SearchBrowseAboutContactDonate
Page Preview
Page 711
Loading...
Download File
Download File
Page Text
________________ ೭೦೬ | ಪಂಪಭಾರತ ಉll ವ್ಯಾಸಮುನಿ ಪ್ರಣತ ಕೃತಿಯಂ ಸಲೆ ಪೇಟ್ಟು ಸತ್ಕವಿ ವ್ಯಾಸ ಸಮಾಗಮಾನ್ವಿತಮನಾದಿಪುರಾಣಮನೆಯ ಪೇಟ್ಟು ವಾ | * ಸುಭಗಂ ಪುರಾಣಕವಿಯುಂ ಧರೆಗಾಗಿರೆಯು ಪೊಣುವೀ ದೇಸಿಗಳುಂತೆ ನಾಡೊವಜನಾದನೊ ಪೇಮ್ ಕವಿತಾಗುಣಾರ್ಣವಂ || ೬೨ ಚoll ಪುದಿದಿರ ರಾಗಮುರ್ಕ ಪೊಸಪೇಟದಲಂಪುಗಳೆಲ್ಲಮೋದಿದ ರ್ಗಿದಅನುಯಾಯಿಗಳೆಸೆವುದಾರ ಗುಣಂ ಸಕಳಾವನೀಶ್ವರ | ರ್ಗದಟನಳುರ್ಕೆ ನೃತ್ಯನಿವಹಕ್ಕೆ ಚದುರ್ ಗಣಿಕಾಜನಕ್ಕೆ ಕುಂ ದದ ನೆಲಸಿರ್ಕೆಯಾ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ || ೬೩ ಮll 4 || ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ ಬಲದೊಳ್ ಮದ್ರಶನತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ | ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ || ೬೪ ಪಂಪನ ಕವಿತಾಗುಣಕ್ಕೆ ಆಸೆಪಟ್ಟು ಅವನ ಮೇಲೆಯ ಹತ್ತಿರಕ್ಕೆ ಬರುವವರೂ ಸರಸ್ವತಿಗೆ ವಿಳಾಸವನ್ನು ಹೊಸದುಮಾಡುವ ಅವನ ಮಾತಿನ ವೈಭವವನ್ನು ಮೀರುವವರೂ ಯಾರೂ ಇಲ್ಲ, ೬೨. ವ್ಯಾಸಮಹರ್ಷಿಗಳಿಂದ ಹೊಗಳಲ್ಪಟ್ಟ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿಯೂ ಪ್ರಸಿದ್ಧರಾದ ಸತ್ಕವಿಗಳ ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿಯೂ ಪಂಪನು ವಾಕ್ಷಂಪತ್ತಿನ ಸೌಂದರ್ಯವುಳ್ಳವನೂ ಪುರಾಣರಚನೆ ಮಾಡಿದ ಕವಿಯೂ ಭೂಮಿಗೆ ಆಗಿರಲು ಹಾಗೆಯೆ; ದೇಸಿಗುಣಗಳೂ ಉನ್ನತವಾಗಿ ಅಭಿವೃದ್ದಿ ಯಾಗುತ್ತಿರಲು ಕವಿತಾಗುಣಾರ್ಣವನು 'ನಾಡ ಒವಜ' - ನಾಡಿನ ಓಜ ಎಂದರೆ ನಾಡಿಗೇ ಆಚಾರ್ಯನೂ ಆದನು. ೬೩. ಭೂಮಂಡಲದಲ್ಲಿ ಈ ನನ್ನ ಕೃತಿಬಂಧವನ್ನು ಓದಿದವರಿಗೆ ವ್ಯಾಪ್ತವಾದ ಸಂತೋಷವೂ ಇದರಂತೆ ನಡೆದುಕೊಂಡವರಿಗೆ ಅಭಿವೃದ್ಧಿಯಾಗುತ್ತಿರುವ ಪ್ರಣಯ ವೈಭವವೂ ಸಮಸ್ತರಾಜಮಂಡಲಕ್ಕೆ ಪ್ರಕಾಶವಾದ ಔದಾರ್ಯಗುಣವೂ ಸೇವಕವರ್ಗಕ್ಕೆ ಪರಾಕ್ರಮಾತಿಶಯವೂ ವೇಶ್ಯಾಜನಕ್ಕೆ ಚಾತುರ್ಯವೂ ಕಡಿಮೆಯಾಗದೆ ನೆಲಸಿರಲಿ. ೬೪. ಚಲದಲ್ಲಿ ದುರ್ಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ ಬಲದಲ್ಲಿ ಶಲ್ಯನೂ ಗುಡೌನ್ನತಿಯಲ್ಲಿ ಭೀಷ್ಮನೂ ಚಾಪವಿದ್ಯಾಕೌಶಲದಲ್ಲಿ ದ್ರೋಣಾಚಾರ್ಯನೂ ಸಾಹಸದ ಮಹಿಮೆಯಲ್ಲಿ ಅರ್ಜುನನೂ ಧರ್ಮದಲ್ಲಿ ಪರಿಶುದ್ಧಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಭಾರತವು ಲೋಕಪೂಜ್ಯವಾಗಿದೆ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy