವು ತಡೆಯಿಲ್ಲದುದಾಗಿದ್ದಿತು. ನರಸಿಂಹನು ಲಾಟದೇಶದ ಮೇಲೆ ನುಗ್ಗಿ ಯುದ್ದಮಾಡಿದ ವಿಷಯವನ್ನು ಕೇಳಿ ಆ ದೇಶದವರು ಆಗ ಸತ್ತವರಿಗೆ ಈಗಲೂ ತರ್ಪಣವನ್ನು ಕೊಡುತ್ತಿರುವರು. ಸಿಂಹದಂತೆ ಕೆರಳಿ ನರಸಿಂಹನು ಯುದ್ದಮಾಡಿದಾಗ ಚಿಮ್ಮಿದ ರಕ್ತವು ಈಗಲೂ ಆಕಾಶದಲ್ಲಿ ಕೆಂಗುಡಿಯು ಮುಸುಕಿದಂತಿದೆ, ಸಪ್ತ ಮಾಲವಗಳನ್ನು ಸುಟ್ಟು ಕರಿಕೇರಿಸಿದ ಜ್ವಾಲೆಗಳು ಅವನ ತೇಜಸ್ಸಿನ ಬಿಳಲುಗಳನ್ನು ಅನುಕರಿಸಿದವು. ವಿಜಯಗಜಗಳೊಡನೆ ಭೂರ್ಜರ ರಾಜ್ಯವನ್ನು ಮುತ್ತಿ ಅದನ್ನು ಗೆದ್ದು ವಿಜಯನನ್ನು ತಿರಸ್ಕರಿಸಿದ್ದಾನೆ. ಸಿಡಿಲೆರಗುವಂತೆ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಉಂಡೆಡೆಯಲ್ಲಿ ಉಣ್ಣದೆ ಕೆಡೆದೆಡೆಯಲ್ಲಿ ಕೆಡೆಯದೆ ಓಡಿಹೋದನು. ಅಲ್ಲದೆ ನರಸಿಂಹನು ತನ್ನ ಕುದುರೆಯನ್ನು ಗಂಗಾನದಿಯಲ್ಲಿ ಮೀಯಿಸಿ ಕಾಳಪ್ರಿಯದಲ್ಲಿ ತನ್ನ ಭುಜವಿಜಯಗರ್ವದಿಂದ ವಿಜಯಸ್ತಂಭವನ್ನು ಸ್ಥಾಪಿಸಿದನು. ಈ ನರಸಿಂಹ ಮನೋನಯನಪ್ರಿಯೆ ಜಾಕವ್ವ, ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳವಳೂ ಆದ ಇವಳು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾದೇವಿಗಿಂತ ಅಗ್ಗಳವಾದವಳು. ಹೊಸದಾಗಿ ಅರಳಿದ ತಾವರೆಯೆಸಳ ಮೇಲಿರುವ ಲಕ್ಷ್ಮಿಯೂ ಈ ಜಾಕವ್ವಯ ಪಕ್ಕದಲ್ಲಿ ಕಾಂತಿಹೀನಳಾಗುತ್ತಾಳೆ ಎಂದ ಮೇಲೆ ಉಳಿದ ಸಾಮಾನ್ಯಸ್ತ್ರೀಯರು ಈಕೆಗೆ ಸಮನಾಗುತ್ತಾರೆಯೇ. ಆ ಜಾಕವ್ವಗೂ ಆ ಭೂವಲ್ಲಭ ನರಸಿಂಹನಿಗೂ ಅತಿವಿಶದ ಯಶೋಮಿತಾನನಾದ ಅರಿಕೇಸರಿ ತನ್ನ ತೇಜೋಗ್ನಿಯಲ್ಲಿ ಮಗ್ನರಾದ ರಿಪುಶಲಭವನ್ನುಳ್ಳವನಾಗಿ ಮಗನಾಗಿ ಹುಟ್ಟಿದನು. ಅವನು ಹುಟ್ಟಿದಾಗ ಆನೆಯ ಮದೋದಕವನ್ನೇ ಬೆಚ್ಚುನೀರಾಗಿ ತಳಿದರು. ಆನೆಯ ಅಂಕುಶದಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದರು, ಆನೆಯ ದಂತದ ತೊಟ್ಟಿಲಿನಲ್ಲಿಟ್ಟು ತೂಗಿದರು. ಆದುದರಿಂದ ಈ ಬಾಲ್ಯದಿಂದಲೇ ಅರಿಕೇಸರಿಯು ಗಜಪ್ರಿಯನೆಂಬುದನ್ನು ತೋರಿಸಿದನು. ತಾನೇ ಪ್ರತ್ಯಕ್ಷ ಇಂದ್ರನೆಂಬಂತೆ ಪ್ರಕಾಶಿಸಿದ ಇಂದ್ರನ ತೋಳೇ ತೊಟ್ಟಿಲಾಗಿ ಬೆಳೆದನು, ಅಮೇಯ ಬಲಶಾಲಿಯೂ ಮನುಜಮಾರ್ತಾಂಡನೂ ಆದ ಇವನಿಗೆ ಬುದ್ಧಿಶಕ್ತಿಯಿಂದಲೂ ಪೌರುಷ ಶಕ್ತಿಯಿಂದಲೂ ಶಾಸ್ತ್ರಪಾರವೂ ಶತ್ರುಸೈನ್ಯಪಾರವೂ ಜೊತೆಯಲ್ಲಿಯೇ ಸಿದ್ಧಿಸಿದುವು. (ನಡುವಿನ) ಉಡುವಣಿ ಹರಿಯುವುದಕ್ಕೆ ಮುಂಚೆಯೇ ಛಲದಿಂದ ಶತ್ರುಸೈನ್ಯವನ್ನು ಚದುರಿಸಿ ಶತ್ರುಸೈನ್ಯದ ರಕ್ತ ಸಮುದ್ರದಲ್ಲಿ ಜಿಗುಳೆ ಬೆಳೆಯುವ ತೆರದಲ್ಲಿ ಬೆಳೆದನು. ಪ್ರತಿಭಟಿಸಿದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿರಲು ಪರಸ್ತ್ರೀಯು ಊರ್ವಶಿಗಿಂತ ಮೇಲಾಗಿದ್ದರೂ ಎಂದೂ ಅವನ ಕಣ್ಣು ಸೋಲುವುದಿಲ್ಲ. ಯುದ್ಧದಲ್ಲಿ ಮೂರುಲೋಕವು ನಿಂತಿದ್ದರೂ ದಾನಮಾಡುವಾಗ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy